ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ನೀಚ ಮುಖ್ಯಮಂತ್ರಿ ಅಂದಿದ್ದ ದೇವೇಗೌಡ್ರು ಈಗ ಅವರನ್ನ ಪಕ್ಕದಲ್ಲೇ ಕೂರ್ಸಿದ್ರು

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರು ಸಿದ್ದರಾಮಯ್ಯನವರನ್ನ ಅಂದು ಟೀಕಿಸಿ ಇಂದು ಜೊತೆಯಾಗಿದ್ದು ಯಾಕೆ? | Oneindia Kannada

'ಮಾತು ಮನೆ ಕೆಡಿಸ್ತು' ಅನ್ನೋ ಗಾದೆಮಾತು ರಾಜಕೀಯಕ್ಕೆ ಅನ್ವಯಿಸುವುದಿಲ್ಲವೋ ಏನೋ? ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಬಿಜೆಪಿಯಿಂದ ದೇಶವನ್ನು ರಕ್ಷಿಸುವ ಏಕೈಕ ಉದ್ದೇಶದಿಂದ (ಅವರೇ ಹೇಳಿದಂತೆ) ಜಂಟಿ ಪತ್ರಿಕಾಗೋಷ್ಠಿಯನ್ನು ಶನಿವಾರ (ಅ 20) ನಡೆಸಿದ್ದರು.

ದಶಕಗಳ ನಂತರ ಗುರುಶಿಷ್ಯರ ಸಮಾಗಮದಂತೆ ಇದ್ದ ಗೋಷ್ಠಿ, ಇಷ್ಟುದಿನ ಹಾವು-ಮುಂಗುಸಿಯಂತಿದ್ದ ನೀವು, ಈಗ ಒಂದಾಗಿದ್ದೇವೆ ಎಂದರೆ ಜನ ನಂಬುತ್ತಾರಾ ಎನ್ನುವ ಮಾಧ್ಯಮದ ಕಡೆಯಿಂದ ಬಂದ ಪ್ರಶ್ನೆಗೆ, ದೇವೇಗೌಡ್ರು ಗರಂ ಆದರು.

ಕೆಲವೇ ಕೆಲವು ತಿಂಗಳ ಹಿಂದಿನ ರಾಜಕೀಯ ಮೇಲಾಟವನ್ನು ಒಮ್ಮೆ ಅವಲೋಕಿಸುವುದಾದರೆ, ಅಪ್ಪಮಕ್ಕಳ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಅಂದು ಖಾರವಾಗಿ ಪ್ರತಿಕ್ರಿಯಿಸಿದ್ದ ದೇವೇಗೌಡರು, ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯನಂತಹ ನೀಚ ಮುಖ್ಯಮಂತ್ರಿಯನ್ನು ನೋಡಿಲ್ಲ ಅಂದಿದ್ದರು.

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು? ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?

ಉಪಚುನಾವಣೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ, ರಾಜ್ಯ ರಾಜಕಾರಣದ ಇಬ್ಬರು ಘಟಾನುಗಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ, ಪ್ರಮುಖವಾಗಿ ಬಿಜೆಪಿಗೆ ಹಲವು ಸಂದೇಶಗಳನ್ನು ರವಾನಿಸುವ ಪ್ರಯತ್ನವನ್ನು ಮಾಡಿದ್ದಾರೆ. ಒಂದರ್ಥದಲ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇನ್ನಷ್ಟು ಪಕ್ಕಾ ಆದಂತಾಗಿದೆ.

ಇನ್ನೇನು ಹತ್ತು ದಿನಗಳಲ್ಲಿ ನಡೆಯುವ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ರಾಮನಗರ, ಶಿವಮೊಗ್ಗ, ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಗೋಷ್ಠಿಯಲ್ಲಿ ಗೌಡ್ರು, ಗರಂ ಆಗಿದ್ದು ಹೀಗೆ..

ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ

ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ

ಕಳೆದ ಫೆಬ್ರವರಿಯಲ್ಲಿ, ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ಯಾವ ಶಕ್ತಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆಯೋ ಅದೇ ಶಕ್ತಿ ನಿಮ್ಮನ್ನು ಆ ಸ್ಥಾನದಿಂದ ಕಿತ್ತೆಸೆಯುವ ಪ್ರಯತ್ನ ಮಾಡುತ್ತಿದೆ. ಅಧಿಕಾರದಿಂದ ನಿಮ್ಮನ್ನೇ ಕೆಳಗಿಳಿಸಿಯೇ ತೀರುತ್ತೇವೆ. ಖಜಾನೆ ಲೂಟಿ ಮಾಡುತ್ತಿದ್ದೀರಿ, ಇನ್ನೇನು ನಿಮ್ಮ ಸಮಯ ಮುಗಿತ ಬಂತು, ಇನ್ನು 120 ದಿನ ಮಾತ್ರ. ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದು ನಾನು ಜೀವನದಲ್ಲಿ ಮಾಡಿದ ಮಹಾ ಅಪರಾಧ. ಇವರೊಬ್ಬ ಕೀಳುಮಟ್ಟದ ರಾಜಕಾರಣಿ - ಇದು ಸಿದ್ದರಾಮಯ್ಯನವರನ್ನು ಗೌಡ್ರು ಅಂದು ಟೀಕಿಸಿದ್ದ ಪರಿ.

ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೇ ಟಿಕೆಟ್‌ ನೀಡಿದ ದೇವೇಗೌಡ ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೇ ಟಿಕೆಟ್‌ ನೀಡಿದ ದೇವೇಗೌಡ

ಅಪ್ಪಮಕ್ಕಳ ಪಕ್ಷ ಇನ್ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ

ಅಪ್ಪಮಕ್ಕಳ ಪಕ್ಷ ಇನ್ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ

ಕಳೆದ ಅಸೆಂಬ್ಲಿ ಚುನಾವಣೆಯ ಸಮಾವೇಶವೊಂದರಲ್ಲಿ (ಕೋಲಾರ ಜಿಲ್ಲೆ) ಮಾತನಾಡುತ್ತಿದ್ದ ಅಂದಿನ ಸಿಎಂ ಸಿದ್ದರಾಮಯ್ಯ, ಅಪ್ಪಮಕ್ಕಳ ಪಕ್ಷ ಇನ್ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ. ನಾವು ಕೆಲಸ ಮಾಡಿ, ನಿಮ್ಮ ಮುಂದೆ ಬಂದು ನಿಂತು ಕೂಲಿ ಕೇಳುತ್ತಿದ್ದೇನೆ. ನಾನೇ ಕಿಂಗ್ ಮೇಕರ್ ಅನ್ನುತ್ತಿರುವ, ಕುಮಾರಸ್ವಾಮಿ ಅಪ್ಪರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತಂತ್ರ ಬದಲು! ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತಂತ್ರ ಬದಲು!

ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸಬೇಡಿ ಎಂದು ಗೌಡ್ರು ಗರಂ

ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸಬೇಡಿ ಎಂದು ಗೌಡ್ರು ಗರಂ

ಮೊನ್ನೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದರ ಪ್ರಶ್ನೆಗೆ ದೇವೇಗೌಡರು ತುಂಬಾನೇ ಸಿಟ್ಟಾದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎಷ್ಟೊಂದು ವಾಗ್ಯುದ್ದ ನಿಮ್ಮಿಬ್ಬರ ನಡುವೆ ನಡೆದಿತ್ತು. ಈಗ ಚುನಾವಣೆ ಹತ್ತಿರ ಬರುತ್ತಿದೆ ಎಂದು ಒಂದಾದರೆ, ಜನ ನಂಬುತ್ತಾರಾ ಸರ್ ಎನ್ನುವ ಪ್ರಶ್ನೆಗೆ, ಏನ್ರೀ ನಿಮ್ಮ ವಯಸ್ಸು.. ಯಾವ ಮಾಧ್ಯಮ ಏನೇನು ಮಾಡಿದೆ ಎನ್ನುವುದು ಗೊತ್ತಿದೆ. ಏನೇನೋ ಪ್ರಶ್ನೆಯನ್ನು ಕೇಳಿ, ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸಬೇಡಿ ಎಂದು ಗೌಡ್ರು ಗರಂ ಆದರು.

ಮಂಡ್ಯದಲ್ಲಿ ತೆನೆ ವಿರುದ್ಧದ ಅಸಮಾಧಾನ ಕಮಲಕ್ಕೆ ಲಾಭನಾ? ಮಂಡ್ಯದಲ್ಲಿ ತೆನೆ ವಿರುದ್ಧದ ಅಸಮಾಧಾನ ಕಮಲಕ್ಕೆ ಲಾಭನಾ?

ಯಾಕೆ ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದೀರಾ

ಯಾಕೆ ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದೀರಾ

ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ಗೌಡ್ರು, ನಾವಿಲ್ಲಿ ಒಂದಾಗಿರುವುದು ದೇಶದ ಹಿತಕ್ಕಾಗಿ. ಹಳೆಯದನ್ನು ಕೇಳಿ ಯಾಕೆ ನಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದೀರಾ. ನಿನ್ನೆಯದನ್ನು ಮರೆತುಬಿಡಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಒಂದಾಗಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ನಿಶ್ಚಿತ - ಎಚ್ ಡಿ ದೇವೇಗೌಡ.

ರೀ ಸುಮ್ನೆ ಇರ್ರೀ.. ಎಲ್ಲಾ ಗೊತ್ತಿದೆ ನನಗೆ

ರೀ ಸುಮ್ನೆ ಇರ್ರೀ.. ಎಲ್ಲಾ ಗೊತ್ತಿದೆ ನನಗೆ

ನೀವೇನೋ ಹೊಂದಾಣಿಕೆ ಮಾಡಿಕೊಂಡಿದ್ದೀರಾ, ಅಲ್ಲಿ ಕಾರ್ಯಕರ್ತರ ಪಾಡೇನು ಎನ್ನುವ ಪ್ರಶ್ನೆಗೂ ಸಿಟ್ಟಾದ ಗೌಡ್ರು, ರೀ ಸುಮ್ನೆ ಇರ್ರೀ.. ಎಲ್ಲಾ ಗೊತ್ತಿದೆ ನನಗೆ ಎಂದಿದ್ದಾರೆ. ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವಿದೆ ಎನ್ನುವುದನ್ನು ಅರಿತಿದ್ದೇನೆ. ನೀವೆಲ್ಲಾ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನಾವಿಲ್ಲಿ ಇಬ್ಬರೂ ಜೊತೆಯಾಗಿರುವುದು ದೇಶದ ಹಿತದೃಷ್ಟಿಗಾಗಿ ಎಂದು ಗೌಡ್ರು ಹೇಳಿದ್ದಾರೆ.

English summary
JDS supremo HD Devegowda and former CM Siddaramaiah jonit press conference. This press conference shows, how the political situation will change in just copule of months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X