ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದರೇ 'ಕಂಬಳ ವೀರ'? ಸತ್ಯವೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಟ್ವಿಟ್ಟರ್, ಫೇಸ್‌ಬುಕ್, ಟಿವಿ ಸುದ್ದಿಗಳು ಎಲ್ಲೆಡೆ ಕಂಬಳ ಓಟಗಾರ ಶ್ರೀನಿವಾಸ್ ಗೌಡರದ್ದೇ ಮಾತು. ಉಸೇನ್ ಬೋಲ್ಟ್ ಅನ್ನೇ ಶ್ರೀನಿವಾಸ್ ಗೌಡ ಮೀರಿಸಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ ಜನ.

Recommended Video

Karnataka's kambala Jockey breaks Usain bolt's record | Kambala | Usain Bolt | Record

ಶ್ರೀನಿವಾಸ್ ಗೌಡರ ಖ್ಯಾತಿ ಎಲ್ಲೆಲ್ಲಿ ತಲುಪಿದೆ ಎಂದರೆ ಕೇಂದ್ರಾ ಕ್ರೀಡಾ ಸಚಿವರು ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ ತರಭೇತಿಗೆ ಆಹ್ವಾನಿಸಿದ್ದಾರೆ. ಆನಂದ್ ಮಹೀಂದ್ರಾ, ಶಶಿ ತರೂರ್ ಸಹ ಅವರನ್ನು ಟ್ವಿಟ್ಟರ್‌ನಲ್ಲಿ ಕೊಂಡಾಡಿದ್ದಾರೆ.

ಇತ್ತೀಚೆಗೆ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ್ ಗೌಡ ಅವರು 145 ಮೀಟರ್ ದೂರವನ್ನು ಕೇವಲ 13.61 ಸೆಕೆಂಡ್‌ನಲ್ಲಿ ಓಡಿದ್ದಾರೆ. ಶ್ರೀನಿವಾಸ್ ಗೌಡರು ಓಡಿದ ವೇಗ ಲೆಕ್ಕಾ ಹಾಕಿದರೆ ಅವರು 100 ಮೀಟರ್ ಅನ್ನು ಕೇವಲ 9.55 ಸೆಕೆಂಡ್‌ಗಳಲ್ಲಿ ತಲುಪಿದ್ದಾರೆ. ಇದು ಉಸೇನ್ ಬೋಲ್ಟ್ ನ ದಾಖಲೆಯನ್ನೇ ಮೀರಿಸುವ ದಾಖಲೆ!

ಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆ ಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆ

ಆದರೆ ಕ್ರೀಡೆಯ ಒಳ-ಹೊರಗು ತಿಳಿದವರಿಗೆ ಈ ಅಂಕಿ-ಸಂಖ್ಯೆ ಅನುಮಾನ ಮೂಡಿಸದೆ ಇರದು. ಏಕೆಂದರೆ ಉಸೇನ್ ಬೋಲ್ಟ್ ಮಾಡಿದ ಸಾಧನೆಯೇ ಅತಿಮಾನುಷ ಎನ್ನಲಾಗುತ್ತದೆ. ಅಷ್ಟು ಕಡಿಮೆ ಸಮಯದಲ್ಲಿ (9.58) ನೂರು ಮೀಟರ್ ಓಡುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಬಹು ವರ್ಷದ ತರಬೇತಿಯ ಜೊತೆ-ಜೊತೆಗೆ ದೇಹ ರಚನೆ, ವಯಸ್ಸು ಅಂದಿನ ದಿನದ ವಾತಾವರಣ ಎಲ್ಲವೂ ಅತಿ ಮುಖ್ಯ.

ಉಸೇನ್ ಬೋಲ್ಟ್ ದಾಖಲೆ ಅಳಿಸಲು ಸಾಧ್ಯವೇ?

ಉಸೇನ್ ಬೋಲ್ಟ್ ದಾಖಲೆ ಅಳಿಸಲು ಸಾಧ್ಯವೇ?

ಹೀಗಿರುವಾಗ ಶ್ರೀನಿವಾಸ್ ಗೌಡರು ಕೆಸರು ತುಂಬಿದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನೇ ಅಳಿಸಿಹಾಕಿದ್ದಾರೆಂದರೆ ಅದು ಸಾಧ್ಯವೇ? ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಂಬಳ ಅಕಾಡೆಮಿ ಅಧ್ಯಕ್ಷರೇ ಉತ್ತರ ನೀಡಿದ್ದಾರೆ. ಸ್ವತಃ ಅವರೇ ಶ್ರೀನಿವಾಸ್ ಗೌಡರನ್ನು ಉಸೇನ್ ಬೋಲ್ಟ್ ಜೊತೆ ಹೋಲಿಸುವುದನ್ನು ಸರಿಯಲ್ಲ ಎಂದಿದ್ದಾರೆ.

'ಸಮಯ ಹಾಗೂ ದೂರದ ಬಗ್ಗೆ ನಿಖರತೆ ಇಲ್ಲ'

'ಸಮಯ ಹಾಗೂ ದೂರದ ಬಗ್ಗೆ ನಿಖರತೆ ಇಲ್ಲ'

ಕಂಬಳ ಅಕಾಡೆಮಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಕಂಬಳ ಸಮಿತಿಯ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಆಗಿರುವ ಗುಣಪಾಲ ಕಂಬದ ಅವರು ಐಕಳದ ಕಂಬಳದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಅಂದಿನ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಬಹು ವೇಗವಾಗಿ ಓಡಿದ್ದು ಹೌದು, ಆದರೆ ನಾವು ಶ್ರೀನಿವಾಸ್ ಗೌಡ ಅವರನ್ನು ಉಸೇನ್ ಬೋಲ್ಟ್‌ ಗೆ ಹೋಲಿಸಲು ಸಾಧ್ಯವಿಲ್ಲ', ಶ್ರೀನಿವಾಸ್ ಕಂಬಳ ಓಡಿದ ನಿಖರವಾದಿ ಅವಧಿ ನಮಗೆ ಗೊತ್ತಿಲ್ಲ. ಕಂಬಳದ ರೇಸಿನ ಕೊನೆಯಲ್ಲಿ ಎಲೆಕ್ಟ್ರಾನಿಕ್ ಸಮಯದ ಯಂತ್ರವನ್ನು ಇಡಲಾಗಿತ್ತು ಹಾಗಾಗಿ ಸಮಯದ ನಿಖರತೆ ಬಗ್ಗೆ ಧೃಡೀಕರಣ ನೀಡಲು ಸಾಧ್ಯವಿಲ್ಲ, ಮತ್ತು ಕಂಬಳದ ಉದ್ದದ ಬಗ್ಗೆಯೂ ನಿಖರತೆ ಇಲ್ಲ' ಎಂದು ಅವರು ಹೇಳಿದ್ದಾರೆ.

ಶ್ರೀನಿವಾಸ್ ಗೌಡ ಅದ್ಭುತ ಓಟಗಾರ, ಆದರೆ...

ಶ್ರೀನಿವಾಸ್ ಗೌಡ ಅದ್ಭುತ ಓಟಗಾರ, ಆದರೆ...

ಶ್ರೀನಿವಾಸ್ ಗೌಡ ಅವರು ಅದ್ಬುತ ಓಟಗಾರ ಎಂಬುದರಲ್ಲಿ ಎರಡನೇಯ ಮಾತೇ ಇಲ್ಲ. ಆದರೆ ಉಸೇನ್ ಬೋಲ್ಟ್‌ನ ಸಾಧನೆಯನ್ನು ಮೀರಿಸುವುದು ಸುಲಭಕ್ಕೆ ಸಾಧ್ಯವಾಗುವುದಲ್ಲ. ಉಸೇನ್ ಬೋಲ್ಟ್‌ 100 ಮೀಟರ್ ಓಟದಲ್ಲಿ ವಿಶ್ವದಾಖಲೆ ಮಾಡಿದ್ದು ಹನ್ನೊಂದು ವರ್ಷದ ಹಿಂದೆ. ಈ ವರೆಗೆ ಹಲವರು ಈ ದಾಖಲೆ ಅಳಿಸಲು ಯತ್ನಿಸಿದ್ದಾರೆ ಆದರೆ ಈವರೆಗೆ ಸಾಧ್ಯವಾಗಿಲ್ಲ. ಹಿಂದಿನವರಿಗೂ ಆಗಿಲ್ಲ. ಸ್ವತಃ ಉಸೇನ್‌ ಬೋಲ್ಟ್‌ಗೂ ಸಾಧ್ಯವಾಗಿಲ್ಲ.

ಹತ್ತು ಸೆಕೆಂಡ್‌ನಲ್ಲಿ ಸಾಮಾನ್ಯ ಓಟಗಾರನೂ ಓಡುತ್ತಾನೆ

ಹತ್ತು ಸೆಕೆಂಡ್‌ನಲ್ಲಿ ಸಾಮಾನ್ಯ ಓಟಗಾರನೂ ಓಡುತ್ತಾನೆ

ನೂರು ಮೀಟರ್ ಅನ್ನು ಹತ್ತು ಸೆಕೆಂಡ್ ಅಥವಾ ಹತ್ತು ಸೆಕೆಂಡ್‌ನ ಸ್ವಲ್ಪ ಒಳಗೆ ಸಾಮಾನ್ಯ ತರಬೇತಿ ಪಡೆದ ಓಟಗಾರನೂ ಓಡಬಲ್ಲ. ಆದರೆ ವಿಶ್ವದಾಖಲೆ ನಿರ್ಮಾಣ ಆಗುವುದು ಫ್ರಾಕ್ಷನ್ ಆಫ್ ಸೆಕೆಂಡ್‌ ನಲ್ಲಿ. 9.80 ಸೆಕೆಂಡ್‌ನಲ್ಲಿದ್ದ 100 ಮೀಟರ್ ಓಟದ ವಿಶ್ವದಾಖಲೆಯನ್ನು ಅಳಿಸಿ 9.58 ಸೆಕೆಂಡ್ ಗೆ ಓಡಿ ಹೊಸ ದಾಖಲೆ ನಿರ್ಮಿಸಲು ಸುಮಾರು 20 ವರ್ಷ ಹಿಡಿಯಿತು ಎಂದರೆ ಆ ಫ್ರಾಕ್ಷನ್ ಆಫ್ ಸೆಕೆಂಡ್‌ನ ಮಹತ್ವ ಎಷ್ಟೆಂಬುದು ಅರ್ಥವಾದೀತು.

ಶ್ರೀನಿವಾಸ್ ಗೌಡ ಓಡಿದ ಪರಿಸ್ಥಿತಿಯ ಅವಲೋಕನ ಅಗತ್ಯ

ಶ್ರೀನಿವಾಸ್ ಗೌಡ ಓಡಿದ ಪರಿಸ್ಥಿತಿಯ ಅವಲೋಕನ ಅಗತ್ಯ

ಶ್ರೀನಿವಾಸ್ ಗೌಡ ಅವರು ಓಡಿದ ಪರಿಸ್ಥಿತಿಯ ಅವಲೋಕನ ಸಹ ಅತಿ ಮಹತ್ವದ್ದು, ಅವರು ಸುಸಜ್ಜಿತ ಟರ್ಫ್‌ ಮೇಲೆ, ವೈಜ್ಞಾನಿಕವಾಗಿ ತಯಾರಿಸಿದ ಬೂಟು ಧರಿಸಿ ಓಡಿಲ್ಲ. ಬದಲಿಗೆ ಕಂಬಳದ ಗದ್ದೆಯಲ್ಲಿ ಓಡಿದ್ದಾರೆ. ಅದು ಓಡಲು ಅಷ್ಟೇನೂ ಅನುಕೂಲಕರವಲ್ಲದ ಜಾಗ. ಆದರೆ ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕಾದುದೆಂದರೆ ಅವರ ಮುಂದೆ ಓಡುತ್ತಿದ್ದ ಕೋಣಗಳು.

ಕೋಣಗಳ ಸರಾಸರಿ ವೇಗ ಬೋಲ್ಟ್‌ಗಿಂತಲೂ ಹೆಚ್ಚು

ಕೋಣಗಳ ಸರಾಸರಿ ವೇಗ ಬೋಲ್ಟ್‌ಗಿಂತಲೂ ಹೆಚ್ಚು

ಕೋಣಗಳ ಸರಾಸರಿ ವೇಗ ಗಂಟೆಗೆ 35 ಕಿ.ಮೀ. ಅಂದರೆ ಅವು ಉಸೇನ್ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತವೆ. ಕಂಬಳದಲ್ಲಿ ಓಡಿದ್ದ ಶ್ರೀನಿವಾಸ್ ಗೌಡ ಕೋಣಗಳ ನೊಗವನ್ನು ಹಿಡಿದು ಓಡಿದ್ದರು. ಅಂದರೆ ಕೋಣಗಳು ಶ್ರೀನಿವಾಸ್ ಗೌಡ ಅವರನ್ನು ಎಳೆದು ಓಡಿದ್ದವು. ಹಾಗಿದ್ದರೆ ಕಂಬಳದಲ್ಲಿ ಶ್ರೀನಿವಾಸ್ ಗೌಡ ಅವರು ಓಡಿದ 'ಅತಿ ವೇಗ' ಕೋಣಗಳ ಎಳೆತದಿಂದ ಉಂಟಾಗಿರುವ ಸಾಧ್ಯತೆ ಇದೆ.

ಶ್ರೀನಿವಾಸ್ ಗೌಡರ ಪ್ರತಿಭೆಗೆ ಕ್ರೀಡಾ ಇಲಾಖೆ ರೂಪ ನೀಡಬೇಕು

ಶ್ರೀನಿವಾಸ್ ಗೌಡರ ಪ್ರತಿಭೆಗೆ ಕ್ರೀಡಾ ಇಲಾಖೆ ರೂಪ ನೀಡಬೇಕು

ಮೊದಲೇ ಹೇಳಿದಂತೆ ಶ್ರೀನಿವಾಸ್ ಗೌಡ ಅಸಾಮಾನ್ಯ ಓಟಗಾರ ಆದರೆ ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿದ್ದಾರೆ ಎಂಬುದು ಅನುಮಾನ ಮೂಡಿಸುತ್ತದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರೇ ಹೇಳಿರುವಂತೆ ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ, ವೈಜ್ಞಾನಿಕ ತರಬೇತಿಯ ಅವಶ್ಯಕತೆ ಇದೆ.

English summary
Kambala runner Shrinivas Gowda making headlines for his kambala sprint. Social media people saying that he break Usain Bolt's record. Is it true?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X