ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್‌ನಲ್ಲಿ ದೇವೇಗೌಡ ಉತ್ತರ

|
Google Oneindia Kannada News

ಬೆಂಗಳೂರು, ಫೆಬ್ರವರಿ 07: ಸಂಸತ್ತಿನಲ್ಲಿ ಇಂದು ಸುಧೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಸಂಸತ್‌ನಲ್ಲಿ ಸೋನಿಯಾ ಗಾಂಧಿ ಪಕ್ಕ ಕೂತಿದ್ದ ದೇವೇಗೌಡ ಅವರನ್ನು ತಮ್ಮ ಭಾಷಣದ ಮಧ್ಯೆ ಒಮ್ಮೆ ಕೆಣಕಿದರು. ಆದರೆ ಆ ಸಮಯದಲ್ಲಿ ಗಂಭೀರವಾಗಿ ಕೂತಿದ್ದ ದೇವೇಗೌಡ ಅವರು ಮೋದಿ ಅವರಿಗೆ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದಾರೆ.

ಸಂಸತ್ತಿನಲ್ಲಿ ಮಾತನಾಡುತ್ತಾ ಮೋದಿ ಅವರು, 'ದೇವೇಗೌಡ ಅವರು ಇಂದು ಇಲ್ಲಿ ಕೂತಿದ್ದಾರೆ. ಅವರನ್ನು ಮಣ್ಣಿನ ಮಗ ಎಂದು ಕರೆಯಲಾಗುತ್ತದೆ. ಅವರ ರಾಜ್ಯದ ಕತೆ ಏನಾಗಿದೆ ಎಂದು ಹೇಳುತ್ತೇನೆ ಕೇಳಿ' ಎಂದು ರಾಜ್ಯದಲ್ಲಿ ಸಾಲಮನ್ನಾ ಯೋಜನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.

ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ

48 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇವೆ ಎಂದು ಅವರು ಹೇಳಿದ್ದರು ಆದರೆ ಈ ವರೆಗೆ ಕೇವಲ 7000 ರೈತರ ಸಾಲ ಮನ್ನಾ ಆಗಿದೆ ಎಂದು ಮೋದಿ, ರಾಜ್ಯದಲ್ಲಿನ ರೈತರ ಸಾಲಮನ್ನಾ ಯೋಜನೆಯನ್ನು ಟೀಕಿಸಿದರು.

Deve Gowda tweet reply to Narendra Modi

ಮೋದಿ ಅವರು ಮಾತನಾಡುವಾಗ ದೇವೇಗೌಡರು ಗಂಭೀರವಾಗಿ ಕೂತಿದ್ದರು. ಖರ್ಗೆ ಅವರು ತಾವು ಕೂತಿದ್ದ ಜಾಗದಿಂದಲೇ ಮೋದಿ ಅವರಿಗೆ ಉತ್ತರ ನೀಡಲು ಯತ್ನಿಸಿದರು ಆದರೆ ದೇವೇಗೌಡ ಅವರು ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಸಂಸತ್‌ ಕಲಾಪ ಮುಗಿದ ನಂತರ ಈಗ ಟ್ವಿಟ್ಟರ್‌ನಲ್ಲಿ ದೇವೇಗೌಡ ಅವರು ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.

ಬಿಜೆಪಿ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ : ಸಿದ್ದರಾಮಯ್ಯ ಬಿಜೆಪಿ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ : ಸಿದ್ದರಾಮಯ್ಯ

ನಾವು ಕೊಟ್ಟಿದ್ದ ಭರವಸೆ ರೈತರ ಸಾಲಮನ್ನಾ; ಅದು ಜಾರಿಯಲ್ಲಿದೆ. ಆದರೆ ಮೋದಿ ಭರವಸೆ ನೀಡಿದ್ದ ರಾಮ ಮಂದಿರ ನಿರ್ಮಾಣ, ಸ್ವಚ್ಛ ಗಂಗಾ, ಖಾತೆಗೆ 15 ಲಕ್ಷ ಭರವಸೆಗಳು ಇನ್ನೂ ಈಡೇರಿಲ್ಲ. ಭರವಸೆ ಈಡೇರಿಸದೇ ಇರುವುದಕ್ಕಿಂತಲೂ ಜಾರಿಯಲ್ಲಿರುವುದು ಉತ್ತಮ ಅಲ್ಲವೇ ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.

ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು

ಬಿಜೆಪಿಯ ಜಾರಿಯಲ್ಲಿರುವ ಒಂದೇ ಕಾರ್ಯವೆಂದರೆ 'ಆಪರೇಷನ್ ಕಮಲ' ಮಾತ್ರ. ಅದನ್ನು ಅವರು ಕರ್ನಾಟಕದಲ್ಲಿ ಬಳಸುತ್ತಿದ್ದಾರೆ ಎಂದು ದೇವೇಗೌಡ ಅವರು ವ್ಯಂಗ್ಯ ಮಾಡಿದ್ದಾರೆ.

English summary
Deve Gowda gives tweet reply to Narendra Modi for his comments on Karnataka government's farmer loan wavier. He said we are working to full fill our promise. but Modi's promise of Ram Mandir construction, 15 lakh to account, and Clean Ganga are not yet started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X