• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಜಯದಶಮಿಯಂದು ದೇವರಗುಡ್ಡದಲ್ಲಿ ನಾಗಪ್ಪಜ್ಜ ಉರ್ಮಿ ನುಡಿದ ಭವಿಷ್ಯ

By Balaraj Tantry
|

ಹೂವಿನಹಡಗಲಿಯಲ್ಲಿರುವ ಮೈಲಾರ ಲಿಂಗೇಶ್ವರ ಮತ್ತು ರಾಣೆಬೆನ್ನೂರಿನಲ್ಲಿರುವ ದೇವರಗುಡ್ಡದ ಮಾಲತೇಶ ಸ್ವಾಮಿ ಸನ್ನಿಧಾನದಲ್ಲಿ ವರ್ಷಕ್ಕೊಮ್ಮೆ ಕಾರ್ಣಿಕ ನುಡಿಯುವ ಪದ್ದತಿ ತುಂಬಾ ದಿನದಿಂದ ನಡೆದುಕೊಂಡು ಬರುತ್ತಿದೆ.

ಅದರಂತೇ, ಫೆಬ್ರವರಿ ತಿಂಗಳಿನಲ್ಲಿನ ಭಾರತ ಹುಣ್ಣಿಮೆಯ ದಿನದಂದು ಮೈಲಾರದಲ್ಲಿ ಗೊರವಪ್ಪ ಭವಿಷ್ಯ ನುಡಿದಿದ್ದರು. ಇದಾದ ಮೇಲೆ ಎರಡು ದಿನದ ಹಿಂದೆ ವಿಜಯದಶಮಿಯ ಪ್ರಯುಕ್ತ ಶುಕ್ರವಾರ (ಸೆ 29) ದೇವರಗುಡ್ಡದಲ್ಲಿ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ.

ನವರಾತ್ರಿಯ ಒಂಬತ್ತು ದಿನ ಕಟ್ಟುನಿಟ್ಟಿನ ಉಪವಾಸದಲ್ಲಿದ್ದು ನಂತರ ವಿಜಯದಶಮಿ ಪ್ರಯುಕ್ತ ಒಂಬತ್ತನೇ ದಿನ 25 ಅಡಿಯ ಬಿಲ್ಲನ್ನೇರಿ ಮೈಲಾರದಲ್ಲಿ ಮತ್ತು ದೇವರಗುಡ್ಡದಲ್ಲಿ ನುಡಿಯುವ ಭವಿಷ್ಯವನ್ನು ಕೇಳಲೆಂದೇ ಲಕ್ಷಾಂತರ ಜನ ಭಾಗವಹಿಸುತ್ತಾರೆ.

ಜಗತ್ತಿನ ಎರಡು ಅದ್ಭುತ ಶಕ್ತಿಗಳ ನಾಶ ಸನ್ನಿಹಿತ: ಕೋಡಿಮಠ ಶ್ರೀ

ದಸರಾ ಹಬ್ಬದ ವೇಳೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿಯುವ ಪದ್ದತಿಯಿದೆ. ಆಯುಧಪೂಜೆಯ ದಿನದಂದು ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್​ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವೊಂದು ಸಂಭವಿಸಲಿದೆ ಎಂದು ಹೇಳಿದ್ದರು.

ಕೋಡಿ ಶ್ರೀಗಳ ಭವಿಷ್ಯ: ಶಾಸ್ತ್ರಿ ಅವರಂಥ ದೇಶ ನಾಯಕನ ಸಾವು

ದೇವರಗುಡ್ಡದ ಮಾಲತೇಶಸ್ವಾಮಿ ದೇವಾಲಯದಲ್ಲಿ ಕಾರ್ಣಿಕ ನುಡಿದ ನಾಗಪ್ಪಜ್ಜ ಉರ್ಮಿ, 'ನಂದಿ ಗಾಬಾದಿತಲೇ..ಪರಾಕ್' ಎಂದು ನುಡಿದು 25 ಅಡಿ ಬಿಲ್ಲಿನಿಂದ ಕೆಳಕ್ಕೆ ಹಾರಿದ್ದಾರೆ. ಇದು ಈ ವರ್ಷದ ಎರಡನೇ ಕಾರ್ಣಿಕ ದೇವವಾಣಿ ಎಂದು ಭಕ್ತರು ನಂಬುತ್ತಾರೆ.

ಐತಿಹಾಸಿಕ ಇತಿಹಾಸವುಳ್ಳ ಮಾಲತೇಶ ಸ್ವಾಮಿ ದೇವಾಲಯ

ಐತಿಹಾಸಿಕ ಇತಿಹಾಸವುಳ್ಳ ಮಾಲತೇಶ ಸ್ವಾಮಿ ದೇವಾಲಯ

ಐತಿಹಾಸಿಕ ಇತಿಹಾಸವುಳ್ಳ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ದೇವರಗುಡ್ದದ ಮಾಲತೇಶ ಸ್ವಾಮಿ ದೇವಾಲಯ, ರಾಣೆಬೆನ್ನೂರು ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ಶನಿವಾರ, ಭಾನುವಾರ, ಹುಣ್ಣಿಮೆ ಮತ್ತು ದಸರಾ ದಿನದಂದು ಮಾತ್ರ ಇಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ದೇವಾಲಯದ ಆವರಣದಲ್ಲಿರುವ ಹತ್ತಾರು ಗೊರಪ್ಪನವರು 'ಏಳು ಕೋಟಿ.. ಏಳು ಕೋಟಿ.. ಚಂಗಮಲೋ.. ಚಂಗಮಲೋ' ಎಂದು ಉದ್ಘರಿಸುತ್ತಿರುತ್ತಾರೆ.

ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ

ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ

'ನಾನು ಆಗ ಚೋಟು‌ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷ ಪಾನ' ‌ಎಂದು ಹೇಳಿದ್ದನ್ನು ಸ್ಮರಿಸಿಕೊಂಡ ಕೋಡಿಮಠದ ಶ್ರೀಗಳು, ನಾಯಕರೊಬ್ಬರ ಅಕಾಲಿಕ ಸಾವು, ಜನವರಿ ತಿಂಗಳಿನವರೆಗೆ ಅಕಾಲಿಕ ಮಳೆ ಮುಂದುವರೆಯಲಿದೆ ಎಂದು ಮೊನ್ನೆ ಮೊನ್ನೆ ಭವಿಷ್ಯ ನುಡಿದಿದ್ದರು.

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್

ಕಳೆದ ಫೆಬ್ರವರಿ ತಿಂಗಳಲ್ಲಿ ಮೈಲಾರ ಲಿಂಗೇಶ್ವರ ಸನ್ನಿಧಾನದಲ್ಲಿ ' ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್' ಎಂದು ಗೊರವಪ್ಪ ಭವಿಷ್ಯ ನುಡಿದಿದ್ದರು. ಅದರರ್ಥ, ಗಲಾಟೆ, ಯುದ್ದದ ಭೀತಿ ದೇಶಕ್ಕೆ ಎದುರಾಗಲಿದೆ ಎಂದು ಅಲ್ಲಿದ್ದ ಹಿರಿಯರು ಅರ್ಥೈಸಿಕೊಂಡಿದ್ದರು.

'ನಂದಿ ಗಾಬಾದಿತಲೇ..ಪರಾಕ್ ಎನ್ನುವ ಕಾರ್ಣಿಕ ನುಡಿ

'ನಂದಿ ಗಾಬಾದಿತಲೇ..ಪರಾಕ್ ಎನ್ನುವ ಕಾರ್ಣಿಕ ನುಡಿ

ದೇವರಗುಡ್ಡದಲ್ಲಿ 'ನಂದಿ ಗಾಬಾದಿತಲೇ..ಪರಾಕ್' ಎನ್ನುವ ಭವಿಷ್ಯವಾಣಿ ವಿಶ್ಲೇಷಣೆಗೊಂಡಿದ್ದು ಹೀಗೆ, ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಜಾನುವಾರುಗಳಿಗೆ ಸಂಕಷ್ಟ, ರೋಗರುಜಿನದ ಭಯ, ರೈತರಲ್ಲಿ ಗಾಭರಿ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗಿದೆ. (ಚಿತ್ರ: ಮೈಲಾರದ ಕಾರ್ಣಿಕ ಉತ್ಸವ)

ಇಪ್ಪತ್ತೈದು ಅಡಿ ಬಿಲ್ಲನ್ನೇರಿ ನುಡಿಯುವ ಭವಿಷ್ಯ

ಇಪ್ಪತ್ತೈದು ಅಡಿ ಬಿಲ್ಲನ್ನೇರಿ ನುಡಿಯುವ ಭವಿಷ್ಯ

ಈ ಕಾರ್ಣಿಕ ಕೇಳಲು ಬರುವ ಲಕ್ಷಾಂತರ ಭಕ್ತಾದಿಗಳನ್ನು ಒಮ್ಮೆ ದಿಟ್ಟಿಸಿ ನೋಡಿ, ಇಪ್ಪತ್ತೈದು ಅಡಿ ಬಿಲ್ಲನ್ನೇರಿ, ಜಗತ್ತಿನ ಮುಂದಿನ ಆಗುಹೋಗಿನ ಬಗ್ಗೆ ದೇವವಾಣಿ ನುಡಿಯುವ ಪದ್ದತಿ ದಶಕಗಳಿಂದಲೂ ನಡೆದುಕೊಂಡು ಬರುತ್ತಿದೆ. ಜೊತೆಗೆ, ಉತ್ತರಕರ್ನಾಟಕದ ಭಾಗದಲ್ಲಿ ಇದಕ್ಕೆ ಭಾರೀ ಮಹತ್ವವಿದೆ. (ಚಿತ್ರ: ಮೈಲಾರದ ಕಾರ್ಣಿಕ ಉತ್ಸವ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Devaragudda Nagappajja Urmi prediction on eve of Vijayadashami day on Sep 29. This temple situated in 10 km from Ranebennur town of Haveri District, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more