ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳದ ಕಾಶಿ ಮಠದಲ್ಲಿ ಭಜನೆ ಯಾತ್ರೆ ಆರಂಭ

By Kiran B Hegde
|
Google Oneindia Kannada News

ಭಟ್ಕಳ, ಜ. 6: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಶ್ರೀ ಕಾಶಿ ಮಠದಲ್ಲಿ ವ್ಯಾಸ ಧ್ವಜದೊಂದಿಗೆ ಭಜನಾ ಯಾತ್ರೆಗೆ ಚಾಲನೆ ನೀಡಲಾಗಿದೆ.

ಹರಿದ್ವಾರದಲ್ಲಿ ನಡೆಯುವ ಕಾಶಿ ಮಠದ ಹಿರಿಯ ಶ್ರೀಗಳ ನವತಿ ಕಾರ್ಯಕ್ರಮ ಸಾಂಗವಾಗಿ ನೆರವೇರಬೇಕೆಂಬ ಆಶಯದೊಂದಿಗೆ ಭಜನೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಠವು ತಿಳಿಸಿದೆ. [ಧರ್ಮದಾಯಿ ದತ್ತಿ ತಿದ್ದುಪಡಿ ಹಿಂಪಡೆಯಿರಿ]

yatre

ಶ್ರೀ ಕಾಶಿ ಮಠದ ಕಿರಿಯ ಯತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಧ್ವಜಕ್ಕೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ಮಂಗಳೂರು ಮತ್ತು ಕೋಟೇಶ್ವರ ಭಜನಾ ತಂಡ ಈಗಾಗಲೇ ಭಟ್ಕಳಕ್ಕೆ ಆಗಮಿಸಿದೆ. ಮುಂದಿನ ಭಾನುವಾರ ಬೆಳಗ್ಗೆ ಈ ಭಜನಾ ತಂಡ ಹರಿದ್ವಾರಕ್ಕೆ ತೆರಳಲಿದೆ. [ಮಠಾಧೀಶರಿಂದ ಹೋರಾಟ]

ಕಾಶಿ ಮಠದ ಮೂಲ ಮಠದಿಂದ ಭಜನೆ ಪ್ರಾರಂಭಿಸಲಾಗಿದೆ. ಪ್ರತಿ ಊರಿನಲ್ಲಿ ತಲಾ ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ನಂತರ ವಾಹನಗಳ ಮೂಲಕ ಉಡುಪಿ, ಮಂಗಳೂರು, ಪ್ರದೇಶ ಬಳಿಕ ಮೂಲ್ಕಿಯಲ್ಲಿ ಸಮಾವೇಶಗೊಳ್ಳಲಿದೆ. ನಂತರ ಈ ತಂಡ ಹರಿದ್ವಾರವನ್ನು ತಲುಪಲಿದೆ.

dhvaja
English summary
Bhajan yatra started from Bhatkal Kashi matha. Pilgrims will start to Haridhwar on next Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X