ಗೌರಿ ಹತ್ಯೆ ವಿರೋಧಿ ಹೋರಾಟದಲ್ಲಿ ಕಣ್ಸೆಳೆದ ವಿಭಿನ್ನ ಪ್ರತಿಭಟನೆಗಳು

Subscribe to Oneindia Kannada
   Gauri Lankesh: Thousands of People Gather for I am Gauri Protest | Oneindia Kannada

   ಬೆಂಗಳೂರು, ಸೆಪ್ಟೆಂಬರ್ 12: ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಸಮಾವೇಶದಲ್ಲಿ ಹಲವು ವಿಶೇಷತೆಗಳು ಜನರ ಗಮನ ಸೆಳೆದವು.

   In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

   ರೈಲ್ವೇ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ನಡೆದ ಜಾಥಾ, ನಂತರ ನಡೆದ ಸಮಾವೇಶದಲ್ಲಿ ಆಕರ್ಷಕ ಛತ್ರಿಯ ಪ್ರತಿಭಟನಾ ಕಲಾಕೃತಿ, ಕಪ್ಪು ಬಟ್ಟೆಯಲ್ಲಿ ಮೈ ಮುಚ್ಚಿಕೊಂಡ ಕಲಾವಿದ, ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿ ತನ್ನ ಪ್ರತಿಭಟನೆ ತೆರೆದಿಟ್ಟವರಿದ್ದರು.

   ಬೆಂಗಳೂರಿನಲ್ಲಿ ಮೊಳಗಿದ 'ನಾನು ಗೌರಿ, ನಾವೆಲ್ಲಾ ಗೌರಿ' ಘೋಷಣೆ

   ಹೀಗೆ ಸಮಾವೇಶದ ಹಿನ್ನಲೆಯಲ್ಲಿ ಕಣ್ಸೆಳೆದ ಕೆಲವು ಅಂಶಗಳು, ಅಲ್ಲಿಗೆ ಬಂದವರ ಅಭಿಪ್ರಾಯಗಳು ಇಲ್ಲಿವೆ..

    ಕಲಾವಿದನ ಕುಂಚದಲ್ಲಿ ಅರಳಿದ ಪ್ರತಿಭಟನೆ

   ಕಲಾವಿದನ ಕುಂಚದಲ್ಲಿ ಅರಳಿದ ಪ್ರತಿಭಟನೆ

   ಇನ್ನು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕಪ್ಪು ಛತ್ರಿಗಳಿಗೆ ಬಿಳಿ ಬಣ್ಣ ಬಳಿದು ಕಲಾವಿದರೊಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. "ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿರುವುದಕ್ಕೆ ಈ ರೀತಿ ಕಪ್ಪು ಛತ್ರಿಗೆ ಬಿಳಿ ಬಣ್ಣ ಬಳಿದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು," ಎನ್ನುತ್ತಾರೆ ಗದಗದಿಂದ ಬಂದಿರುವ ಕಲಾವಿದ ಪೌರ್ವತ್ ಗೌಡರು.
   "ಇವತ್ತು ವ್ಯಂಗ್ಯ ಚಿತ್ರ ಬರೆದರೆ ಹತ್ಯೆ ಮಾಡ್ತಾರೆ. ಮಾನವೀಯತೆ ಇಲ್ಲದ ಇನ್ನೊಂದು ಜನಾಂಗ ನಾವಾಗಬಾರದು. ಈ ಕಾರಣಕ್ಕೆ ಈ ಪ್ರತಿಭಟನೆ," ಎಂಬುದು ಅವರ ನಿಲುವು.

    ಮೈ ಪೂರ್ತಿ ಕಪ್ಪು ಬಟ್ಟೆ

   ಮೈ ಪೂರ್ತಿ ಕಪ್ಪು ಬಟ್ಟೆ

   ಸೆಂಟ್ರಲ್ ಕಾಲೇಜಿನಲ್ಲಿ ಇನ್ನೊಬ್ಬರು ಪ್ರತಿಭಟನಾರ್ಥಿ ಮೈ ತುಂಬಾ ಕಪ್ಪು ಬಟ್ಟೆ ಧರಿಸಿ ಹತ್ಯೆಯನ್ನು ವಿರೋಧಿಸಿ ನಡೆಸಿದ ಸಮಾವೇಶದಲ್ಲಿ ಪಾಲ್ಗೊಂಡರು. ಬಾಗಲಕೋಟೆಯಿಂದ ಆಗಮಿಸಿದ್ದ ಇವರು ಸಮಾವೇಶಕ್ಕೆ ಬಂದಿದ್ದವರ ಗಮನ ಸೆಳೆದರು.

   ಮುಖಮುಚ್ಚಿ ಪ್ರತಿಭಟನೆ

   ಮುಖಮುಚ್ಚಿ ಪ್ರತಿಭಟನೆ

   ಇನ್ನೊಬ್ಬರು ರೈಲ್ವೇ ನಿಲ್ದಾಣದಿಂದ ಸೆಂಟ್ರಲ್ ಕಾಲೇಜುವರೆಗೂ ಅರ್ಧಕ್ಕೆ ಮುಖ ಮುಚ್ಚಿಕೊಂಡು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಕಾಗೋಡಿನವರಾದ ಇವರು, "ಧ್ವನಿಯನ್ನು ಹತ್ತಿಕ್ಕಿ ಕೊಲೆ ಮಾಡಿದ್ದಾರೆ. ಇದರಲ್ಲಿ ಪರೋಕ್ಷವಾಗಿ ನಾವೂ ಪಾಲ್ಗೊಂಡಿದ್ದೇವೆ ಎಂದು ಅಸಹ್ಯವಾಗುತ್ತಿದೆ. ಈ ಸಮಾಜದ ಬಗ್ಗೆ ನನಗೆ ಅಸಹ್ಯ ಮೂಡಿದೆ. ಇದಕ್ಕೆ ನನಗೆ ಮುಖ ತೋರಿಸಲು ನಾಚಿಕೆಯಾಗುತ್ತೆ," ಎಂದು ಅವರು ಹೇಳಿದರು.

   ಸಂವಿಧಾನಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗಿದೆ

   ಸಂವಿಧಾನಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗಿದೆ

   "ಇವತ್ತು ಭಾರತೀಯ ಸಂವಿಧಾನಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗಿದೆ. ಗೌರಿಯವರ ಹತ್ಯೆಯ ಮೂಲಕ ರಾಜ್ಯದಲ್ಲಿ ಹತ್ಯೆ ಸಂಸ್ಕೃತಿ ಯನ್ನು ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಈ ಹತ್ಯೆ ಸಂಸ್ಕೃತಿಯನ್ನು ತಡಗಟ್ಟಬೇಕು. ಭಾರತದ ಶಾಂತಿ ಸೌಹಾರ್ದತೆಯ ಪರಂಪರೆಯನ್ನು ಮುಂದುವರಿಸಬೇಕು," ಎನ್ನುತ್ತಾರೆ ಗೌರಿ ಹತ್ಯೆ ವಿರೋಧಿ ಹೋರಾಟ ಸಮಿತಿ ಸದಸ್ಯೆ ಕೆ. ನೀಲಾ.

   "ಭಾರತ ಬುದ್ಧನ ಭಾರತ, ಗಾಂಧಿ, ಅಂಬೇಡ್ಕರ್ ಭಾರತ. ಕೊಲೆಯ ಸಂಸ್ಕೃತಿಗೆ, ರಕ್ತದ ಸಂಸ್ಕೃತಿಗೆ ಇಲ್ಲಿ ಅವಕಾಶವಿಲ್ಲ.
   ಈ ರ್ಯಾಲಿ ಒಂದು ಮಹಾಸಂಗಮ. ಕೊಲೆಗಡುಕ ಮನಸ್ಥಿತಿಯನ್ನು ಖಂಡಿಸಲು ಈ ಜಾಥಾ. ಗೌರಿಯಂತೆ ಮತ್ಯಾವ ಹತ್ಯೆಯೂ ಈ ನೆಲದಲ್ಲಿ ನಡೆಯಬಾರದು," ಎಂಬುದು ನೀಲಾರ ಒಕ್ಕೊರಲ ಒತ್ತಾಯವಾಗಿದೆ.

   ಸುಮ್ಮನಿದ್ದರೆ ನ್ಯಾಯ ಸಿಗುವುದಿಲ್ಲ

   ಸುಮ್ಮನಿದ್ದರೆ ನ್ಯಾಯ ಸಿಗುವುದಿಲ್ಲ

   ಇಂಥಹದ್ದೊಂದು ಜಾಥಾ ಬೇಕಾಗಿತ್ತು. ಅದರಲ್ಲೂ ಯುವ ಜನತೆಗೆ ಅಗತ್ಯವಾಗಿ ಬೇಕಿತ್ತು. ನಮ್ಮ ಧ್ವನಿಯನ್ನು ನಾವು ಏರಿಸಬೇಕು. ನಾವು ಯಾವಾಗ ಸುಮ್ಮನೆ ಇರುತ್ತೇವೆಯೋ ಆಗ ನ್ಯಾಯ ಸಿಗುವುದಿಲ್ಲ.಻ ಅನ್ಯಾಯದ ವಿರುದ್ಧ ಮಾತನಾಡಿದರೆ ಮಾತ್ರ ಬದಲಾವಣೆ ತರಬಹುದು ಎನ್ನುತ್ತಾರೆ ಪ್ರತಿಭಟನೆಯಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರು.

   "ಗೌರಿಯವರ ಹತ್ಯೆ ಸೈದ್ಧಾಂತಿಕ ವಿರೋಧದಿಂದಾಗಿದೆ. ಎರಡು ವರ್ಷದ ಹಿಂದೆ ನಡೆದ ಕಲಬುರ್ಗಿ ಹತ್ಯೆಯ ಆರೋಪಿಗಳನ್ನೇ ಇನ್ನೂ ಬಂಧಿಸಿಲ್ಲ. ಹೀಗೆ ಬಿಡುತ್ತಿದ್ದರೆ ಮುಂದೊಂದು ದಿನ ನಮ್ಮನ್ನೂ ಹತ್ಯೆ ಮಾಡುತ್ತಾರೆ. ಇದೀಗ ಹತ್ಯೆ ದೊಡ್ಡ ಬಿಸಿನೆಸ್ ಆಗಿದೆ," ಎಂಬುದು ಅವರ ಅಭಿಪ್ರಾಯ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Many different protests came to the notice of the protesters in the ‘Resistance Convention’ held in Bengaluru on Sepetember 12. Resistance Convention was held against the assassination of journalist and activist Gauri Lankesh.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ