ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೃಪ್ತರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಖರ್ಗೆ, ದೇವೇಗೌಡ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಹಾಗು ಇತರ ಟಾಪ್ ನಾಯಕರು ಮುಂಬೈಗೆ ಪಯಣ | Oneindia Kannada

ಬೆಂಗಳೂರು, ಜುಲೈ 15: ಅತೃಪ್ತ ಶಾಸಕರೊಂದಿಗೆ ಮಾತನಾಡಲು ಮುಂಬೈಗೆ ಕಾಂಗ್ರೆಸ್‌-ಜೆಡಿಎಸ್‌ನ ಟಾಪ್ ನಾಯಕರು ಇಂದು ತೆರಳಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಮತ್ತು ಜೆಡಿಎಸ್ ವರಿಷ್ಟ ಎಚ್‌.ಡಿ.ದೇವೇಗೌಡ ಅವರು ಮುಂಬೈನ ರಿನೈಸೆನ್ಸ್‌ ಹೊಟೆಲ್ ಗೆ ತೆರಳಿ ಅಲ್ಲಿ ನೆಲೆಸಿರುವ ಕಾಂಗ್ರೆಸ್-ಜೆಡಿಎಸ್‌ ನ 13 ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.

ಕಾಂಗ್ರೆಸ್ ನಾಯಕರಿಂದ ರಕ್ಷಿಸಿ: ಅತೃಪ್ತ ಶಾಸಕರಿಂದ ಪೊಲೀಸ್ ದೂರುಕಾಂಗ್ರೆಸ್ ನಾಯಕರಿಂದ ರಕ್ಷಿಸಿ: ಅತೃಪ್ತ ಶಾಸಕರಿಂದ ಪೊಲೀಸ್ ದೂರು

ಈ ಮೂವರು ಮುಖಂಡರ ಜೊತೆ ಡಿಕೆ.ಶಿವಕುಮಾರ್, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ತೆರಳಲಿದ್ದಾರೆ ಎನ್ನಲಾಗಿದೆ. ಪ್ರಮುಖ ನಾಯಕರು ತೆರಳಿ ಮಾತನಾಡಿದರೆ ಅತೃಪ್ತರು ಮನಸ್ಸು ಬದಲಿಸಬಹುದು ಎಂಬ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

Deve Gowda, Mallikarjun Kharge may go to Mumbai to talk with dissident MLAs

ಆದರೆ ಮುಖಂಡರು ಮುಂಬೈಗೆ ಬರುವ ಬಗ್ಗೆ ಮೊದಲೇ ಮಾಹಿತಿ ಪಡೆದ ಮುಂಬೈನ ರಿನೈಸೆನ್ಸ್‌ ಹೊಟೆಲ್‌ನಲ್ಲಿ ತಂಗಿರುವ ಅತೃಪ್ತ ಶಾಸಕರು, ಮುಂಬೈ ಪೊಲೀಸ್ ಕಮಿಷನರ್‌ಗೆ ಹಾಗೂ ರಿನೈಸೆನ್ಸ್‌ ಹೊಟೆಲ್‌ ಇರುವ ಪೋವಾಯ್ ಪೊಲೀಸ್ ಠಾಣೆಗೆ ದೂರು ನೀಡಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯಗೆ ಕೈಕೊಟ್ಟ ಎಂಟಿಬಿ ನಾಗರಾಜು ಕೊಟ್ಟ ಕಾರಣವೇನು?ಸಿದ್ದರಾಮಯ್ಯಗೆ ಕೈಕೊಟ್ಟ ಎಂಟಿಬಿ ನಾಗರಾಜು ಕೊಟ್ಟ ಕಾರಣವೇನು?

ಕೆಲವು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು ಇದೇ ಹೊಟೆಲ್ ಮುಂದೆ ನಿಂತು ಪ್ರತಿಭಟನೆ ಮಾಡಿದ ರೀತಿಯಲ್ಲಿಯೇ ಇಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿ ನಂತರ ವಾಪಸ್ಸಾಗುವ ಸಾಧ್ಯತೆ ಇದೆ.

English summary
Congress leaders Mallikarjun Kharge, Gulam Nabi Azad and many more going to Mumbai to talk with dissident MLAs, JDS leader Deve Gowda also going with them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X