ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕರಾಳ ದಿನ ಎಂದು ದಿನೇಶ್ ಗುಂಡೂರಾವ್ ಹೇಳಿದ್ಯಾಕೆ?

|
Google Oneindia Kannada News

ಬೆಂಗಳೂರು, ನ. 08: ದೇಶದಲ್ಲಿ ನೋಟ್‌ಬ್ಯಾನ್ ಮಾಡಿ ಇಂದಿಗೆ (ನ.08, 2020) ನಾಲ್ಕು ವರ್ಷ. ಇಡೀ ದೇಶದ ಜನರ ಬದುಕನ್ನೇ ಬದಲಿಸಿದ ನೋಟ್‌ಬ್ಯಾನ್ ಕ್ರಮವನ್ನು ಕಾಂಗ್ರೆಸ್ ನಾಯಕರು ಆರಂಭದಲ್ಲಿ ಸ್ವಾಗತಿಸಿದ್ದರು. ಆದರೆ ಯಾವಾಗ ಅದು ಮಧ್ಯಮವರ್ಗ ಹಾಗೂ ಕೆಳ ವರ್ಗದ ಜನರ ಸ್ಥಿತಿಯನ್ನು ಬದಲಿಸಿತೊ ಆಗ ಕಾಂಗ್ರೆಸ್ ನಾಯಕರು ನೋಟ್ ಬ್ಯಾನ್ ವಿರೋಧಿಸಲು ಶುರು ಮಾಡಿದ್ದರು.

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

ಇದೀಗ ನೋಟ್‌ಬ್ಯಾನ್‌ಗೆ ನಾಲ್ಕು ವರ್ಷ ತುಂಬಿರುವ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮೋದಿ ಅವರ ಸ್ವಪ್ರತಿಷ್ಠೆ ಮತ್ತು ಆತ್ಮರತಿಯ ಪ್ರತೀಕದ ಸಂಕೇತವಾಗಿ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದ ನೋಟ್ ಬಂಧಿಗೆ ಇಂದು ನಾಲ್ಕನೇ ವರ್ಷ. ಕಪ್ಪುಹಣ ವಾಪಾಸ್ ತರುವ ಕಥೆ ಕಟ್ಟಿ, ನೋಟ್ ಬ್ಯಾನ್ ಮೂಲಕ ಜನರ ಬದುಕನ್ನೇ ಬೀದಿಗೆ ತಂದ ಪ್ರಧಾನಿ ಮೋದಿ ಅವರಿಗೆ ಈ ದಿನವನ್ನು ತಮ್ಮ ಸಾಧನೆಯ ದಿನವೆಂಬಂತೆ ಆಚರಿಸಿಕೊಳ್ಳುವ ಧೈರ್ಯವಿದೆಯೇ? ಎಂದು ದಿನೇಶ್ ಗುಂಡೂರಾವ್ ಅವರು ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಪ್ರಧಾನಿ ಮೋದಿ ಅವರಿಗೆ ದೂರದೃಷ್ಟಿಯಿಂದ ಎಂದು ದಿನೇಶ್ ಗುಂಡೂರಾವ್ ಅವರು ಕಿಡಿ ಕಾರಿದ್ದಾರೆ. ದೂರದೃಷ್ಟಿಯಿಲ್ಲದ ನಾಯಕನೊಬ್ಬನ ಮೂರ್ಖತನದ ನಿರ್ಧಾರ ಈ ನೋಟ್‌ಬ್ಯಾನ್‌ ಎಂಬುದನ್ನು ಜಗತ್ತಿಗೇ ತೋರಿಸಿದ ದಿನವಿದು ಎಂದು 2016ರ ನವೆಂಬರ್ 8ನ್ನು ನೆನಪಿಸಿಕೊಂಡಿದ್ದಾರೆ. ಹೀಗಾಗಿ ನ.8 ಭಾರತದ ಪಾಲಿಗೆ ಎಂದೆಂದಿಗೂ ಕರಾಳ ದಿನವಾಗಿ ಉಳಿಯಲಿದೆ ಎಂದು ಅವರು ವಿಷಾಧಿಸಿದ್ದಾರೆ.

dinesh gundu rao opinioned that november 8 is the darkest day ever because of note ban

ಅಂದಹಾಗೆ, ಕಪ್ಪುಹಣ ಮರಳಿ ತರುವ ತೌಡು ಕುಟ್ಟಿ ಜನರಲ್ಲಿ ಭ್ರಮೆ ಹುಟ್ಟಿಸಿದ್ದ ಮೋದಿ, ನೋಟ್ ಬ್ಯಾನ್ ಮಾಡಿ ಒಂದೇ ಒಂದು ರೂಪಾಯಿ ಕಪ್ಪುಹಣ ತಂದ ಉದಾಹರಣೆ ತೋರಿಸಲಿ ಎಂದು ಬಿಜೆಪಿಗೆ ದಿನೇಶ್ ಗುಂಡೂರಾವ್ ಅವರು ಸವಾಲು ಹಾಕಿದ್ದಾರೆ.

English summary
Four years for note ban in India, in this time kpcc former president Dinesh Gundu Rao opinioned about note ban in India. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X