ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಬಂಡಾಯ ನಾಯಕರಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ

|
Google Oneindia Kannada News

Recommended Video

ಮಂಡ್ಯದಲ್ಲಿ ಬಂಡಾಯವೆದ್ದವರಿಗೆ ಏನು ಕ್ರಮ ಕೈಗೊಳ್ಳಲಾಗತ್ತೆ, ಗೊತ್ತಾ?ಇದು ದಿನೇಶ್ ಗುಂಡುರಾವ್ ಆರ್ಡರ್

ಬೆಂಗಳೂರು, ಏಪ್ರಿಲ್ 09 : 'ಮಂಡ್ಯದ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿದ್ದೇವಿ. ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ದಿನೇಶ್ ಗುಂಡೂರಾವ್ ಅವರು ಸಂವಾದ ನಡೆಸಿದರು. 'ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿಯೇ ಚುನಾವಣಾ ತಂತ್ರ ಹೆಣೆದಿದ್ದೇವೆ. ಅದರಂತೆ ಮೈತ್ರಿ ಪಕ್ಷದ ಅಭ್ಯರ್ಥಿಯೇ ಬಹುಮತದಲ್ಲಿ ಗೆಲ್ಲುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೇಜಸ್ವಿ ಸೂರ್ಯ ಸೇರಿ 22 ಸೀಟು ಗೆಲ್ಲುತ್ತೇವೆ : ಯಡಿಯೂರಪ್ಪತೇಜಸ್ವಿ ಸೂರ್ಯ ಸೇರಿ 22 ಸೀಟು ಗೆಲ್ಲುತ್ತೇವೆ : ಯಡಿಯೂರಪ್ಪ

'ಬಿಜೆಪಿ ಸಂಸದರು ಕರ್ನಾಟಕಕ್ಕೆ ಅನ್ಯಾಯವಾದ ವೇಳೆಯಲ್ಲಿ ಯಾವತ್ತೂ ರಾಜ್ಯದ ಪರವಾಗಿ ನಿಲ್ಲಲಿಲ್ಲ.
ಕೇಂದ್ರ ಸರ್ಕಾರದ ಬಳಿಯೂ ರಾಜ್ಯದ ಪರವಾಗಿ ಮನವಿ ಮಾಡಲಿಲ್ಲ. ಇಂತವರು ಮತ್ತೆ ಸಂಸದರಾದರೆ ಕ್ಷೇತ್ರಗಳ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.

2ನೇ ಹಂತದ ಲೋಕಸಭಾ ಚುನಾವಣೆ : ಜಿದ್ದಾಜಿದ್ದಿನ 6 ಕ್ಷೇತ್ರಗಳು2ನೇ ಹಂತದ ಲೋಕಸಭಾ ಚುನಾವಣೆ : ಜಿದ್ದಾಜಿದ್ದಿನ 6 ಕ್ಷೇತ್ರಗಳು

'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಆದರೂ, ದಕ್ಷಿಣ ಭಾರತದಿಂದ ಸ್ಪರ್ಧಿಸಿರುವುದಕ್ಕೆ ನಮಗೆ ಸಂತಸವಿದೆ' ಎಂದರು....

ಕಾಂಗ್ರೆಸ್‌ಗೆ ಪ್ರಬಲ ಅಸ್ತಿತ್ವವಿದೆ

ಕಾಂಗ್ರೆಸ್‌ಗೆ ಪ್ರಬಲ ಅಸ್ತಿತ್ವವಿದೆ

'ರಾಜಕೀಯ ಪಕ್ಷವೊಂದು ಸದಾ ಏರುಪೇರು ಸನ್ನಿವೇಶವನ್ನು ಕಾಣುತ್ತದೆ. ರಾಜಕೀಯದಲ್ಲಿ ಇಂತಹ ಸಂಗತಿಗಳು ಸಾಮಾನ್ಯ. ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ಪ್ರಬಲ ಅಸ್ತಿತ್ವವಿದೆ. ಚುನಾವಣಾ ಗೆಲುವು ಸೋಲಿನ ಆಧಾರದ ಮೇಲೆ ಇದರ ಅಸ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿ ಹುನ್ನಾರವನ್ನು ಮಾಡುತ್ತಿದೆ

'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಡೆಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ನಾವು ಒಗ್ಗಟ್ಟಾಗಿದ್ದೇವೆ. ರಾಜ್ಯದ ಮೈತ್ರಿ ಸರ್ಕಾರ ಐದು ವರ್ಷದ ಅಧಿಕಾರ ಅವಧಿ ಪೂರೈಸುವುದು ನಿಶ್ಚಿತ' ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆಗಳನ್ನು ಸರಿಮಾಡಿಕೊಳ್ಳುತ್ತೇವೆ

ಸಮಸ್ಯೆಗಳನ್ನು ಸರಿಮಾಡಿಕೊಳ್ಳುತ್ತೇವೆ

'ಮೈತ್ರಿ ವಿಚಾರದಲ್ಲಿ ಕೆಲವು ಕಡೆ ಸಮಸ್ಯೆ ಇದ್ದರೂ ನಾವು ಎಲ್ಲವನ್ನು ಸರಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಪಕ್ಷದೊಳಗಿನ ಸಣ್ಣ-ಪುಟ್ಟ ನಕಾರಾತ್ಮಕ ವಿಚಾರಗಳೇ ಹೆಚ್ಚು ಸುದ್ದಿಯಾಗುತ್ತಿವೆ. ಈ ಕಾರಣಕ್ಕೆ ಮೈತ್ರಿಗೆ ಕಾರ್ಯಕರ್ತರ ಬೆಂಬಲ ಇಲ್ಲ ಎನ್ನವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಉಪ ಚುನಾವಣೆ ಫಲಿತಾಂಶವೇ ವಾಸ್ತವವಾಗಿದೆ' ಎಂದು ಹೇಳಿದರು.

ಭ್ರಮೆ ಸೃಷ್ಟಿಸುವಂತವರಲ್ಲ

ಭ್ರಮೆ ಸೃಷ್ಟಿಸುವಂತವರಲ್ಲ

'ರಾಹುಲ್ ಗಾಂಧಿ ಅವರು ದಲಿತರು, ಹಿಂದುಳಿದವರು, ತುಳಿತಕ್ಕೆ ಒಳಗಾದವರ ಪರವಾದ ಕೆಲಸ ಮಾಡುವ ತುಡಿತ ಇರುವ ನಾಯಕರು. ಬೇರೆಯವರಂತೆ ಪ್ರಚಾರಕ್ಕಾಗಿ ಸುಳ್ಳು ಹೇಳಿ ಭ್ರಮೆ ಸೃಷ್ಟಿಸುವಂತವರಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನೀಡುವುದು ನಿಜವಾದ ನಾಯಕತ್ವದ ಗುಣ. ಇದು ರಾಹುಲ್ ಗಾಂಧಿ ಅವರಲ್ಲಿದೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಹುಲ್ 2 ಕಡೆ ಗೆಲ್ಲುವರು

ರಾಹುಲ್ 2 ಕಡೆ ಗೆಲ್ಲುವರು

'ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ವ್ಯವಸ್ಥಿತ ಪಿತೂರಿ ನಡೆಸಿತು. ಇದೇ ಕಾರಣಕ್ಕೆ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲು ಪ್ರಯತ್ನಿಸಿದರು. ರಾಹುಲ್ ಗಾಂಧಿಯವರು ಎರಡೂ ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತಾರೆ. ರಾಹುಲ್ ಗಾಂಧಿಯವರೇ ಪ್ರಧಾನ ಮಂತ್ರಿ ಆಗಲಿ ಎನ್ನುವುದು ನಮ್ಮ ಬಯಕೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪರವಾದ ವಾತಾವರಣ

'ಇಂದು ಮೋದಿ ಅಲೆಯಿಲ್ಲ. ಬದಲಿಗೆ ಅಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗಿದೆ' ಎಂದು ಹೇಳಿದರು.

ಕಾಂಗ್ರೆಸ್ ಬದ್ಧವಾಗಿದೆ

ಎಲ್ಲಾ ಸಮುದಾಯಗಳಿಗೂ ಕಾಂಗ್ರೆಸ್ ಸಮಾನ ಅವಕಾಶಗಳನ್ನೂ ರಾಜಕೀಯವಾಗಿ ನೀಡಿದೆ. ಆರ್ಥಿಕ ಸಬಲತೆ ಹೆಚ್ಚಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

English summary
KPCC president Dinesh Gundu Rao said that disciplinary action will take against party workers and leaders in Mandya, if they do not support Congress and JD(S) candidate in 2019 lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X