ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸಿದ ಸರ್ಕಾರಿ ಶಾಲೆಗೆ ಬಣ್ಣ, ಸ್ವರ್ಗದ ರಾಕ್ಷಸರ ದೇವತಾಕಾರ್ಯ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಕೆಲವೇ ಉತ್ಸಾಹಿ ಯುವಕರ ತಂಡದ ಶ್ರಮದಿಂದಾಗಿ ವರುಷಗಳಿಂದ ಸುಣ್ಣ-ಬಣ್ಣ ಕಾಣದೆ ಮಾಸಿದ್ದ ಸರ್ಕಾರಿ ಶಾಲೆಯ ಗೋಡೆಗಳು ಬಣ್ಣ ತುಂಬಿಕೊಂಡು ಕಂಗೊಳಿಸುತ್ತಿವೆ.

ಬುಲೆಟ್ ರೈಡಿಂಗ್‌ನ ಹುಚ್ಚು ಹತ್ತಿಸಿಕೊಂಡಿರುವ ಡಿಒಎಚ್‌ (ಡೆವಿಲ್ಸ್‌ ಆಫ್ ಹೆವೆನ್) ಲೈಕನ್ ರೈಡರ್ಸ್‌ ತಂಡದ ಸದಸ್ಯರು ಎರಡೇ ದಿನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರಿ ಸರ್ಕಾರಿ ಶಾಲೆಯ ಎಲ್ಲ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ.

ಉಡುಪಿಯ ಅಜ್ಜರಕಾಡಿನಲ್ಲಿ 35 ವರ್ಷಗಳ ಹಿಂದಿನ ಸ್ವಾತಂತ್ರ್ಯೋತ್ಸವದ ನೆನಪುಉಡುಪಿಯ ಅಜ್ಜರಕಾಡಿನಲ್ಲಿ 35 ವರ್ಷಗಳ ಹಿಂದಿನ ಸ್ವಾತಂತ್ರ್ಯೋತ್ಸವದ ನೆನಪು

ಸರ್ಕಾರಿ ಶಾಲೆಯಲ್ಲಿದ್ದ ಒಟ್ಟು 9 ಕೊಠಡಿಗಳು, ಒಂದು ಉದ್ದನೆಯ ಕಾಂಪೌಂಡ್ ಎಲ್ಲವೂ ಈಗ ಬಣ್ಣಗಳಿಂದ ಕಂಗೊಳಿಸುತ್ತಿದೆ. ಎರಡು ದಿನ ಹಗಲು ರಾತ್ರಿಗಳನ್ನು ಒಂದು ಮಾಡಿ ದುಡಿದ 17 ಮಂದಿ ಯುವಕರ ಶ್ರಮದ ಪ್ರತಿಫಲವಿದು.

ಬುಲೆಟ್ ರೈಡಿಂಗ್ ಹುಚ್ಚು, ಸಮಾಜ ಸೇವೆ ಆಸೆ

ಬುಲೆಟ್ ರೈಡಿಂಗ್ ಹುಚ್ಚು, ಸಮಾಜ ಸೇವೆ ಆಸೆ

ಬುಲೆಟ್‌ ರೈಡಿಂಗ್ ನ ಹುಚ್ಚು ಹತ್ತಿಸಿಕೊಂಡಿರುವ ಈ ಬಳಗ, ನಗರದ ಉಳಿದ ಬೈಕ್ ರೈಡರ್‌ಗಳಿಗಿಂತ ಭಿನ್ನವಾಗಿ ಕಾಣೂವುದು ಇವರಿಗಿರುವ ಸಾಮಾಜಿಕ ಆಸ್ಥೆಗೆ. ಇವರ ಪ್ರತಿ ಬೈಕ್ ರೈಡ್‌ಗೆ ಒಂದು ಸಾಮಾಜಿಕ ಉದ್ದೇಶ ಇದ್ದೇ ಇರುತ್ತದೆ. ಒಮ್ಮೆ ಮಹಿಳಾ ದಿನಾಚರಣೆ 'ಸಖಿ' ಹೆಸರಲ್ಲಿ ಮಹಿಳೆಯರಿಗೆ ಬೈಕ್ ಕಲಿಸಿದರೆ, ಮತ್ತೊಮ್ಮೆ ಲೇಹ್‌ಗೆ ಹೋಗಿ ಯೋಧರ ವಿಧವೆಯರನ್ನು ಭೇಟಿ ಮಾಡಿ ಅವರೊಟ್ಟಿಗೆ ಸಮಯ ಕಳೆದಿದ್ದಾರೆ. ಎಲ್ಲೇ ಹೋಗಲಿ ಇವರ ಪ್ರೀತಿಯ ಬುಲೆಟ್‌ಗಳು ಇವರ ಜೊತೆಗಿದ್ದೇ ಇರುತ್ತವೆ.

60 ಸದಸ್ಯರಿರುವ ಡೆವಿಲ್ಸ್ ತಂಡ

60 ಸದಸ್ಯರಿರುವ ಡೆವಿಲ್ಸ್ ತಂಡ

ಇವರ ಸಾಮಾಜಿಕ ಕಳಕಳಿಯನ್ನು ಕಂಡು ಹಲವು ಬೈಕ್‌ ರೈಡರ್‌ಗಳು ಇವರ ತಂಡ ಸೇರಿಕೊಂಡಿದ್ದಾರೆ. ಎರಡಂಕಿ ದಾಟದಷ್ಟು ಸದಸ್ಯರಿದ್ದ ಡೆವಿಲ್ಸ್‌ ಆಫ್ ಹೆವೆನ್‌ನಲ್ಲಿ ಇಂದು ಬರೋಬ್ಬರಿ 60 ಸದಸ್ಯರಿದ್ದಾರೆ. ಈ ತಂಡದ ಸದಸ್ಯರೇ ಇವರ ಬಲ ಎನ್ನುತ್ತಾರೆ ತಂಡದ ಮುಖಂಡ ಶಬರಿನಾಥನ್ ಮುರುಗನ್.

ಸ್ವಾತಂತ್ರ್ಯ ದಿನಾಚರಣೆ : ಮಳೆಯ ಹಾಡು, ಅರ್ಧ ಭಾಷಣ, ಲಾಡು!ಸ್ವಾತಂತ್ರ್ಯ ದಿನಾಚರಣೆ : ಮಳೆಯ ಹಾಡು, ಅರ್ಧ ಭಾಷಣ, ಲಾಡು!

ಐದೇ ದಿನದಲ್ಲಿ ಯೋಜನೆ ತಯಾರಿ

ಐದೇ ದಿನದಲ್ಲಿ ಯೋಜನೆ ತಯಾರಿ

ಈ ಬಾರಿ ಏನಾದರೂ ದೊಡ್ಡದಾಗಿ ಮಾಡಬೇಕೆಂಬ ಹಂಬಲ ಈ ತಂಡದ ಮುಖ್ಯಸ್ಥರಾದ ಶಬರಿ, ಗೌಥಮ್, ಜೋಯಲ್ ಅವರಿಗೆ ಬಂದಿದ್ದೇ ತಡ. ತಂಡದ ಮತ್ತೊಬ್ಬ ಸಕ್ರಿಯ ಸದಸ್ಯ ಮಧು ಗೌಡನೊಂದಿಗೆ ಮಾತನಾಡಿ ಅವರದ್ದೇ ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಯೋಜನೆ ತಯಾರಿಸಿದ್ದಾರೆ. ಸೋಮವಾರ ಹುಟ್ಟಿದ ಯೋಜನೆ ಶನಿವಾರಕ್ಕೆಲ್ಲಾ ಕಾರ್ಯರೂಪಕ್ಕಿಳಿದಿದೆ. ಇದು ಈ ತಂಡದ ವೇಗಕ್ಕೆ ಸಾಕ್ಷಿ.

ಶನಿವಾರ ಸಂಜೆ ಪ್ರಾರಂಭವಾದ ಕಾರ್ಯ

ಶನಿವಾರ ಸಂಜೆ ಪ್ರಾರಂಭವಾದ ಕಾರ್ಯ

ಶನಿವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ತಮ್ಮ ಮೆಚ್ಚಿನ ಬುಲೆಟ್‌ಗಳಲ್ಲಿ ಬಂದ ಡೆವಿಲ್ಸ್‌ ತಂಡದಲ್ಲಿ ಐವರು ಹುಡುಗಿಯರು ಇನ್ನುಳಿದವರು ಹುಡುಗರು. ಮೊದಲಿಗೆ ಇವರ ಮುಂದಿದ್ದ ಪ್ರಮುಖ ಕೆಲಸ, ಕಟ್ಟಡಳಿಗೆ ಮೆತ್ತಿದ್ದ ಧೂಳುಗಳನ್ನು ಕೊಡವಿ. ರಬ್‌ ಮಾಡಿ ಬಣ್ಣ ಪಡೆಯಲು ತಯಾರು ಮಾಡುವುದು. ಅವುಗಳ ಸ್ವಚ್ಛತೆ ರಬ್ಬಿಂಗಿಗೇ ಬಹಳ ಸಮಯ ಮತ್ತು ಶ್ರಮ ಹಿಡಿಯಿತು ಎನ್ನುತ್ತಾರೆ ಗುಂಪಿನ ಮುಖಂಡ ಶಬರಿನಾಥನ್ ಮುರುಗನ್.

ಐಟಿ ಉದ್ಯೋಗವಸ್ಥರ ಬಣ್ಣದ ಸಹವಾಸ

ಐಟಿ ಉದ್ಯೋಗವಸ್ಥರ ಬಣ್ಣದ ಸಹವಾಸ

ಬಹುತೇಕ ಐಟಿ ಕಂಪೆನಿಗಳ ನೌಕರರಾದ ಇವರ ತಂಡದಲ್ಲಿ ಕೆಲವು ಹವ್ಯಾಸಿ ಚಿತ್ರಕಾರರೂ ಇದ್ದರು. ಇವರ ಸಹಾಯದಿಂದ ಬಣ್ಣಗಳನ್ನು ಮಿಕ್ಸ್‌ ಮಾಡಿಸಿ ಕೆಲಸ ಶುರುವಚ್ಚಿದ್ದರು. ಮಳೆ, ಅಗತ್ಯ ಕೆಲವು ಪರಿಕರಗಳು ಕೊರತೆ ಹೀಗೆ ಅಡ್ಡಿ ಬಂದ ಕೆಲವು ಸಣ್ಣ ತಡೆಗಳನ್ನು ದಾಟಿಕೊಂಡು ಹಿಡಿದ ಕೆಲಸ ಮುಗಿಸಿಯೇ ಬಿಟ್ಟರು. ಶನಿವಾರ ಮಧ್ಯಾಹ್ನ ಪ್ರಾರಂಭವಾದ ಪೇಂಟಿಂಗ್ ಕಾರ್ಯ ಶನಿವಾರ ಮುಗಿಯುವ ವೇಳೆಗೆ ಭಾನುವಾರ ತಡ ರಾತ್ರಿ ಆಗಿತ್ತು.

ಮೆಚ್ಚುಗೆ ಕುಹುಕ ಎರಡೂ ಎದುರಿಸಿದ ತಂಡ

ಮೆಚ್ಚುಗೆ ಕುಹುಕ ಎರಡೂ ಎದುರಿಸಿದ ತಂಡ

ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಬಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಚ್ಚುಗೆಯ ಮಾತುಗಳನ್ನು ಹೇಳಿ ಇನ್ನಷ್ಟು ಕೆಲಸ ಮಾಡಲು ಉತ್ಸಾಹ ನೀಡಿದರಂತೆ. ಆದರೆ ಕೆಲವು ಕೊಂಕು ಮಾತುಗಳನ್ನೂ ಈ ತಂಡ ಕೇಳಬೇಕಾಯಿತು. ಆದರೆ ಅವರ ಮಾತುಗಳು ತಂಡದ ಉತ್ಸಾವನ್ನೇನು ಕುಂದಿಸಲಿಲ್ಲ.

60000 ಬಣ್ಣಗಳಿಗೆ ವೆಚ್ಚ

60000 ಬಣ್ಣಗಳಿಗೆ ವೆಚ್ಚ

ಬಣ್ಣಗಳ ಖರೀದಿಗೆ ಸುಮಾರು 60000 ವೆಚ್ಚವಾಗಿದೆ. ತಂಡದ ಎಲ್ಲರೂ ಇದನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದೇವೆ, ಶಾಲೆಯ ಅಂಗಳದಲ್ಲೇ ಇರುವ ಅಂಗನವಾಡಿ ಮಕ್ಕಳಿಗೆ ಕೂರಲು ಚೇರ್, ಮಕ್ಕಳಿಗೆ ಆಟಿಕೆಗಳನ್ನೂ ಈ ತಂಡ ನೀಡುತ್ತಿದೆ. ಅದಕ್ಕೆ ಇನ್ನೊಂದು 50000 ಖರ್ಚಾಗುತ್ತಿದೆ. ಅದನ್ನೂ ಈ ತಂಡದ ಸದಸ್ಯರು ಭರಿಸುತ್ತಿದ್ದಾರೆ. *ಪ್ರತಿ ವರ್ಷವೂ ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಪ್ರಾಮಾಣದಷ್ಟು ಹಣವನ್ನು ಮತ್ತು ಸಮಯವನ್ನು ಸಮಾಜದ ಒಳಿತಿಗೆ ವಿನಿಯೋಗಿಸುವ ಪರಿಪಾಠವನ್ನು ಈ ತಂಡ ಪಾಲಿಸಿಕೊಂಡು ಬಂದಿದೆ.

English summary
Devils of heaven, Lycan riders bike rider team painted government school in Chikkaballapur district Sugtoor village. 17 members team with 5 girls worked for 2 days and painted 9 buildings along with compound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X