ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ವಶಪಡಿಸಿಕೊಳ್ಳಲಿ: ಬಸವರಾಜ ದೇವರು

By Vanitha
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್, 15 :ಉಡುಪಿಯ ಶ್ರೀ ಕೃಷ್ಣ ಮಠವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಜನರ ನಡುವೆ ಬೆಳೆದ ಭೇದವನ್ನು ಕಡಿಮೆ ಮಾಡಬೇಕು ಧಾರವಾಡ ಮನ್ಸೂರು ಮಠದ ಬಸವರಾಜ ದೇವರು ಆಗ್ರಹಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯ ಉಡುಪಿ ಕೃಷ್ಣ ಮಠವನ್ನು ಸರ್ಕಾರದ ವಶಕ್ಕೆ ತೆಗದುಕೊಳ್ಳುವ ಧೈರ್ಯ ಪ್ರದರ್ಶಿಸಿ ಪಂಗಡಗಳ ನಡುವೆ ಇರುವ ವೈಷಮ್ಯವನ್ನು ನಿವಾರಿಸಬೇಕು. ಅಷ್ಟ ಮಠಾಧೀಶರು ಕೃಷ್ಣ ಮತ್ತು ಕನಕದಾಸರನ್ನು ಒಂದಾಗಲು ಬಿಡುತ್ತಿಲ್ಲ ಇದರಿಂದ ಕೆಳವರ್ಗದ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಕನಕ-ಕೃಷ್ಣರನ್ನು ಒಂದಾಗಿ ಜನರಲ್ಲಿ ಸಾಮರಸ್ಯ ಬೆಳೆಯಲು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರೂ ಒಪ್ಪುತ್ತಿಲ್ಲ. ಆದ್ದರಿಂದ ಸರಕಾರ ಕೂಡಲೇ ಉಡುಪಿ ಕೃಷ್ಣಮಠವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆಂದರು.

Dharawad Mansuru math Basava devaru forced government to capture the Udupi Sri Krishnamath

80 ಲಕ್ಷ ರೂ. ಹವಾಲಾ ಹಣ ವಶ

ಹಳೇಹುಬ್ಬಳ್ಳಿ ಪೊಲೀಸರು ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ 80 ಲಕ್ಷ .ರೂ. ಗಳನ್ನು ಗುರುವಾರ ಬೆಳಗ್ಗೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹವಾಲಾ ಹಣವೆಂದು ಆದಾಯಕರ ಇಲಾಖೆಗೆ ತಿಳಿಸಿರುವ ಪೊಲೀಸರು, 1000 ರೂ. ಮತ್ತು 500 ರೂ. ನೋಟುಗಳನ್ನು ಜಪ್ತಿ ಮಾಡಿದ್ದಾರೆ.[ಸಿಸಿಬಿ ಪೊಲೀಸರ ಬಲೆಗೆ ಬಿದ್ದ ವಿಗ್ರಹ ಚೋರರು]

ಕುಂದಾಪುರದ ಜಯಶಂಕರ ಸುವರ್ಣ ಅಲಿಯಾಸ್ ಜೈಕರ್ (ಕಾರು ಮಾಲೀಕ), ಮರವಂತೆಯ ಅರುಣ ಕುಮಾರ ಸೋಮಣ್ಣ ಮತ್ತು ವಿಜಯಪುರದ ಬಸವರಾಜ ಶಾಂತಪ್ಪ ಕೌಲಗಿ ಎಂಬ ಮೂರು ಆರೋಪಿಗಳು ಮಾರುತಿ ವ್ಯಾಗನಾರ್ (ಕೆಎ-20, ಪಿ-2383) ಕಾರಿನಲ್ಲಿ ಕುಂದಾಪುರದಿಂದ ಹವಾಲಾ ಹಣವನ್ನು ದಾಖಲೆಗಳಿಲ್ಲದೇ ಸಾಗಿಸುತ್ತಿದ್ದರು. ಬೆಳಗಿನ 3-30 ರ ಹೊತ್ತಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Dharawad Mansuru math Basava devaraj forced government to capture the Udupi Sri Krishnamath on Thursday, October 14th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X