ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಅಂಕಪಟ್ಟಿ ಇನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತ

|
Google Oneindia Kannada News

ಬೆಂಗಳೂರು, ಜನವರಿ 7: ಮೂಲ ಅಂಕಪಟ್ಟಿಗಳನ್ನು ಕೊಂಡೊಯ್ಯುವಾಗ ಅವು ಕಳೆದುಹೋದರೆ ಮರಳಿ ಅವುಗಳನ್ನು ದಕ್ಕಿಸಿಕೊಳ್ಳುವ ಕಷ್ಟ ಇನ್ನು ಮುಂದೆ ಬರುವುದಿಲ್ಲ. ಸರ್ಕಾರದ ವಿವಿಧ ಇಲಾಖೆಗಳಿಂದ ಪಡೆದುಕೊಳ್ಳುವ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸುವಂತೆಯೇ ವಿದ್ಯಾರ್ಥಿಗಳು ಕೂಡ ತಮ್ಮ ಅಂಕಪಟ್ಟಿ ಮತ್ತು ದಾಖಲೆಗಳನ್ನು ಇನ್ನು ಮುಂದೆ ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸಬಹುದು.

ಆಧಾರ್, ಪಾನ್ ಕಾರ್ಡ್, ಚಾಲನಾ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ಸರ್ಕಾರಿ ಸ್ವಾಮ್ಯದ ಡಿಜಿ ಲಾಕರ್ ಆಪ್‌ನಲ್ಲಿ ಸುರಕ್ಷಿತವಾಗಿ ಇರಿಸಬಹುದಾಗಿದೆ. ಅದರಂತೆ ಶೈಕ್ಷಣಿಕ ದಾಖಲೆಗಳ ಭದ್ರತೆಗೂ ಡಿಜಿ ಲಾಕರ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

'ಮೇ'ನಲ್ಲಿ PUC, 'ಜೂನ್‌'ನಲ್ಲಿ SSLC ಪರೀಕ್ಷೆ: ಸುರೇಶ್ ಕುಮಾರ್ 'ಮೇ'ನಲ್ಲಿ PUC, 'ಜೂನ್‌'ನಲ್ಲಿ SSLC ಪರೀಕ್ಷೆ: ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿಯಿಂದ ಉನ್ನತ ಶಿಕ್ಷಣದ ಕೊನೆಯ ಹಂತದವರೆಗೂ ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಇರಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಯಾರೂ ತಮ್ಮ ದಾಖಲೆಗಳು ಕಳೆದು ಹೋಗಬಹುದು ಅಥವಾ ನಕಲಿಯಾಗಬಹುದು ಎಂದು ಭಯಪಡುವ ಅಗತ್ಯವಿಲ್ಲ. ಕಾಗದ ರೂಪದ ದಾಖಲೆಗಳು ಅಗತ್ಯ ಬೀಳುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಮುಂದೆ ಓದಿ.

ಖಾಸಗಿ ಶಾಲೆಗಳ ಶುಲ್ಕ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸುರೇಶ್ ಕುಮಾರ್!ಖಾಸಗಿ ಶಾಲೆಗಳ ಶುಲ್ಕ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸುರೇಶ್ ಕುಮಾರ್!

ದಾಖಲೆಗಳು ಸುರಕ್ಷಿತ

ದಾಖಲೆಗಳು ಸುರಕ್ಷಿತ

'ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ 'ಶೈಕ್ಷಣಿಕ ಡಿಜಿ ಲಾಕರ್' ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ದಾಖಲೆಗಳು ಸುರಕ್ಷಿತವಾಗಿ ಇರಲಿದೆ. ಇನ್ನು ಮುಂದೆ ಕಾಗದ ರೂಪದ ಯಾವುದೇ ಶೈಕ್ಷಣಿಕ ದಾಖಲೆಗಳು ಅಗತ್ಯವಿರುವುದಿಲ್ಲ' ಎಂದು ಅಶ್ವತ್ಥನಾರಾಯಣ ಅವರು ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಬುಧವಾರ ಸಭೆಯ ಬಳಿಕ ತಿಳಿಸಿದರು.

ವ್ಯವಸ್ಥೆಗೆ ಸೇರುವುದು ಕಡ್ಡಾಯ

ವ್ಯವಸ್ಥೆಗೆ ಸೇರುವುದು ಕಡ್ಡಾಯ

'ಡಿಜಿ ಲಾಕರ್ ವ್ಯವಸ್ಥೆಯ ಸಮರ್ಪಕ ಜಾರಿಗೆ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಅದರ ನೇತೃತ್ವವನ್ನು ನಾನೇ ವಹಿಸಲಿದ್ದೇನೆ. ಕಾರ್ಯಕ್ರಮ ಅನುಷ್ಠಾನ ಪ್ರಗತಿಯ ಪರಿಶೀಲನೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಸರ್ಕಾರಿ ಅಥವಾ ಖಾಸಗಿ, ಪದವಿ ಪ್ರದಾನ ಮಾಡುವ ಯಾವುದೇ ವಿಶ್ವವಿದ್ಯಾಲಯ, ಕಾಲೇಜು, ಡೀಮ್ಡ್ ವಿ.ವಿಗಳು ಕಡ್ಡಾಯವಾಗಿ ಈ ವ್ಯವಸ್ಥೆಗೆ ಸೇರಿಕೊಳ್ಳಬೇಕಾಗುತ್ತದೆ' ಎಂದು ಹೇಳಿದರು.

ಅಂಕಪಟ್ಟಿಗಳ ಡಿಜಿಟಲೀಕರಣ

ಅಂಕಪಟ್ಟಿಗಳ ಡಿಜಿಟಲೀಕರಣ

'ರಾಜ್ಯದಲ್ಲಿ 2003 ರಿಂದ ಎಸ್ಸೆಸ್ಸೆಲ್ಸಿ ಮತ್ತು 2008ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂಕಪಟ್ಟಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಕಾಗದ ರೂಪದಲ್ಲಿ ಮುದ್ರಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದರೂ, ಮೂಲ ದತ್ತಾಂಶ ನಮ್ಮ ಬಳಿ ಸಂಗ್ರಹವಾಗಿದೆ. ಅವುಗಳನ್ನು ಕೂಡ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಪೋರ್ಟಲ್‌ಗೆ ಅಪ್ಲೋಡ್ ಮಾಡಲಾಗುವುದು' ಎಂದರು.

Recommended Video

ಎರಡನೇ ಪಂದ್ಯದಲ್ಲಿ ಆದ ಎಡವಟ್ಟಿನಿಂದ ಬುದ್ದಿ ಕಲಿತ Australia | Oneindia Kannada
ಕೆವೈಸಿ ದಾಖಲೆ ಅಪ್ಲೋಡ್

ಕೆವೈಸಿ ದಾಖಲೆ ಅಪ್ಲೋಡ್

ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಆಧಾರ್ ಸಂಖ್ಯೆ ಮೂಲಕ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲಿ ಕೆವೈಸಿ ಭರ್ತಿ ಮಾಡಿ ಅಪ್ಲೋಡ್ ಮಾಡಿದ ನಂತರ ಎಲ್ಲ ದಾಖಲೆಗಳನ್ನು ಕೂಡ ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಡಿಜಿಟಲ್ ಸಹಿ ಸಮೇತ ಪೋರ್ಟಲ್‌ಗೆ ಅಪ್ಲೋಡ್ ಮಾಡಬೇಕಾಗುತ್ತದೆ' ಎಂದು ಮಾಹಿತಿ ನೀಡಿದರು.

English summary
Karnataka government to introduce DG Locker system in education to secure students documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X