ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಪಾದಯಾತ್ರೆ

By ಸಚ್ಚಿದಾನಂದ ಆಚಾರ್ಯ, ಧರ್ಮಸ್ಥಳ
|
Google Oneindia Kannada News

ಕಾರ್ತಿಕ ಮಾಸದಲ್ಲಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ, ವಿಶೇಷವಾದ ಪುಣ್ಯ ಬರುವುದು ಎಂಬ ನಂಬಿಕೆಯಿದೆ. ಜತೆಗೆ ಎಲ್ಲೆಡೆ ಲಕ್ಷದೀಪೋತ್ಸವ, ತೆಪ್ಪೋತ್ಸವಗಳು ಸಂಭ್ರಮದಿಂದ ನಡೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದೆ.ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಗಳ ಸಚಿತ್ರ ವರದಿ ನಿತ್ಯ ನಿಮ್ಮ ಪರದೆಯಲ್ಲಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ-ಒನ್ ಇಂಡಿಯಾ ಕನ್ನಡ

ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ನವೆಂಬರ್ 18 ರಿಂದ ನವೆಂಬರ್ 23 ರರವರೆಗೆ ನಡೆಯಲಿದೆ. ಇದರ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳದವರೆಗೆ ಶ್ರೀ ಮಂಜುನಾಥ ಸ್ವಾಮಿಯ ಭಕ್ತರ ಪಾದಯಾತ್ರೆ ನಡೆಯಿತು. [ಗ್ಯಾಲರಿ :ಧರ್ಮಸ್ಥಳ ಲಕ್ಷದೀಪೋತ್ಸವ]

ಭಜನಾ ಮಂಡಳಿ ವತಿಯಿಂದ ಈ ಪಾದಯಾತ್ರೆ

ಭಜನಾ ಮಂಡಳಿ ವತಿಯಿಂದ ಈ ಪಾದಯಾತ್ರೆ

ಸೋಮವಾರ ಸಂಜೆ ನಾಲ್ಕು ಗಂಟೆಗೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಈ ಪಾದಯಾತ್ರೆಯು ಆರಂಭಗೊಂಡಿತು. ಶ್ರೀ ಜನಾರ್ಧನ ಸ್ವಾಮಿ ಭಜನಾ ಮಂಡಳಿ ವತಿಯಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜನಸಾಗರದಲ್ಲಿ ಹರಿದು ಬಂದ ಪಾದಯಾತ್ರೆ

ಜನಸಾಗರದಲ್ಲಿ ಹರಿದು ಬಂದ ಪಾದಯಾತ್ರೆ

ಪಾದಯಾತ್ರೆಯಲ್ಲಿ ಮಕ್ಕಳು ಪುರುಷರು ಮಹಿಳೆಯರು ಸೇರಿದಂತೆ ಸುಮಾರು 5 ಸಾವಿರ ಭಕ್ತರು ಹಾಗೂ ಗಣ್ಯರು ವಿವಿಧ ಗ್ರಾಮಗಳಿಂದ ಪಾಲ್ಗೊಂಡಿದ್ದರು.

ಅಲಂಕೃತಗೊಂಡ ವಾಹನಗಳಲ್ಲಿ ಮೆರವಣಿಗೆ

ಅಲಂಕೃತಗೊಂಡ ವಾಹನಗಳಲ್ಲಿ ಮೆರವಣಿಗೆ

10 ಕಿಲೋಮೀಟರ್ ಗಳ ದೂರ ಸಾಗಿ ಬಂದ ಪಾದಯಾತ್ರೆಯಲ್ಲಿ ಶ್ರೀ ಜನಾರ್ಧನ ಸ್ವಾಮಿ ಮತ್ತು ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಅಲಂಕೃತಗೊಂಡ ವಾಹನಗಳಲ್ಲಿ ಕರೆತರಲಾಯಿತು

ದಾರಿಯುದ್ದಕ್ಕೂ ಭಜನಾ ಮೇಳಗಳು

ದಾರಿಯುದ್ದಕ್ಕೂ ಭಜನಾ ಮೇಳಗಳು

ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಜನಾ ಮೇಳಗಳು ಭಜನೆ ಮತ್ತು ಶ್ರೀ ಸ್ವಾಮಿಯ ಲೀಲೆಗಳನ್ನು ಹಾಡುತ್ತಾ ಬಂದದ್ದು ನೋಡುಗರ ಮನಸೂರೆಗೊಂಡಿತು.

ಪಾದಯಾತ್ರೆಯುದ್ದಕ್ಕೂ ಲಘು ಉಪಹಾರ

ಪಾದಯಾತ್ರೆಯುದ್ದಕ್ಕೂ ಲಘು ಉಪಹಾರ

ನಡೆದು ದಣಿದು ಬರುವ ಭಕ್ತರಿಗಾಗಿ ದಾರಿಯುದ್ದಕ್ಕೂ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ, ಜ್ಯೂಸ್, ಲಘು ಉಪಹಾರಗಳು ದಣಿದ ಭಕ್ತರ ಹೊಟ್ಟೆ ತಣಿಸಿದವು.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಗಣ್ಯರು

ಪಾದಯಾತ್ರೆಯಲ್ಲಿ ಪಾಲ್ಗೊಂಡ ಗಣ್ಯರು

ಪಾದಯಾತ್ರೆಯಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ ಯಶೋವರ್ಮ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ವಿಜಯ ರಾಘವ ಪಡ್ವೆಟ್ಣಾಯ ಭಾಗವಹಿಸಿದ್ದರು.

ಐದು ದಿನಗಳ ಕಾಲ ವಿಜೃಂಭಣೆ ಮೇಳ

ಐದು ದಿನಗಳ ಕಾಲ ವಿಜೃಂಭಣೆ ಮೇಳ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಹರಿದು ಬಂದ ಭಕ್ತರ ದಂಡನ್ನು ಶ್ರೀಮತಿ ಹೇಮಾವತಿ ವಿ ಹೆಗ್ಗಡೆ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಆದರದಿಂದ ಬರಮಾಡಿಕೊಂಡರು. ಹೀಗೆ ಆರಂಭಗೊಂಡ ದೀಪೋತ್ಸವವು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

English summary
The Laksha Deepotsava is a spectacular annual event at Sri Kshetra, Dharmasthala which also hosts All Religion Conference, Sahitya Sammelan, Science Exhibition, Inauguration day begins with Padayatra from Ujire to Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X