ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು

|
Google Oneindia Kannada News

ಬೆಂಗಳೂರು, ಜನವರಿ 28: "ನಿಮ್ಮ ಕೀಳು ರಾಜಕೀಯದಲ್ಲಿ ನನ್ನನ್ನು ದಾಳವನ್ನಾಗಿ ಉಪಯೋಗಿಸಬೇಡಿ..." ಹೀಗೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಬಿಜೆಪಿ ಮುಖಂಡ ಅನಂತ್ ಕುಮಾರ್ ಹೆಗಡೆ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಿಂದು ಯುವತಿಯರನ್ನು ಮುಟ್ಟಿದರೆ ಅಂಥವರ ಕೈ ಅಸ್ತಿತ್ವದಲ್ಲಿರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡಿದ್ದರು.

ಟ್ವಿಟ್ಟರ್ ನಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹೆಗಡೆ, 'ಕೇವಲ ವಿವಾದಾತ್ಮಕ ಹೇಳಿಕೆ ನೀಡುವುದ್ನು ಬಿಟ್ಟರೆ ಕರ್ನಾಟಕದ ಬೆಳವಣಿಗೆಯಲ್ಲಿ ನಿಮ್ಮ ಕೊಡುಗೆ ಏನು?' ಎಂದು ಪ್ರಶ್ನಿಸಿದ್ದರು.

ದಿನೇಶ್ ಗುಂಡೂರಾವ್ ವೈಯಕ್ತಿಕ ವಿಚಾರ ಅನಂತ್ ಕುಮಾರ್ ಹೆಗಡೆಗೆ ಯಾಕೆ?ದಿನೇಶ್ ಗುಂಡೂರಾವ್ ವೈಯಕ್ತಿಕ ವಿಚಾರ ಅನಂತ್ ಕುಮಾರ್ ಹೆಗಡೆಗೆ ಯಾಕೆ?

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅನಂತ್ ಕುಮಾರ್ ಹೆಗಡೆ, ನನ್ನ ಸಾಧನೆಯನ್ನು ನಾನು ಖಂಡಿತ ಹೇಳುತ್ತೇನೆ. ಆದರೆ ಅದಕ್ಕೂ ಮೊದಲು ನೀವು ನಿಮ್ಮ ಸಾಧನೆಯ ಬಗ್ಗೆ ಹೇಳಿ. ನೀವು ಮುಸ್ಲಿಂ ಮಹಿಲೆಯ ಹಿಂದೆ ಓಡಿಹೋಗಿದ್ದು ಬಿಟ್ಟರೆ ನಿಮ್ಮ ಸಾಧನೆ ಏಣು ಎಂದು ಪ್ರಶ್ನಿಸಿದ್ದರು.

ಈ ಎಲ್ಲಾ ಬೆಳವಣಿಗೆಯನ್ನು ಕಂಡ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೆಗಡೆ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅಷ್ಟಕ್ಕೂ ಟಬು ಹೇಳಿದ್ದೇನು....

ನನ್ನನ್ನು ಗುರಿಯಾಗಿಸಿದ್ದೇಕೆ?

"ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನನ್ನ ಪತಿಯ ವಿರುದ್ಧ ರಾಜಕೀಯವಾಗಿ ಹೋರಾಡುವುದಕ್ಕೆ ಸಾಧ್ಯವಿಲ್ಲದ ಕೆಲವು ಬಿಜೆಪಿ ನಾಯಕರು ನನ್ನನ್ನು ಗುರಿಯಾಗಿಸಿದ್ದಾರೆ. ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಅವರ ನಂತರ ಇದೀಗ ಅನಂತ ಕುಮಾರ್ ಹೆಗಡೆ ಅವರು ನನ್ನನ್ನು ರಾಜಕೀಯಕ್ಕೆ ಎಳೆದುತಂದಿದ್ದಾರೆ. ಆದರೆ ಈ ವಿಷಯದಲ್ಲಿ ನನ್ನನ್ನು ಎಳೇದು ತರುವ ಅಗತ್ಯವೇ ಇರಲಿಲ್ಲ. ನಾನು ಒಬ್ಬ ಖಾಸಗಿ ವ್ಯಕ್ತಿ, ಇಬ್ಬರು ಹೆಣ್ಣು ಮಕ್ಕಳಲ ತಾಯಿ, ಒಬ್ಬ ಜವಾಬ್ದಾರಿಯುತ ಗೃಹಿಣಿ ಅಷ್ಟೆ.ನನಗೆ ಯಾವುದೇ ರಾಜಕೀಯ ಹುದ್ದೆ, ಜವಾಬ್ದಾರಿ ಇಲ್ಲ"- ಟಬು ರಾವ್

'ಅನಂತ್ ಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಾಯಿಸಲು ಹೋದ ಸಂಸದ''ಅನಂತ್ ಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಾಯಿಸಲು ಹೋದ ಸಂಸದ'

ಭಾರತದ ಮೂಲಭೂತ ತತ್ತ್ವವೇ ಜಾತ್ಯಾತೀತೆ

ಭಾರತದ ಮೂಲಭೂತ ತತ್ತ್ವವೇ ಜಾತ್ಯಾತೀತೆ

"ದಿನೇಶ್ ಗುಂಡೂರಾವ್ ಅವರ ಟ್ವೀಟ್ ಗೆ ಉತ್ತರಿಸಿದ್ದ ಹೆಗಡೆ, ರಾವ್ ಮುಸ್ಲಿಂ ಮಹಿಳೆಯ ಹಿಂದೆ ಓಡಿಹೋಗಿದ್ದಾರೆ ಎಂದರು. ಅದೇ ಅವರ ಸಾಧನೆ ಎಂದರು. ನಾನು ಮುಸ್ಲಿಂ ಆಗಿ ಹುಟ್ಟಿದ್ದು ಸತ್ಯ. ಅದಕ್ಕಿಂತ ಮೊದಲು ನಾನೊಬ್ಬ ಹೆಮ್ಮೆಯ ಭಾರತೀಯಳು. ಭಾರತದ ಸಂವಿಧಾನದ ಮೂಲಭೂತ ತತ್ತ್ವ ಜಾತ್ಯಾತೀತತೆ. ಅದು ಎಲ್ಲರಿಗೂ ವೈಚಾರಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಪೂಜಿಸುವ ಸ್ವಾತಂತ್ರ್ಯವನ್ನು ನೀಡಿದೆ"- ಟಬು ರಾವ್

 'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ! 'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!

ನಾನು ಯಾರನ್ನೂ ನಿಂದಿಸಿಲ್ಲ

ನಾನು ಯಾರನ್ನೂ ನಿಂದಿಸಿಲ್ಲ

"ನಾನು ಯಾವುದೇ ಬಿಜೆಪಿ ಮುಖಂಡರನ್ನು ವೈಯಕ್ತಿಕವಾಗಿ ನಿಂದಿಸಿಲ್ಲ. ಆದರೆ ಅವರು ನನ್ನನ್ನು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ದಾಳವನ್ನಾಗಿ ಬಳಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಅವರಿಗೆ ತಾಕತ್ತಿದ್ದರೆ ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಲಿ, ಸವಾಲು ಹಾಕಲಿ. ಅದನ್ನು ಬಿಟ್ಟು ಒಬ್ಬ ಗೃಹಿಣಿಯ ಸೀರೆ ಹಿಂದೆ ಅಡಗಿ, ಕಲ್ಲೆಸೆಯುವುದು ಯಾವ ಪುರುಷಾರ್ಥ? ಇಂಥ ಅವಾಚ್ಯ ಶಬ್ದಗಳು ಮತ್ತು ಪ್ರಚೋದನಾಕಾರಿ ಹೇಳಿಕೆಗಳು ಒಬ್ಬ ಕೇಂದ್ರ ಸಚವರಿಗೆ ತಕ್ಕುದಲ್ಲ"- ಟಬು ರಾವ್

ಟ್ವಿಟ್ಟರ್ ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ ಹೆಗಡೆ!

ಟ್ವಿಟ್ಟರ್ ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ ಹೆಗಡೆ!

"ನಾನು ಹೆಗಡೆ ಅವರಿಗೆ ಟ್ವಿಟ್ಟರ್ ನಲ್ಲೇ ಉತ್ತರಿಸಲು ಹೋದೆ. ಆದರೆ ಅವರು ನನ್ನನ್ನು ಟ್ವಿಟ್ಟರ್ ನಲ್ಲಿ ಬ್ಲಾಕ್ ಮಾಡಿದ್ದಾರೆ. ಕರ್ನಾಟಕದ ರಾಜಕೀಯ ಇಲ್ಲಿನ ಪ್ರಬುದ್ಧ ಮತ್ತು ಘನವೆತ್ತ ರಾಜಕೀಯ ಮುಖಂಡರಿಂದ ಖ್ಯಾತಿ ಗಳಿಸಿದೆ. ನಾನು ಹೆಗಡೆ ಮತ್ತು ಅವರ ಸಹೋದ್ಯೋಗಿಗಳಲ್ಲಿ ಒಂದು ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಮಹಿಳೆಯರ ವಿರುದ್ಧ ನೀವು ನೀವು ಅಪ್ರಬುದ್ಧ ಹೇಳಿಕೆಗಳಿಂದ ರಾಜ್ಯದ ಮಾನ ಕಳೆಯಬೇಡಿ"- ಟಬು ರಾವ್

English summary
After word war between union inister Ananth Kumar Hegde and KPCC president Dinesh Gundu Rao his wife gives strong reaction to Mr.Hegde on facebook
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X