ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ ಅಕ್ರಮ ಎಸಗಿದವರ ಖಾಕಿ ಕನಸು ಶಾಶ್ವತವಾಗಿ ಭಗ್ನ!

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ''545 ಪಿಎಸ್ಐ ನೇಮಕಾತಿ ಅಕ್ರಮ ಎನ್ನಲಾದ ಪ್ರಕರಣ ಸಂಬಂಧ ಮೊದಲನೆಯದಾಗಿ ಮಾಹಿತಿ ಬಂದ ಬಳಿಕ ಒಂದು ತಿಂಗಳು ವಿಚಾರಣೆ ನಡೆಸಲಾಗಿತ್ತು. ವಿಚಾರ ಗಮನಕ್ಕೆ ಬಂದ ನಂತರ ಎವಿಡೆನ್ಸ್ ಸಿಕ್ಕ ತಕ್ಷಣ ಎಫ್ಐಅರ್ ದಾಖಲು ಮಾಡಲಾಗಿತ್ತು‌. ಯಾರು ಆಯ್ಕೆ ಅಗಿದ್ದಾರೆ, ಯಾರು ಸೆಲೆಕ್ಟ್ ಅಗಿಲ್ಲ ಎಲ್ಲದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ‌'' ಎಂದು‌ ಡಿಜಿ‌ ಪ್ರವೀಣ್ ಸೂದ್ ತಿಳಿಸಿದ್ದಾರೆ‌.

''ಇದನ್ನು ಹಗರಣ ಎನ್ನಲಾಗುವುದಿಲ್ಲ, ಕೆಲ ವ್ಯಕ್ತಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಈ ರೀತಿ ಎಸಗಿದವರ ಖಾಕಿ ಕನಸು ಶಾಶ್ವತವಾಗಿ ಭಗ್ನವಾಗಲಿದೆ. ಅವರು ಪೊಲೀಸ್ ನೇಮಕಾತಿ ಅಷ್ಟೇ ಅಲ್ಲ, ಯಾವುದೇ ಸ್ಪರ್ಧಾತ್ಮಾಕ ಪರೀಕ್ಷೆ ಅನರ್ಹರಾಗುವಂತೆ ಮಾಡಲಾಗುವುದು'' ಎಂದು ಪ್ರವೀಣ್ ಸೂದ್ ಗುಡುಗಿದ್ದಾರೆ.

ಅಕ್ರಮ ಹಿಂದಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಆಗಲಿದೆ. ಈಗಾಗಲೇ ಹಲವರನ್ನು ಅರೆಸ್ಟ್ ಮಾಡಲಾಗಿದೆ. ತಪ್ಪಿತಸ್ಥರನ್ನು ಮುಂದಿನ ಪೊಲೀಸ್ ಪರೀಕ್ಷೆ ಬರೆಯದಂತೆ ಮಾಡುತ್ತೇವೆ. ಯಾರನ್ನು ಹಾಗೆ ಬಿಡಲ್ಲ. ಪ್ರತಿಯೊಂದು ಉತ್ತರಪತ್ರಿಕೆಯನ್ನು ಮೂರು ಬಾರಿ ಪರಿಶೀಲಿಸಲಿದ್ದೇವೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಏನು ಆಗಲ್ಲ. ಅದ್ರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದು ಅಭಯ ನೀಡಿದರು.

ಪಿಎಸ್‌ಐ ನೇಮಕಾತಿ ಅಕ್ರಮ: ನಿರೀಕ್ಷಣಾ ಜಾಮೀನಿಗಾಗಿ ದಿವ್ಯಾ ಅರ್ಜಿ

ಸಮಗ್ರ ತನಿಖೆ

ಸಮಗ್ರ ತನಿಖೆ

ಬ್ಲೂಟೂತ್ ಬಳಿಸಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಜಾಲ ಇಡೀ ಸಿಐಡಿ ತನಿಖಾ ತಂಡವನ್ನೇ ನಿದ್ದೆ ಗೆಡಿಸಿದೆ. 545 ಪಿಎಸ್ಐ ನೇಮಕಾತಿಗಳ ಪೈಕಿ ಹೆಚ್ಚು ಮಂದಿ ಕಲಬುರಗಿ ಸುತ್ತಮುತ್ತಲಿನಿಂದಲೇ ನೇಮಕವಾಗಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಪರೀಕ್ಷಾ ಕೇಂದ್ರಗಳಲ್ಲಿ ಉತ್ತರ ಬರೆದಿರುವುದು ಮಾತ್ರವಲ್ಲದೇ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿರುವ ಸಂಖ್ಯೆ ಹೆಚ್ಚಾಗಿದೆ.

ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್

ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್

545 ಪಿಎಸ್ಐಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ನಂತರ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ ಈಗಾಗಲೇ ಕೆಲವರು ಬಂಧನಕ್ಕೆ ಒಳಗಾಗಿದ್ದರೆ. ತಪ್ಪಿತಸ್ಥರನ್ನು ಜೀವನ ಪರ್ಯಂತ ಅನರ್ಹಗೊಳಿಸಲಾಗುತ್ತದೆ. ಪ್ರತಿ ಉತ್ತರ ಹಾಳೆಯನ್ನು ಮೂರು ಬಾರಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

8 ಜನರನ್ನು ಬಂಧಿಸಲಾಗಿದೆ

8 ಜನರನ್ನು ಬಂಧಿಸಲಾಗಿದೆ

ಈ ಪ್ರಕರಣದಲ್ಲಿ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ. ಭಾನುವಾರ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಬಂಧಿಸಿದ್ದು, ಅಧಿಕಾರಿಗಳು ವಾಹನ ವಶಕ್ಕೆ ಪಡೆದಿದ್ದರು. ಸೋಮವಾರ ಜ್ಞಾನ ಜ್ಯೋತಿ ಇಂಗ್ಲಿಶ್‌ ಮಾಧ್ಯಮ ಶಾಲೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ. ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ದಿವ್ಯಾ ಹಾಗರಗಿ ಅಲ್ಲದೆ, ಮುಖ್ಯೋಪಾಧ್ಯಾಯರಾದ ಕಾಶಿನಾಥ್ ಹಾಗೂ ಸಹ ಶಿಕ್ಷಕಿ ಅರ್ಚನಾ ಎಂಬುವರು ಕಲಬುರಗಿಯ ಜೆಎಫ್ಎಂಎ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ.

Recommended Video

ಡಕ್ ಔಟ್ ಗಳ ಸರದಾರ ಯಾರು ಗೊತ್ತಾ | Oneindia Kannada
ಹುಬ್ಬಳ್ಳಿ ಗಲಭೆ ಪ್ರಕರಣ

ಹುಬ್ಬಳ್ಳಿ ಗಲಭೆ ಪ್ರಕರಣ

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗುತ್ತೆ.ನೇರವಾಗಿ ಭಾಗಿಯಾದವರನ್ನು ಬಂಧಿಸಲಾಗಿದೆ. ಪರೋಕ್ಷವಾಗಿ ಯಾರ ಕೈವಾಡವಿದೆ ಅದನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅವರನ್ನ ಕೂಡ ಬಂಧನ ಮಾಡಲಾಗುತ್ತೆ. ಸೋಷಿಯಲ್ ಮೀಡಿಯಾ ಬಹಳ ಕೇರ್ ಫುಲ್ ಬಳಕೆ ಮಾಡಬೇಕು. ಹಿಂದೂ ಮುಸ್ಲಿಂ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೇಡದ ವಿಚಾರಗಳ ಗಮನ ಸೆಳೆಯುತ್ತಿದೆ. ಸಮಾಜದ ಶಾಂತಿ ಕೆಡಿಸುವವರು ಯಾರೇ ಆಗಿದ್ರು ಅವ್ರನ್ನ ಬಿಡಲ್ಲ ಎಂದರು

English summary
PSI Recruitment Scam: Crime Investigation Department probe is underway and won't spare any one who is involved in mal practice said DGP IGP Praveen Sood
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X