ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫೀ ಓಕೆ, ಬೆರಳು ತೋರೋದೇಕೆ:ಸುರಕ್ಷತಾ ಟಿಪ್ಸ್‌ ಕೊಟ್ಟ ಐಪಿಎಸ್‌ ರೂಪಾ

By Nayana
|
Google Oneindia Kannada News

ಬೆಂಗಳೂರು, ಜು.3: ಸೆಲ್ಪೀ ತೆಗೆದುಕೊಳ್ಳುವುದು ಓಕೆ ಆದರೆ ಬೆರಳು ಯಾಕೆ ತೋರಿಸುತ್ತೀರಾ ಫೋಟೋ ಸೈಬರ್‌ ಖದೀಮರ ಕೈಗೆ ಸಿಕ್ಕರೆ ಬ್ಯಾಂಕ್‌ ಖಾತೆಗೆ ಕನ್ನಗ್ಯಾರಂಟಿ.

ಸೈಬರ್‌ ಖದೀಮರಿಂದ ಮೋಸಕ್ಕೊಳಗಾಗದಂತೆ ಜಾಗೃತಿ ಮೂಡಿಸುವ ಮತ್ತು ಎಚ್ಚರಿಸುವ ವಿಡಿಯೋವನ್ನು ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಸೆಲ್ಫೀ ನಿಷೇಧಿತ ವಲಯಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸೂಚನೆ ಸೆಲ್ಫೀ ನಿಷೇಧಿತ ವಲಯಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸೂಚನೆ

ಸೆಲ್ಫೀ ಫೋಟೊ ತೆಗೆಯುವಾಗ ವಿಕ್ಟರಿ ಮಾರ್ಕ್‌ಗಾಗಿ ಎರಡು ತೋರು ಬೆರಳುಗಳನ್ನು ಇಂಗ್ಲಿಷ್‌ ಅಕ್ಷರ ವಿ ಆಕಾರದಲ್ಲಿ ತೋರಿಸುವುದು, ಡನ್‌ ಎಂದು ಹೇಳಲು ಹೆಬ್ಬೆರಳನ್ನು ತೋರಿಸಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಈ ವಿಡಿಯೋ ಹೇಳುತ್ತದೆ.

ಸದ್ಯ ಲಭ್ಯವಿರುವ ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಾವು ಅಪ್‌ಲೋಡ್‌ ಮಾಡಿದ ಬೆರಳುಗಳ ಮೂಲಕ ಬರಳಿನ ಗುರುತುಗಳನ್ನು ಪತ್ತೆ ಹಚ್ಚಿ ತಂತ್ರಜ್ಞಾನದ ನೆರವಿನಿಂದಲೇ ಅದೇ ರೀತಿಯ ಬೆರಳಚ್ಚನ್ನು ಮರು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕಬಹುದು ಎನ್ನುವುದು ವಿಡಿಯೋದ ಸಾರಾಂಶವಾಗಿದೆ.

DIG Roopa warns fingers shouldnt be shown in selfie!

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಐಜಿಪಿ ಮಟ್ಟದ ಅಧಿಕಾರಿ ರೂಪಾ ಅವರು ಇದನ್ನು ಟ್ವೀಟ್‌ ಮಾಡಿದ್ದಾರೆ. ಸೆಲ್ಫೀ ತೆಗೆದುಕೊಳ್ಳಿ ಆದರೆ ಅದರ ಜತೆಗೆ ಕೈಬೆರಳನ್ನು ತೋರಿಸುವುದನ್ನು ಬಿಡಿ ಎಂದಿದ್ದಾರೆ.

English summary
State prison wing Deputy inspector general of Police D.Roopa has warned in her tweeter account that fingers identification in selfie pictures could be misused by cyber criminals to access bank accounts and other datas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X