{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/dharwad-udupi-pejavara-seer-walks-8-kms-on-bare-foot-in100-minutes-078678.html" }, "headline": "ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ ", "url":"http://kannada.oneindia.com/news/karnataka/dharwad-udupi-pejavara-seer-walks-8-kms-on-bare-foot-in100-minutes-078678.html", "image": { "@type": "ImageObject", "url": "http://kannada.oneindia.com/img/1200x60x675/2013/10/25-pejavara-shree1.jpg", "width": "1200", "height":"675" }, "thumbnailUrl":"http://kannada.oneindia.com/img/128x50/2013/10/25-pejavara-shree1.jpg", "datePublished": "2013-10-25 14:47:38", "dateModified": "2013-10-25T14:47:38+05:30", "author": { "@type": "Person", "name": "Srinath" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Districts", "description": "Dharwad Udupi Pejavara Seer walks 8 kms on bare foot in100 minutes, ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ ", "keywords": "Dharwad Udupi Pejavara Seer walks 8 kms on bare foot in100 minutes, ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ ", "articleBody":"ಬಾಗಲಕೋಟೆ,ಅ.25: ಕುರುಬರು ವೈಷ್ಣವ ಧರ್ಮಕ್ಕೆ ಬರುವುದಾದರೆ ಸ್ವಾಗತ. ಅವರಿಗೂ ವೈಷ್ಣವ ದೀಕ್ಷೆ ನೀಡಲು ತಾವು ಸಿದ್ಧ ಎಂದು ಪೇಜಾವರ ಶ್ರೀಗಳು ಶುಕ್ರವಾರ ಹೇಳಿದ್ದಾರೆ.ಕುರುಬರು ಹಾಗೂ ಬ್ರಾಹ್ಮಣರನ್ನು ಪ್ರತ್ಯೇಲಿಸಲು ಸಾಧ್ಯವಿಲ್ಲ. ಕನಕದಾಸರು ಕೃಷ್ಣನ ಭಕ್ತರಾಗಿದ್ದರು. ಅಲ್ಲದೆ ಅವರು ವೈಷ್ಣವ ಧರ್ಮ ಪಾಲಿಸುತ್ತಿದ್ದರು ಎಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಹೇಳಿದ್ದಾರೆ.ಕನಕನ ಕಿಂಡಿ ಹಾಗೂ ನವಗ್ರಹ ಕಿಂಡೆ ಬೇರೆ ಬೇರೆಯಲ್ಲ. ಈ ಕುರಿತು ಕೆಲವು ಬುದ್ಧಿಜೀವಿಗಳು ಇಲ್ಲಸಲ್ಲದ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪೇಜಾವರ ಶ್ರೀಗಳು, ಕುರುಬರು ವೈಷ್ಣವ ಧರ್ಮಕ್ಕೆ ಬಂದರೆ ಸ್ವಾಗತ, ಅವರಿಗೂ ತಾವು ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.100 ನಿಮಿಷದಲ್ಲಿ 8 ಕಿಮೀ ಪಾದ ಬೆಳೆಸಿದ ಶ್ರೀಪಾದರು:& nbsp 83 ವರ್ಷದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 8 ಕಿಮೀ ನಡೆಯುವ ಮೂಲಕ ತಮ್ಮ ದೈಹಿಕ ಕ್ಷಮತೆಯನ್ನು ಬಹಿರಂಗಪಡಿಸಿದ್ದಾರೆ. ಆದಿಚುಂಚನಗಿರಿಯಲ್ಲಿ ಅ. 23ರಂದು ಇದ್ದ ಶ್ರೀಪಾದರು ಗಂಗಾವತಿಗೆ ರಾತ್ರಿ ಬಂದು ಅ. 24ರ ಬೆಳಗ್ಗೆ ಪಾದಯಾತ್ರೆ ಮುಗಿಸಿದರು.ಧಾರವಾಡದ ಮಂತ್ರಾಲಯ ಪಾದಯಾತ್ರೆ ಸಂಘದ ಗೌರವಾಧ್ಯಕ್ಷರಾದ ಪೇಜಾವರ ಶ್ರೀಗಳು ಸಂಘದ ವತಿಯಿಂದ ನಡೆಯುವ ವಾರ್ಷಿಕ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅ. 24ರ ಬೆಳಗ್ಗೆ 7.40ರಿಂದ 9.20ರವರೆಗೆ ಗಂಗಾವತಿಯಿಂದ ಹೊರವಲಯದ ಪಂಚವಟಿವರೆಗೆ ಶ್ರೀಪಾದರು ಪಾದ ಬೆಳೆಸಿದರು.ಸಂಘದ ಸದಸ್ಯರು ಪ್ರತಿವರ್ಷ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸುತ್ತಿದ್ದು ಪ್ರತಿ ವರ್ಷ ಶ್ರೀಪಾದರು ಸಾಂಕೇತಿಕವಾಗಿ ಹೆಜ್ಜೆಹಾಕಿ ಆಶೀರ್ವದಿಸುತ್ತಿದ್ದರು. ಆದರೆ ಈ ಬಾರಿ 8 ಕಿಮೀ ಸ್ವತಃ ತಾವೂ ಹೆಜ್ಜೆ ಹಾಕಿದರು. ಮರದ ಹಾವಿಗೆ (ಮರದ ಪಾದುಕೆ) ಹಾಕಿಕೊಂಡರೆ ವೇಗವಾಗಿ ನಡೆಯುವುದಕ್ಕೆ ತೊಡಕಾಗುತ್ತದೆ ಎಂದು ಬರಗಾಲಿನಲ್ಲಿ ಶ್ರೀಪಾದರು ನಡೆದರು. ಈ ವರ್ಷ 160 ಮಂದಿ ರಾಯರ ಭಕ್ತರು ಅ. 29ರಂದು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ. (ಚಿತ್ರ)& nbsp " }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ

By Srinath
|
Google Oneindia Kannada News

ಬಾಗಲಕೋಟೆ,ಅ.25: ಕುರುಬರು ವೈಷ್ಣವ ಧರ್ಮಕ್ಕೆ ಬರುವುದಾದರೆ ಸ್ವಾಗತ. ಅವರಿಗೂ ವೈಷ್ಣವ ದೀಕ್ಷೆ ನೀಡಲು ತಾವು ಸಿದ್ಧ ಎಂದು ಪೇಜಾವರ ಶ್ರೀಗಳು ಶುಕ್ರವಾರ ಹೇಳಿದ್ದಾರೆ.

ಕುರುಬರು ಹಾಗೂ ಬ್ರಾಹ್ಮಣರನ್ನು ಪ್ರತ್ಯೇಲಿಸಲು ಸಾಧ್ಯವಿಲ್ಲ. ಕನಕದಾಸರು ಕೃಷ್ಣನ ಭಕ್ತರಾಗಿದ್ದರು. ಅಲ್ಲದೆ ಅವರು ವೈಷ್ಣವ ಧರ್ಮ ಪಾಲಿಸುತ್ತಿದ್ದರು ಎಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಹೇಳಿದ್ದಾರೆ.

ಕನಕನ ಕಿಂಡಿ ಹಾಗೂ ನವಗ್ರಹ ಕಿಂಡೆ ಬೇರೆ ಬೇರೆಯಲ್ಲ. ಈ ಕುರಿತು ಕೆಲವು ಬುದ್ಧಿಜೀವಿಗಳು ಇಲ್ಲಸಲ್ಲದ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪೇಜಾವರ ಶ್ರೀಗಳು, ಕುರುಬರು ವೈಷ್ಣವ ಧರ್ಮಕ್ಕೆ ಬಂದರೆ ಸ್ವಾಗತ, ಅವರಿಗೂ ತಾವು ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
100 ನಿಮಿಷದಲ್ಲಿ 8 ಕಿಮೀ ಪಾದ ಬೆಳೆಸಿದ ಶ್ರೀಪಾದರು:

Dharwad Udupi Pejavara Seer walks 8 kms on bare foot in100 minutes
83 ವರ್ಷದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 8 ಕಿಮೀ ನಡೆಯುವ ಮೂಲಕ ತಮ್ಮ ದೈಹಿಕ ಕ್ಷಮತೆಯನ್ನು ಬಹಿರಂಗಪಡಿಸಿದ್ದಾರೆ. ಆದಿಚುಂಚನಗಿರಿಯಲ್ಲಿ ಅ. 23ರಂದು ಇದ್ದ ಶ್ರೀಪಾದರು ಗಂಗಾವತಿಗೆ ರಾತ್ರಿ ಬಂದು ಅ. 24ರ ಬೆಳಗ್ಗೆ ಪಾದಯಾತ್ರೆ ಮುಗಿಸಿದರು.

ಧಾರವಾಡದ ಮಂತ್ರಾಲಯ ಪಾದಯಾತ್ರೆ ಸಂಘದ ಗೌರವಾಧ್ಯಕ್ಷರಾದ ಪೇಜಾವರ ಶ್ರೀಗಳು ಸಂಘದ ವತಿಯಿಂದ ನಡೆಯುವ ವಾರ್ಷಿಕ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅ. 24ರ ಬೆಳಗ್ಗೆ 7.40ರಿಂದ 9.20ರವರೆಗೆ ಗಂಗಾವತಿಯಿಂದ ಹೊರವಲಯದ ಪಂಚವಟಿವರೆಗೆ ಶ್ರೀಪಾದರು ಪಾದ ಬೆಳೆಸಿದರು.

ಸಂಘದ ಸದಸ್ಯರು ಪ್ರತಿವರ್ಷ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸುತ್ತಿದ್ದು ಪ್ರತಿ ವರ್ಷ ಶ್ರೀಪಾದರು ಸಾಂಕೇತಿಕವಾಗಿ ಹೆಜ್ಜೆಹಾಕಿ ಆಶೀರ್ವದಿಸುತ್ತಿದ್ದರು. ಆದರೆ ಈ ಬಾರಿ 8 ಕಿಮೀ ಸ್ವತಃ ತಾವೂ ಹೆಜ್ಜೆ ಹಾಕಿದರು. ಮರದ ಹಾವಿಗೆ (ಮರದ ಪಾದುಕೆ) ಹಾಕಿಕೊಂಡರೆ ವೇಗವಾಗಿ ನಡೆಯುವುದಕ್ಕೆ ತೊಡಕಾಗುತ್ತದೆ ಎಂದು ಬರಗಾಲಿನಲ್ಲಿ ಶ್ರೀಪಾದರು ನಡೆದರು. ಈ ವರ್ಷ 160 ಮಂದಿ ರಾಯರ ಭಕ್ತರು ಅ. 29ರಂದು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ. (ಚಿತ್ರ)

English summary
Udupi Pejavara matt Seer has walked 8 kms on bare foot in100 minutes on Oct 24th morning. The 83-year-old Shri Vishwesha Tirtha Swamiji of Pejavar Math in Udupi, covered an eight-kilometre distance in 1.40 minutes in Gangavati. The members of the Mantralaya Padayatra Sangha have a routine of visiting Mantralaya in Andhra Pradesh, walking along the whole distance. About 160 members have been taking part in the on-foot pilgrimage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X