ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಬಿಡುಗಡೆಗಾಗಿ ಹೈಕೋರ್ಟ್‌ಗೆ ದಿಗ್ವಿಜಯ್ ಸಿಂಗ್!

|
Google Oneindia Kannada News

ಬೆಂಗಳೂರು, ಮಾರ್ಚ್ 18 : ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಶಾಸಕರನ್ನು ಬಿಡುಗಡೆಗೊಳಿಸಲು ಕೋರಿ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್‌ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ.

ಯಲಹಂಕ ಬಳಿಯ ರಮಡಾ ಹೋಟೆಲ್‌ನಲ್ಲಿ ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಹೋಟೆಲ್‌ಗೆ ಕರ್ನಾಟಕದ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಶಾಸಕರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುತ್ತಿಲ್ಲ.

ಮಧ್ಯಪ್ರದೇಶ ಸರ್ಕಾರ ಉಳಿಸಲು ಅಖಾಡಕ್ಕೆ ಇಳಿದ ಡಿ. ಕೆ. ಶಿವಕುಮಾರ್!ಮಧ್ಯಪ್ರದೇಶ ಸರ್ಕಾರ ಉಳಿಸಲು ಅಖಾಡಕ್ಕೆ ಇಳಿದ ಡಿ. ಕೆ. ಶಿವಕುಮಾರ್!

ಬುಧವಾರ ಶಾಸಕರನ್ನು ಭೇಟಿ ಮಾಡಲು ಮಧ್ಯಪ್ರದೇಶದಿಂದ ದಿಗ್ವಿಜಯ್ ಸಿಂಗ್ ಆಗಮಿಸಿದ್ದರು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ಸಿಂಗ್ ಸ್ಥಳದಲ್ಲಿ ಧರಣಿ ಕುಳಿತರು. ಪೊಲೀಸರು ಬಲವಂತದಿಂದ ಅವರನ್ನು ವಶಕ್ಕೆ ಪಡೆದರು.

ಕರ್ನಾಟಕ ಪೊಲೀಸರದ್ದು ಹಿಟ್ಲರ್ ನೀತಿ; ಕಮಲನಾಥ್ ಕಿಡಿ ಕರ್ನಾಟಕ ಪೊಲೀಸರದ್ದು ಹಿಟ್ಲರ್ ನೀತಿ; ಕಮಲನಾಥ್ ಕಿಡಿ

Digvijaya Singh To Move Karnataka HC For Release Of Congress MLAs

ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ದಿಗ್ವಿಜಯ್ ಸಿಂಗ್‌ರನ್ನು ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಬಳಿಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿಯಾಗಿ ಶಾಸಕರ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಸುಪ್ರೀಂ ಅಂಗಳ ತಲುಪಿದ ಮಧ್ಯಪ್ರದೇಶ ರಾಜಕೀಯ ಹೈಡ್ರಾಮಸುಪ್ರೀಂ ಅಂಗಳ ತಲುಪಿದ ಮಧ್ಯಪ್ರದೇಶ ರಾಜಕೀಯ ಹೈಡ್ರಾಮ

ಶಾಸಕರನ್ನು ಭೇಟಿ ಮಾಡಲೇಬೇಕು ಎಂದು ದಿಗ್ವಿಜಯ್ ಸಿಂಗ್ ಪಟ್ಟು ಹಿಡಿದಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಶಾಸಕರ ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲು ಮುಂದಾಗಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ನಮ್ಮ ಶಾಸಕರನ್ನು ಬಿಜೆಪಿ ಅಪಹರಣ ಮಾಡಿದೆ ಎಂದು ದೂರಿದೆ. ಮುಖ್ಯಮಂತ್ರಿ ಕಮಲನಾಥ್ ಬಹುಮತ ಸಾಬೀತು ಮಾಡಲು ಸೂಚಿಸಬೇಕು ಎಂದು ಬಿಜೆಪಿ ಸುಪ್ರೀಂ ಮೊರೆ ಹೋಗಿದೆ.

16 ಶಾಸಕರು ನಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಗುರುವಾರ ಬೆಳಗ್ಗೆ 10.30ಕ್ಕೆ ಕೈಗೆತ್ತಿಕೊಳ್ಳಲಿದೆ.

English summary
Madhya Pradesh rebel Congress MLA's lodged in Ramada hotel in Bengaluru. Congress leader Digvijaya Singh planning to move Karnataka High Court for the release Congress MLA's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X