ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಗ್ರಂಥಾಲಯ ಆರಂಭ; ಉಚಿತವಾಗಿ ಪುಸ್ತಕ ಓದಿ

|
Google Oneindia Kannada News

ಬೆಂಗಳೂರು, ನವೆಂಬರ್ 06: ಪುಸ್ತಕ ಪ್ರೇಮಿಗಳಿಗಾಗಿ ಸಾರ್ವಜನಿಕ ಗ್ರಂಥಾಲಯವು ಡಿಜಿಟಲ್ ಗ್ರಂಥಾಲಯವನ್ನು ಆರಂಭ ಮಾಡಿದೆ. ನೋಂದಣಿ ಮಾಡಿಕೊಳ್ಳುವ ಮೂಲಕ ಪುಸ್ತಕ, ಸಂಶೋಧನಾ ವರದಿ ಮುಂತಾದವುಗಳನ್ನು ಜನರು ಓದಲು ಅವಕಾಶ ನೀಡಲಾಗಿದೆ.

ಸಾರ್ವಜನಿಕ ಗ್ರಂಥಾಲಯವು ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮುಖ್ಯ ಗ್ರಂಥಾಲಯದ ಅಧಿಕಾರಿಗಳು ಕರೆ ನೀಡಿದ್ದಾರೆ.

ಇನ್ನು ಕನ್ನಡದಲ್ಲಿಯೂ ವಿಜ್ಞಾನ ಕಲಿಕೆ: ಕನ್ನಡ ಭಾಷೆಯಲ್ಲಿ ಪಿಸಿಎಂಬಿ ಪುಸ್ತಕ ಇನ್ನು ಕನ್ನಡದಲ್ಲಿಯೂ ವಿಜ್ಞಾನ ಕಲಿಕೆ: ಕನ್ನಡ ಭಾಷೆಯಲ್ಲಿ ಪಿಸಿಎಂಬಿ ಪುಸ್ತಕ

ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿ ಪಡಿಸಿರುವ e-Sarvajanika Grantalaya (ಇ-ಸಾರ್ವಜನಿಕ ಗ್ರಂಥಾಲಯ) ಮೊಬೈಲ್ ಅಪ್ಲಿಕೇಶನ್ ಹಾಗೂ ಜಾಲತಾಣ ಮೂಲಕ ಪುಸ್ತಕಗಳನ್ನು ಓದಬಹುದಾಗಿದೆ.

Digital Library Now Available For Readers

ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು, ವೆಬ್ ಸೈಟ್‌ಗೆ ಭೇಟಿ ನೀಡಿ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಮೊಬೈಲ್, ಕಂಪ್ಯೂಟರ್, ಲ್ಯಾಪ್‍ ಟಾಪ್, ಟ್ಯಾಬ್ ಮೂಲಕ ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ.

ಸಾಹಿತ್ಯಪ್ರಿಯರಿಗೆ ಖುಷಿ ಸುದ್ದಿ ನೀಡಿದ ಸರ್ಕಾರ: ಗ್ರಂಥಾಲಯ ತೆರೆಯಲು ಅನುಮತಿಸಾಹಿತ್ಯಪ್ರಿಯರಿಗೆ ಖುಷಿ ಸುದ್ದಿ ನೀಡಿದ ಸರ್ಕಾರ: ಗ್ರಂಥಾಲಯ ತೆರೆಯಲು ಅನುಮತಿ

ಡಿಜಿಟಲ್ ಗ್ರಂಥಾಲಯದಲ್ಲಿ 1 ಲಕ್ಷಕ್ಕೂ ಹೆಚ್ಚು ಇ-ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಸಿಇಟಿ, ನೀಟ್, ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳಿವೆ. ಸಿಬಿಎಸ್‌ಸಿ, ಐಸಿಎಸ್‌ಇ, ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು ಸಹ ಇವೆ.

ಇ–ಗ್ರಂಥಾಲಯ ಸ್ಥಾಪನೆ 1 ಕೋಟಿ ರು ನೀಡಿದ ಸಂಸದ ಅನಂತಕುಮಾರ್ಇ–ಗ್ರಂಥಾಲಯ ಸ್ಥಾಪನೆ 1 ಕೋಟಿ ರು ನೀಡಿದ ಸಂಸದ ಅನಂತಕುಮಾರ್

Recommended Video

BJP ಯುವ ಮೋರ್ಚಾ ಕಾರ್ಯಕರ್ತರ ಹೋರಾಟ!! | Arnab Goswami | Oneindia Kannada

ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿರುತ್ತದೆ. ಒಮ್ಮೆ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಪುಸ್ತಕಗಳನ್ನು ಓದಬಹುದಾಗಿದೆ.

English summary
Now people can read book, magazines in the digital platform. Digital library now available for readers, you should register for this for reading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X