• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಮ್‌ಡೆಸಿವಿರ್ ಸಪ್ಲೈನಲ್ಲಿ ಕೇಂದ್ರದ ತಾರತಮ್ಯದ ಆರೋಪ: ವಾಸ್ತವಾಂಶ

|

ಕೊರೊನಾ ಲಸಿಕೆ ಸರಬರಾಜು ವಿಚಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎನ್ನುವ ಕೆಪಿಸಿಸಿ ಮುಖಂಡರ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪದಲ್ಲಿ ಸತ್ಯ ಅಡಗಿದೆಯೇ?

ಕಳೆದ ಒಂದು ತಿಂಗಳಿನಿಂದ ಅಂದರೆ ಏಪ್ರಿಲ್ 21ರಿಂದ ಮೇ 23ರವರೆಗೆ ಆಗುವಷ್ಟು ಕೇಂದ್ರ ಆರೋಗ್ಯ ಇಲಾಖೆ, ವಿವಿಧ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಪ್ಲೈ ಮಾಡಿರುವ ರೆಮ್‌ಡೆಸಿವಿರ್ ಔಷಧಿಯ ಬಗ್ಗೆ ವಿವರಣೆಯನ್ನು ನೀಡಿದೆ.

ಟೆಸ್ಟಿಂಗ್ ಕಮ್ಮಿಯಿಂದ ಹೊಸ ಕೇಸ್ ಇಳಿಕೆ: ಆದರೆ ಡಿಸ್ಚಾರ್ಜ್ ಸಂಖ್ಯೆಟೆಸ್ಟಿಂಗ್ ಕಮ್ಮಿಯಿಂದ ಹೊಸ ಕೇಸ್ ಇಳಿಕೆ: ಆದರೆ ಡಿಸ್ಚಾರ್ಜ್ ಸಂಖ್ಯೆ

ಕಾಂಗ್ರೆಸ್ ಮುಖಂಡರು ಮತ್ತು ಎಚ್ಡಿಕೆ, ಕರ್ನಾಟಕದ ಜನತೆ ಮಲತಾಯಿ ಮಕ್ಕಳಾ, ನಿಮ್ಮದೇ ಸರಕಾರವಿದ್ದರೂ, ಈ ತಾರತಮ್ಯ ಯಾಕೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಮುಖಂಡರೂ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಟಾರ್ಗೆಟ್ ಮಾಡಿದ್ದರು.

 ಹಳ್ಳಿಹಳ್ಳಿಗೂ ಕೊರೊನಾವೈರಸ್: ಮಹಾಮಾರಿ ನಿಯಂತ್ರಣಕ್ಕೆ ಉಪಾಯಗಳೇನು? ಹಳ್ಳಿಹಳ್ಳಿಗೂ ಕೊರೊನಾವೈರಸ್: ಮಹಾಮಾರಿ ನಿಯಂತ್ರಣಕ್ಕೆ ಉಪಾಯಗಳೇನು?

ಕರ್ನಾಟಕದ ಬೇಡಿಕೆಯಷ್ಟು ರೆಮ್‌ಡೆಸಿವಿರ್ ಲಸಿಕೆಯನ್ನು ಕೇಂದ್ರ ನೀಡದೇ ಇದ್ದರೂ, ತಾರತಮ್ಯ ಮಾತ್ರ ತೋರಿಲ್ಲ ಎನ್ನುತ್ತದೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಬಿಡುಗಡೆ ಮಾಡಿರುವ ಅಂಕಿಅಂಶ. ಅತಿಹೆಚ್ಚು ಲಸಿಕೆ ಪಡೆದ ರಾಜ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎನ್ನುವುದು ವಾಸ್ತವತೆ.

 ರೆಮ್‌ಡೆಸಿವಿರ್ ಸಪ್ಲೈನಲ್ಲಿ ಕೇಂದ್ರದ ತಾರತಮ್ಯದ ಆರೋಪ: ವಾಸ್ತವಾಂಶ

ರೆಮ್‌ಡೆಸಿವಿರ್ ಸಪ್ಲೈನಲ್ಲಿ ಕೇಂದ್ರದ ತಾರತಮ್ಯದ ಆರೋಪ: ವಾಸ್ತವಾಂಶ

36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ 21.04.21-23.05.21ರ ಅವಧಿಗೆ 76ಲಕ್ಷ ರೆಮ್‌ಡೆಸಿವಿರ್ ಔಷಧಿಯನ್ನು ನೀಡಿದೆ. ಆಯಾಯ ರಾಜ್ಯಗಳ ಬೇಡಿಕೆ, ಜನಸಂಖ್ಯೆ, ಕೋವಿಡ್ ಕೇಸುಗಳನ್ನು ಆಧರಿಸಿ ಮತ್ತು ಆದ್ಯತೆಯ ಮೇಲೆ ಲಸಿಕೆ ಸಪ್ಲೈ ಮಾಡಲಾಗಿದೆ. ಪಟ್ಟಿಯ ಪ್ರಕಾರ ಕರ್ನಾಟಕದ ಪಾಲು ಹತ್ತು ಲಕ್ಷ ಲಸಿಕೆ.

 ಅತಿಹೆಚ್ಚು ಲಸಿಕೆ ಸರಬರಾಜು ಆಗಿರುವುದು ಮಹಾರಾಷ್ಟ್ರ

ಅತಿಹೆಚ್ಚು ಲಸಿಕೆ ಸರಬರಾಜು ಆಗಿರುವುದು ಮಹಾರಾಷ್ಟ್ರ

ಮಹಾರಾಷ್ಟ್ರದ (14,92,000) ನಂತರ ಅತಿಹೆಚ್ಚು ರೆಮ್‌ಡೆಸಿವಿರ್ ಸರಬರಾಜು ಆಗಿರುವುದು ಕರ್ನಾಟಕಕ್ಕೆ ಎನ್ನುವುದು ವಾಸ್ತವಾಂಶ. ಇನ್ನು ಉತ್ತರಪ್ರದೇಶಕ್ಕೆ 6,25,000, ಪಶ್ಚಿಮ ಬಂಗಾಳಗೆ 2,45,000, ಮಧ್ಯಪ್ರದೇಶಕ್ಕೆ 3,23,000, ಗುಜರಾತ್ ಗೆ 5,10,000 ಲಸಿಕೆ ಸಪ್ಲೈ ಆಗಿದೆ.

 ರೆಮ್‌ಡೆಸಿವಿರ್ ಲಸಿಕೆ ಸಪ್ಲೈ ಈ ಅವಧಿಯಲ್ಲಿ ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ

ರೆಮ್‌ಡೆಸಿವಿರ್ ಲಸಿಕೆ ಸಪ್ಲೈ ಈ ಅವಧಿಯಲ್ಲಿ ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ

ಇನ್ನು ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರ ಪ್ರದೇಶಕ್ಕೆ 3,75,000, ತೆಲಂಗಾಣಕ್ಕೆ 2,15,000, ತಮಿಳುನಾಡಿಗೆ 3,50,000, ಕೇರಳಕ್ಕೆ 2,75,000, ಪುದುಚೇರಿಗೆ 22,000 ಸಾವಿರ ರೆಮ್‌ಡೆಸಿವಿರ್ ಲಸಿಕೆ ಸಪ್ಲೈ ಈ ಅವಧಿಯಲ್ಲಿ ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ.

  Covid Centreನಲ್ಲಿ ಹುಡುಗಿಯ Love you Zindagi ಹಾಡು ವೈರಲ್ | Oneindia Kannada
   , ಬಿಹಾರಿಗೆ ಎರಡು ಲಕ್ಷ, ದೆಹಲಿಗೆ 2,80,000, ಹಿಮಾಚಲ ಪ್ರದೇಶಗೆ 47 ಸಾವಿರ ಲಸಿಕೆ

  , ಬಿಹಾರಿಗೆ ಎರಡು ಲಕ್ಷ, ದೆಹಲಿಗೆ 2,80,000, ಹಿಮಾಚಲ ಪ್ರದೇಶಗೆ 47 ಸಾವಿರ ಲಸಿಕೆ

  ರಾಜಸ್ಥಾನಗೆ 3,76,000, ಪಂಜಾಬ್ ಗೆ 1,43,000, ಹರ್ಯಾಣಗೆ 2,29,000, ಬಿಹಾರಿಗೆ ಎರಡು ಲಕ್ಷ, ದೆಹಲಿಗೆ 2,80,000, ಹಿಮಾಚಲ ಪ್ರದೇಶಗೆ 47 ಸಾವಿರ, ಛತ್ತೀಸಗಢಗೆ 2,68,000 ರೆಮ್‌ಡೆಸಿವಿರ್ ಲಸಿಕೆಯನ್ನು ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ.

  English summary
  Details Remdesivir Supplied To State From Union Government From Apr 21 to May 23.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X