ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ ಯೋಜನೆಗೆ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ

By Srinath
|
Google Oneindia Kannada News

ಧರ್ಮಸ್ಥಳ, ಜೂನ್ 23: ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 2014ನೇ ಸಾಲಿನ ರಾಷ್ಟ್ರೀಯ ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ ಲಭಿಸಿದೆ.

ಬಡವರ ಸಬಲೀಕರಣಕ್ಕಾಗಿ ನಾನಾ ಯೋಜನೆಗಳನ್ನು ಅನುಷ್ಠಾಣಗೊಳಿಸಿ ಯಶಸ್ವಿಯಾಗಿರುವ ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಗೆ ಸಂಸದೆ ಮೀಲನಾಕ್ಷಿ ಲೇಖಿ ಮತ್ತು ಮಾಜಿ ಮಹಾಲೇಖಪಾಲ ವಿನೋದ್ ರೈ ಅವರು ಕಳೆದ ವಾರ ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಪ್ರದಾನ ಮಾಡಿದರು.

dharmasthala-rural-development-project-gets-scotch-gold-award-2014

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್ ಅವರು ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಲ್ ಎಚ್ ಮಂಜುನಾಥ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಫಲವಾಗಿ ಆರಂಭವಾದ ಈ ಯೋಜನೆಯಿಂದಾಗಿ ಕರ್ನಾಟಕದಲ್ಲಿಂದು 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯವಾಹಿನಿಗೆ ಬಂದಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕನಸನ್ನು ನನಸುಗೊಳಿಸಿದ 16 ಸಾವಿರ ಕಾರ್ಯಕರ್ತರಿಗೂ ಮತ್ತು ಯೋಜನೆಯ ಎಲ್ಲ ಟ್ರಸ್ಟಿಗಳಿಗೂ ಈ ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ಡಾ. ಎಲ್ ಎಚ್ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಹೇಳಿದರು. ಮೂರು ದಶಕಗಳ ಹಿಂದೆ ಆತಂಭವಾದ ಈ ಯೋಜನೆಯು 20 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿದೆ. (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ)

ಕೆನರಾ ಬ್ಯಾಂಕ್ ಅಧ್ಯಕ್ಷ ಆರ್ ಕೆ ದುಬೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯೋಕೋ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 30ಕ್ಕೂ ಹೆಚ್ಚು ಸಂಖ್ಯೆಯ ಗ್ರಾಮೀಣ ಬ್ಯಾಂಕುಗಳ ಅಧ್ಯಕ್ಷರು, ವಿಮಾ ಕಂಪನಿಗಳ ಅಧ್ಯಕ್ಷರು, ಸಿಡ್ಬಿ ಸಂಸ್ಥೆಯ ನಿರ್ದೇಶಕ ಮೇನಿ, ನಬಾರ್ಡ್ ಮುಖ್ಯಪ್ರಹಾಪ್ರಬಂಧಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

English summary
The Shri Kshethra Dharmasthala Rural Development Project (SKDRDP) was chosen for the National Scotch Gold Award-2014 for financial innovation and overall development in Karnataka through self-help-groups. The SKDRDP promotes development through a network of self-help-groups which now includes 2 million families, about 20 per cent of rural households in Karnataka. It provides loans for domestic and agricultural expenses, through one of the largest micro-credit programmes in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X