"ಗುಜರಾತಿಗಿಂತ ಕರ್ನಾಟಕವೇ ಶ್ರೇಷ್ಠವಂತೆ": ಯಾಕೆ ಅಂತೀರಾ...?!

Posted By:
Subscribe to Oneindia Kannada
   ಗುಜರಾತ್ ಗಿಂತ ಕರ್ನಾಟಕ ಶ್ರೇಷ್ಠ ಅಂದ್ರು ಕೆಪಿಸಿಸಿ ಕಾರ್ಯಧಕ್ಷ ದಿನೇಶ್ ಗುಂಡೂರಾವ್ | Oneindia Kannada

   ಗುಜರಾತಿನಲ್ಲಿ ವಿಧಾನಸಭೆ ಚುನಾವಣೆಯ ಹವಾ ಉತ್ತುಂಗಕ್ಕೇರಿದೆ. ಇತ್ತ ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ರಾಜಕೀಯ ರಂಗದಲ್ಲಿ ಸಾಕಷ್ಟು ಹುರುಪು ಮನೆಮಾಡಿದೆ.

   ಡಿ.18 ರಂದು ಗುಜರಾತಿನ 5 ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ಅಭಿವೃದ್ಧಿ ಎಂದೊಡನೆ ಗುಜರಾತ್ ಮಾದರಿ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿರುವ ಕರ್ನಾಟಕದ ಕಾಂಗ್ರೆಸ್ಸಿಗರು, ಗುಜರಾತಿಗಿಂತ ಕರ್ನಾಟಕವೇ ಹೆಚ್ಚು ಪ್ರಗತಿ ಹೊಂದಿದೆ ಎನ್ನುತ್ತಿದ್ದಾರೆ.

   ರಾಜ್ಯದ ಪ್ರತಿಷ್ಠಗೆ ಧಕ್ಕೆ ತರಲು ಬಿಜೆಪಿ ಯತ್ನ: ದಿನೇಶ್ ವಾಗ್ದಾಳಿ

   ಅದಕ್ಕೆ ದಾಖಲೆಗಳನ್ನೂ ಒದಗಿಸಿದ್ದಾರೆ. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಲು ಸಾಲು ಟ್ವೀಟ್ ಗಳ ಮೂಲಕ ಅಭಿವೃದ್ಧಿ ಮಾದರಿಯಲ್ಲಿ ಕರ್ನಾಟಕ ಗುಜರಾತಿಗಿಂತಲೂ ಮುಂದಿದೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

   ಹೌದು ಹಿಂದೂ ಭಯೋತ್ಪಾದನೆ ಇದೆ; ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲ

   ಗುಜರಾತಿಗಿಂತ ಕರ್ನಾಟಕವೇ ಶ್ರೇಷ್ಠ, ಯಾಕೆ ಎಂಬುದಕ್ಕೆ #KarnatakaMarchesAhead ಹ್ಯಾಶ್ ಟ್ಯಾಗ್ ನಲ್ಲಿ ದಿನೇಶ್ ಗುಂಡೂರಾವ್ ಸಾಲು ಸಾಲು ಟ್ವೀಟ್ ಮಾಡಿ ಕಾರಣ ನೀಡಿದ್ದಾರೆ. ನೀವೇ ಓದಿ.

   ಗುಜರಾತ್ ಮಾದರಿ ಎಂಬುದು ಬಿಜೆಪಿ ಉತ್ಪ್ರೇಕ್ಷೆಯಷ್ಟೆ

   ಗುಜರಾತ್ ಮಾದರಿ ಎಂದು ಬಿಜೆಪಿ ಉತ್ಪ್ರೇಕ್ಷೆ ಮಾಡಿದೆಯಷ್ಟೆ. ಅಭಿವೃದ್ಧಿ ಎಂದು ಇಲ್ಲಿ ಬರಿದೇ ಪ್ರಚಾರ ಮಾಡಲಾಗಿದೆಯಷ್ಟೆ. ಆದರೆ ಸಾಮಾಜಿಕ ಪ್ರಗತಿಯ ಬಗ್ಗೆ ಯೋಚಿಸಿದರೆ ಬಿಜೆಪಿಯದು ಕಳಪೆ ಸಾಧನೆಯಷ್ಟೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಯೋಚಿಸಿದೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

   ಗುಜರಾತನ್ನು ಸಂಕಷ್ಟಕ್ಕೆ ಸಿಲುಕಿಸಿದ ಮೋದಿ

   "ಗುಜರಾತಿನ ಜಿಎಸ್ ಡಿಪಿ(gross state domestic product) ಮೋದಿ ಅಧಿಕಾರಕ್ಕೆ ಬರುವ ಮೊದಲೇ ಹೆಚ್ಚಾಗಿತ್ತು. ಆದರೆ ಈಗ ಅದರ ದರ ಶೇ.12.77 ರಿಂದ ಶೇ. 9.92ಕ್ಕೆ ಕುಸಿದಿದೆ. ಅದರರ್ಥ ಬಿಜೆಪಿ ಆಡಳಿತ ನಡೆಸುವಲ್ಲಿ ಸೋತಿದೆ ಎಂದು" ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಅವರು ಕಾಗದದ ಮೇ

   ಲೆಕ್ಕ ಕೊಟ್ಟ ದಿನೇಶ್ ಗುಂಡೂರಾವ್

   ಗುಜರಾತಿನ ಜಿಎಸ್ ಡಿಪಿ 10.27 ಲಕ್ಷ ಕೋಟಿ ರೂ. ಇದ್ದರೆ ನಮ್ಮ ಜಿಎಸ್ ಡಿಪಿ 9.94 ಲಕ್ಷ ಕೋಟಿ ರೂ.ಇದೆ. ನಮ್ಮ ಎನ್ ಎಸ್ ಡಿಪಿ(Net State Domestic Product) 9.40 ಲಕ್ಷ ಕೋಟಿ ರೂ. ಇದ್ದರೆ ಗುಜರಾತಿನದು 8.86 ಲಕ್ಷ ಕೋಟಿ ರೂ. ಇದೆ. ಅಷ್ಟೇ ಅಲ್ಲ, ನಮ್ಮ ತಲಾ ಆದಾಯ ಕೂಡ ಕರ್ನಾಟಕಕ್ಕಿಂತ ಜಾಸ್ತಿ ಇದೆ ಎಂದು ಅವರು ಲೆಕ್ಕವನ್ನೂ ಕೊಟ್ಟಿದ್ದಾರೆ.

   ಹೂಡಿಕೆದಾರರ ಸ್ವರ್ಗ

   ಹೂಡಿಕೆಗೆ ಗುಜರಾತಿಗಿಂತ ಉತ್ತಮ ತಾಣವಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಕರ್ನಾಟಕ ರಾಜ್ಯವು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಿಗಿಂತಲೂ ಹೂಡಿಕೆಯಲ್ಲಿ ಮುಂದಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, 'ಬಡತನದ ಸಂಖ್ಯೆ ನಮ್ಮಲ್ಲಿ ಶೇ.21.9 ಇದ್ದರೆ, ಗುಜರಾತಿನಲ್ಲಿ ಶೇ.27.4 ಇದೆ. ಇದು ಗುಜರಾತಿನಲ್ಲಿ ಬಡತದ ನಿರ್ಮೂಲನೆಗೆ ಯಾವುದೇ ಆದ್ಯತೆ ನೀಡಲಾಗಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.' ಎಂದೂ ಟ್ವೀಟ್ ಮಾಡಿದ್ದಾರೆ.

   ಲಿಂಗಾನುಪಾತದಲ್ಲೂ ನಾವೇ ಮುಂದೆ!

   ನಮ್ಮ ಲಿಂಗಾನುಪಾತ 1000 ಕ್ಕೆ 973 ಮಹಿಳೆಯರಿದ್ದರೆ, ಗುಜರಾತಿನಲ್ಲಿ 1000 ಪುರುಷರಿಗೆ 919 ಮಹಿಳೆಯರಿದ್ದಾರೆ. ಶಿಶು ಮರಣಪ್ರಮಾಣ ಕರ್ನಾಟಕಕ್ಕಿಂತ ಗುಜರಾತಿನಲ್ಲಿ ಹೆಚ್ಚಿದೆ. ಅಪೌಷ್ಠಿಕತೆಯಲ್ಲೂ ಗುಜರಾತೇ ಮುಂದಿದೆ ಎಂದು ಅಂಕಿ-ಸಂಖ್ಯೆಗಳ ಮೂಲಕ ಅವರು ಟ್ವೀಟ್ ಮಾಡಿದ್ದಾರೆ. ಪ್ರಾಥಮಿಕ ಶಾಲೆಯೂ ಗುಜರಾತಿಗಿಂತ ನಮ್ಮಲ್ಲೇ ಹೆಚ್ಚಿದೆ. ಶಿಕ್ಷಣ ನೀಡುವಲ್ಲೂ ನಾವೇ ಮುಂದಿದ್ದೇವೆ ಎಂದಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   KPCC working president Dinesh Gundu Rao defends that Karnataka is more developed than Gujarat. Gujarat Model is an exaggeration by BJP. Karnataka Congress government in Siddaramaiah's leadership marching ahead of Gujarat model he argued. Couple of his tweets embeded!

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ