ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಷರತ್ತು ಹಾಕಿದ ದೇವೇಗೌಡ

|
Google Oneindia Kannada News

Recommended Video

Lok Sabha Elections 2019 : ಕಾಂಗ್ರೆಸ್ ಗೆ ಷರತ್ತನ್ನ ವಿಧಿಸಿದ ಎಚ್ ಡಿ ದೇವೇಗೌಡ | Oneindia Kannada

ಬೆಂಗಳೂರು, ಮಾರ್ಚ್‌ 13: ಈ ಬಾರಿ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಚುನಾವಣಾ ರಾಜಕೀಯದಿಂದ ನಿವೃತ್ತಿಹೊಂದುತ್ತೇನೆ ಎಂದಿದ್ದ ದೇವೇಗೌಡ ಅವರು ಮನಸ್ಸು ಬದಲಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಆದರೆ ತಾವು ಚುನಾವಣೆಗೆ ಸ್ಪರ್ಧಿಸಲು ಅವರು ಕಾಂಗ್ರೆಸ್‌ಗೆ ಷರತ್ತೊಂದನ್ನು ಹಾಕಿದ್ದಾರೆ. ತಮ್ಮ ಷರತ್ತು ಈಡೇರಿಸದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೈಕಮಾಂಡ್‌ಗೂ ಹೇಳಿದ್ದಾರೆ.

ಸೀಟು ಹಂಚಿಕೆ: ಜೆಡಿಎಸ್‌ಗೆ 7, ಕಾಂಗ್ರೆಸ್‌ 21: ಯಾವ ಕ್ಷೇತ್ರ ಯಾರಿಗೆ?ಸೀಟು ಹಂಚಿಕೆ: ಜೆಡಿಎಸ್‌ಗೆ 7, ಕಾಂಗ್ರೆಸ್‌ 21: ಯಾವ ಕ್ಷೇತ್ರ ಯಾರಿಗೆ?

ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮಾತ್ರವೇ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ದೇವೇಗೌಡ ಅವರು ಹೇಳಿದ್ದಾರೆ. ಮೈಸೂರನ್ನು ನೀಡಲಾಗದಿದ್ದರೆ ತುಮಕೂರನ್ನಾದರೂ ನಮಗೆ ನೀಡಲೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಅನುಪಾತ ಅಂತಿಮವಾಗಿದೆ, ಆದರೆ ಕ್ಷೇತ್ರ ಹಂಚಿಕೆ ಅಂತಿಮವಾಗಿಲ್ಲ. ಮೈಸೂರು ಅಥವಾ ತುಮಕೂರನ್ನು ತಮಗೆ ನೀಡಲೇ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ ಆದರೆ ಇದಕ್ಕೆ ಕಾಂಗ್ರೆಸ್ ಒಪ್ಪುತ್ತಿಲ್ಲ.

ಬೆಂಗಳೂರು ಉತ್ತರದಿಂದ ದೇವೇಗೌಡ ಸ್ಪರ್ಧೆ

ಬೆಂಗಳೂರು ಉತ್ತರದಿಂದ ದೇವೇಗೌಡ ಸ್ಪರ್ಧೆ

ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದು ಬಹುತೇಕ ಅಂತಿಮವಾಗಿದೆ. ಆದರೆ ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟರಷ್ಟೆ ತಾವು ಸ್ಪರ್ಧಿಸುವುದಾಗಿ ಅವರು ಹೇಳಿರುವುದು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'! ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'!

ತುಮಕೂರು ಬಿಟ್ಟು ಕೊಡಲು ಪರಂ ಒಪ್ಪುತ್ತಿಲ್ಲ

ತುಮಕೂರು ಬಿಟ್ಟು ಕೊಡಲು ಪರಂ ಒಪ್ಪುತ್ತಿಲ್ಲ

ತುಮಕೂರಿನಲ್ಲಿ ಪ್ರಸ್ತುತ ಕಾಂಗ್ರೆಸ್‌ ಸಂಸದರಿದ್ದು ಆ ಕ್ಷೇತ್ರವನ್ನು ಬಿಟ್ಟುಕೊಡಲು ಮೈತ್ರಿ ಸೂತ್ರ ಒಪ್ಪುವುದಿಲ್ಲ. ತುಮಕೂರು ಬಿಟ್ಟುಕೊಡಲು ಡಿಸಿಎಂ ಪರಮೇಶ್ವರ್ ಅವರು ಸುತಾರಾಂ ಸಿದ್ಧರಿಲ್ಲ. ಮೈಸೂರು ಬಿಟ್ಟುಕೊಡಲು ಸಿದ್ದರಾಮಯ್ಯ ಅವರು ಒಪ್ಪುತ್ತಿಲ್ಲ.

ಹಳೆ ಮೈಸೂರಲ್ಲಿ ಇನ್ನೊಂದು ಸ್ಥಾನಕ್ಕೆ ಒತ್ತಾಯ

ಹಳೆ ಮೈಸೂರಲ್ಲಿ ಇನ್ನೊಂದು ಸ್ಥಾನಕ್ಕೆ ಒತ್ತಾಯ

ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ವಿಜಯಪುರ, ಉತ್ತರ ಕನ್ನಡ ಕ್ಷೇತ್ರಗಳನ್ನು ಪಡೆದುಕೊಂಡಿರುವ ಜೆಡಿಎಸ್‌, ಹಳೆ ಮೈಸೂರು ಭಾಗದ ಇನ್ನೊಂದು ಕ್ಷೇತ್ರ ಬೇಕು ಎನ್ನುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಆಗಿರುವ ಕಾರಣ ಜೆಡಿಎಸ್ ಮೈಸೂರು ಅಥವಾ ತುಮಕೂರಿಗೆ ಒತ್ತಾಯ ಮಾಡುತ್ತಿದೆ.

ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ದೇವೇಗೌಡರು ಚುನಾವಣೆಗೆ ಸ್ಪರ್ಧಿಸದಿದ್ದರೆ ನಷ್ಟ

ದೇವೇಗೌಡರು ಚುನಾವಣೆಗೆ ಸ್ಪರ್ಧಿಸದಿದ್ದರೆ ನಷ್ಟ

ದೇವೇಗೌಡ ಅವರು ಚುನಾವಣೆ ಸ್ಪರ್ಧಿಸಲಿಲ್ಲವೆಂದರೆ ಒಂದು ಸೀಟು ಕಳೆದುಕೊಂಡಂತಾಗುತ್ತದೆ. ದೇವೇಗೌಡ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಸಜ್ಜಾಗಿದ್ದು, ಅಲ್ಲಿ ಪ್ರಸ್ತುತ ಸದಾನಂದಗೌಡ ಅವರು ಸಂಸದರಾಗಿದ್ದಾರೆ. ಇಬ್ಬರು ಗೌಡರ ನಡುವೆ ಗೆಲ್ಲುವ ಸಾಧ್ಯತೆ ದೇವೇಗೌಡ ಅವರಿಗೆ ಹೆಚ್ಚಿದೆ ಎನ್ನಲಾಗುತ್ತಿದೆ.

ಇಂದು ಕೊನೆಯ ಸಭೆ

ಇಂದು ಕೊನೆಯ ಸಭೆ

ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಇಂದು ಕೊನೆಯ ಸಭೆ ನಡೆಯುವ ಸಾಧ್ಯತೆ ಇದ್ದು, ಇಂದು ಕ್ಷೇತ್ರ ವಿಂಗಡಣೆ ಬಹುತೇಕ ಅಂತಿಮವಾಗಲಿದೆ. ಇಂದು ಎಲ್ಲ ಅಸ್ಪಷ್ಟತೆಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ.

ಕುಮಾರಸ್ವಾಮಿಗೆ ನಿಖಿಲ್ ಸ್ಪರ್ಧೆಯ ಆತಂಕ, ರಾತ್ರೋ ರಾತ್ರಿ ಜ್ಯೋತಿಷಿ ಮನೆಗೆ ದೌಡುಕುಮಾರಸ್ವಾಮಿಗೆ ನಿಖಿಲ್ ಸ್ಪರ್ಧೆಯ ಆತಂಕ, ರಾತ್ರೋ ರಾತ್ರಿ ಜ್ಯೋತಿಷಿ ಮನೆಗೆ ದೌಡು

English summary
Deve Gowda put condition to congress, if he need to contest for elections then congress should leave Mysuru or Tumakuru constituency to JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X