ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕರನ್ನು ಕೇಳಿ ಅಮೆರಿಕಕ್ಕೆ ಹೋಗಬೇಕಾ : ದೇವೇಗೌಡ

|
Google Oneindia Kannada News

ಬೆಂಗಳೂರು, ಜೂನ್ 30 : 'ವಿದೇಶಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಅನುಮತಿ ತೆಗೆದುಕೊಂಡು ಹೋಗಬೇಕಾ?' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದರು.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ದೇವೇಗೌಡ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿದೇಶ ಪ್ರವಾಸವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಅಕ್ರೋಶವನ್ನು ವ್ಯಕ್ತಪಡಿಸಿದರು.

ನ್ಯೂಜೆರ್ಸಿಯ ಸಾಂಸ್ಕೃತಿಕ ಕೇಂದ್ರದ ಬಗ್ಗೆ ಕುಮಾರಸ್ವಾಮಿ ಮೆಚ್ಚುಗೆನ್ಯೂಜೆರ್ಸಿಯ ಸಾಂಸ್ಕೃತಿಕ ಕೇಂದ್ರದ ಬಗ್ಗೆ ಕುಮಾರಸ್ವಾಮಿ ಮೆಚ್ಚುಗೆ

'ಎಚ್.ಡಿ.ಕುಮಾರಸ್ವಾಮಿ ಅವರು ವಿದೇಶಕ್ಕೆ ಯಡಿಯೂರಪ್ಪ, ಈಶ್ವರಪ್ಪ ಅವರ ಅನುಮತಿ ತೆಗೆದುಕೊಂಡು ಹೋಗಬೇಕಿತ್ತಾ?' ಎಂದು ಪ್ರಶ್ನೆ ಮಾಡಿದರು. ವಿದೇಶ ಪ್ರವಾಸವನ್ನು ಟೀಕಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಜೆರ್ಸಿಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಭವ್ಯ ಸ್ವಾಗತನ್ಯೂಜೆರ್ಸಿಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಭವ್ಯ ಸ್ವಾಗತ

Deve Gowda upset with Karnataka BJP leaders

'ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಸಿಎಂ ಹೋಗಿದ್ದಾರೆ. ಯಾರ ದುಡ್ಡಿನಿಂದಲೂ ಮುಖ್ಯಮಂತ್ರಿಗಳು ವಿದೇಶಕ್ಕೆ ಹೋಗಿಲ್ಲ. ಅದಕ್ಕೂ ಹೋಗಬಾರದು ಅಂದ್ರೆ ಹೇಗೆ?, ಬೆಳಗ್ಗೆಯಿಂದ ಸಂಜೆ ತನಕ ಹೀಗೆ ಮಾತಾಡೋದು ತಮಾಷೆನಾ?' ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರ ಯುಎಸ್ ಪ್ರವಾಸದ ಬಗ್ಗೆ ಈಶ್ವರಪ್ಪ ವ್ಯಂಗ್ಯಕುಮಾರಸ್ವಾಮಿ ಅವರ ಯುಎಸ್ ಪ್ರವಾಸದ ಬಗ್ಗೆ ಈಶ್ವರಪ್ಪ ವ್ಯಂಗ್ಯ

ಎಚ್.ಡಿ.ಕುಮಾರಸ್ವಾಮಿ ಅವರು ನ್ಯೂಜೆರ್ಸಿಯ ಸೋಮರ್‍ಸೆಟ್ ಎಂಬಲ್ಲಿ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದಾರೆ.

ಬಿಜೆಪಿ ಎಚ್.ಡಿ.ಕುಮಾರಸ್ವಾಮಿ ಅವರ ಅಮೆರಿಕ ಪ್ರವಾಸವನ್ನು ಟೀಕಿಸಿದೆ. 2 ದಿನಗಳ ಗ್ರಾಮ ವಾಸ್ತವ್ಯದ ಬಳಿಕ ಅಮೆರಿಕಕ್ಕೆ ತೆರಳಿರುವುದಕ್ಕೆ ಬಿಜೆಪಿ ಟೀಕಿಸಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ಖರ್ಚಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ.

ಕೆ.ಎಸ್.ಈಶ್ವರಪ್ಪ ಅವರು ಟ್ವಿಟರ್ ಮೂಲಕ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಟೀಕಿಸಿದ್ದು, 'ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ. ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ. ಯಾರಾದರೂ ಪ್ರಶ್ನಿಸಿದರೆ ನೀವೇನು ನಂಗೆ ವೋಟ್ ಹಾಕಿದೀರಾ ಅಂತ ಪ್ರಶ್ನಿಸೋ ಮುಖ್ಯಮಂತ್ರಿಗಳೇ, ನಿಮ್ಮ ಪಾರ್ಟಿ ಹೆಸರನ್ನು ಜಾತ್ಯತೀತ ಜನತಾದಳದ ಬದಲು ಪ್ರಶ್ನಾತೀತ ಜನತಾದಳ ಅಂತ ಇಟ್ಟುಬಿಡಿ' ಎಂದು ಟೀಕಿಸಿದ್ದಾರೆ.

English summary
JD(S) supremo H.D.Deve Gowda upset with Karnataka BJP leaders who criticized Chief Minister H.D.Kumaraswamy America tour. Kumaraswamy in private visit to the US from June 28 to July 6, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X