ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ನಾಳೆಗೆ (ಏಪ್ರಿಲ್ 27) ಕ್ಕೆ ಸರಿಯಾಗಿ ಒಂದು ತಿಂಗಳಾಗುತ್ತದೆ. ಮಾರ್ಚ್‌ 27ರಿಂದಲೂ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.

ಒಂದೇ ಹಂತದ ಚುನಾವಣೆ ಈ ಬಾರಿಯ ಚುನಾವಣೆಯ ಪ್ರಮುಖ ವಿಶೇಷತೆ. ಜೊತೆಗೆ ಹಣದ ಹರಿವು ತಡೆಯಲು ಹಲವು ರೀತಿಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸ್ಕ್ವಾಡ್‌ಗಳು, ಮತ್ತು ಮುಂಚಿನ ಚುನಾವಣೆಗಿಂತಲೂ ಮೇಲ್ವಿಚಾರಣಾ ಅಧಿಕಾರಿಗಳನ್ನು ಈ ಬಾರಿ ಚುನಾವಣಾ ಆಯೋಗ ನೇಮಿಸಿಕೊಂಡಿತ್ತು.

ಮಾರ್ಕ್ -3 ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ ಯಶಸ್ವಿ ಮಾರ್ಕ್ -3 ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ ಯಶಸ್ವಿ

ನೀತಿ ಸಂಹಿತೆ ಜಾರಿಯಾದಾಗಿಲಿಂದಲೂ ನಾಮಪತ್ರ ಸಲ್ಲಿಕೆಯ ಅಂತಿಮ ದಿನದ ವರೆಗೆ ಚುನಾವಣಾ ಆಯೋಗ ಯಾವ ರೀತಿಯಲ್ಲಿ ನೀತಿ ಸಂಹಿತೆ ಜಾರಿಗೆ ಪ್ರಯತ್ನಿಸಿದೆ. ಎಷ್ಟು ಹಣ ವಶಪಡಿಸಿಕೊಂಡಿದೆ, ಎಷ್ಟು ಬಾರುಗಳನ್ನು ಮುಚ್ಚಿಸಿದೆ, ಎಷ್ಟು ಕೇಸುಗಳು ದಾಖಲಿಸಿದೆ ಇತರೆ ಇತರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗೋಡೆ ಬರಹ, ಫ್ಲೆಕ್ಸ್‌ಗಳನ್ನೂ ಬಿಟ್ಟಿಲ್ಲ

ಗೋಡೆ ಬರಹ, ಫ್ಲೆಕ್ಸ್‌ಗಳನ್ನೂ ಬಿಟ್ಟಿಲ್ಲ

1,156 ಫ್ಲೈಯಿಂಗ್ ಸ್ಕ್ವಾಡ್ಸ್‌ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12537 ಗೋಡೆಬರಹಗಳು, 17693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ ಹಾಗೂ Karnataka Open Places (Provision of Disfigurement) Act 1981 ಪ್ರಕಾರ 6 ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6,866 ಗೋಡೆ ಬರಹ, 7,949 ಪೋಸ್ಟರ್‌ಗಳು ಮತ್ತು 2,543 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ ಎಷ್ಟು?, ಮುಚ್ಚಿದ ಬಾರ್‌ಗಳೆಷ್ಟು? ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ ಎಷ್ಟು?, ಮುಚ್ಚಿದ ಬಾರ್‌ಗಳೆಷ್ಟು?

7 ಕೆ.ಜಿ ಚಿನ್ನ, 704 ಗ್ರಾಂ ಬೆಳ್ಳಿ 24 ಗಂಟೆಯಲ್ಲಿ ವಶ

7 ಕೆ.ಜಿ ಚಿನ್ನ, 704 ಗ್ರಾಂ ಬೆಳ್ಳಿ 24 ಗಂಟೆಯಲ್ಲಿ ವಶ

ಕಳೆದ 24 ಗಂಟೆಗಳಲ್ಲಿ (ಏಪ್ರಿಲ್ 24) 8,45,000 ರೂ.ಗಳ ನಗದು, ರೂ.3,00,000 ಮೌಲ್ಯದ 1 ವಾಹನವನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರೂ.35,74,85,360/- ನಗದು, ರೂ.1,76,80,000/- ಮೌಲ್ಯದ 7 ಕೆ.ಜಿ. 704 ಗ್ರಾಂ ಚಿನ್ನ, ರೂ,11,47,200/- ಮೌಲ್ಯದ ಬೆಳ್ಳಿ, ಒಟ್ಟು ರೂ.2,00,38,503/- ಮೌಲ್ಯದ 24.09 ಲೀ. ಮದ್ಯ, ವಾಹನ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿವೆ.

2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ 2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ

ಸೀರೆ, ಲ್ಯಾಪ್‌ಟಾಪ್‌, ಮದ್ಯ ಎಲ್ಲವೂ ಪೊಲೀಸರ ವಶಕ್ಕೆ

ಸೀರೆ, ಲ್ಯಾಪ್‌ಟಾಪ್‌, ಮದ್ಯ ಎಲ್ಲವೂ ಪೊಲೀಸರ ವಶಕ್ಕೆ

ಕಳೆದ 24 (ಏಪ್ರಿಲ್ 24) ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು ರೂ.85,500 ನಗದು, ರೂ.3,456 ಮೌಲ್ಯದ 12.960 ಲೀ. ಮದ್ಯ ಮತ್ತು 4 ವಾಹನಗಳನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್‍ಗಳು ರೂ.4,00,79,157 ನಗದು, ರೂ.13,27,07,770 ಮೌಲ್ಯದ 913.777 ಲೀ. ಮದ್ಯ ಮತ್ತು ಮತ್ತಿತರ ವಸ್ತುಗಳನ್ನು, ರೂ.1,93,38,060 ಮೌಲ್ಯದ 97 ವಾಹನಗಳನ್ನು ವಶಪಡಿಸಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ, ಇತರೆ ಪೊಲೀಸ್ ಪ್ರಾಧಿಕಾರಿಗಳು ಒಟ್ಟಾರೆ ರೂ.7,70,000/- ನಗದು, ರೂ.90,000/- ಮೌಲ್ಯದ 2500 ಪಾರ್ಟಿ ಫ್ಲಾಗ್‌ಗಳು, 1000 ಶಾಲುಗಳು, 2000 ಪಾರ್ಟಿ ಕ್ಯಾಪ್‌ಗಳು, 1000 ಪಾರ್ಟಿ ಬ್ಯಾಡ್ಜಗಳು, ರೂ.70,150/- ಮೌಲ್ಯದ 22 ಬಂಡಲ್ ಪಕ್ಷದ ಟೀ ಶರ್ಟ್‌ಗಳು, 15 ಬಂಡಲ್ ಶಾಲುಗಳು, 5 ಬಂಡಲ್ ಬ್ಯಾನರ್‌ಗಳು, 4 ಬಂಡಲ್ ಶಾಲುಗಳು, ಮತ್ತು ರೂ.15,000/- ಮೌಲ್ಯದ ಕ್ಯಾಪ್‌ಗಳನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಇತರೆ ಪೊಲೀಸ್ ಪ್ರಾಧಿಕಾರಗಳು ರೂ.24,20,000/- ನಗದು ಮತ್ತು ರೂ.1,75,150/- ಮೌಲ್ಯದ 10 ಸೀರೆ, 160 ಲ್ಯಾಪ್‌ಟಾಪ್‌ ಮತ್ತು 509.02 ಲೀ. ಮದ್ಯ ಮತ್ತು ಪಾರ್ಟಿ ಫ್ಲಾಗ್ ಮತ್ತು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಫ್ಲೈಯಿಂಗ್ ಸ್ಕ್ವಾಡ್‌ಗಳಿಂದ 24 ಗಂಟೆಯಲ್ಲಿ 496 ಪ್ರಕರಣ

ಫ್ಲೈಯಿಂಗ್ ಸ್ಕ್ವಾಡ್‌ಗಳಿಂದ 24 ಗಂಟೆಯಲ್ಲಿ 496 ಪ್ರಕರಣ

ಫ್ಲೈಯಿಂಗ್ ಸ್ಕ್ವಾಡ್‌ಗಳ ತಂಡ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 36 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್‍ಗಳು 496 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಎಸ್‍ಎಸ್‌ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 6 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿದೆ. ಒಟ್ಟು 97 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

ವಶಪಡಿಸಿಕೊಂಡ ಮದ್ಯದ ಮೌಲ್ಯ ರೂ.19,54,91,587

ವಶಪಡಿಸಿಕೊಂಡ ಮದ್ಯದ ಮೌಲ್ಯ ರೂ.19,54,91,587

ಕಳೆದ 24 ಗಂಟೆಗಳಲ್ಲಿ, ಅಬಕಾರಿ ಇಲಾಖೆಯು 43187.35 ಲೀ. ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು ರೂ.2,10,31,322 ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡು 81 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 34 ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 281 ಪ್ರಕರಣಗಳನ್ನು ದಾಖಲಿಸಿದೆ. ಒಟ್ಟಾರೆ ರೂ.19,54,91,587 ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯ ಸೇರಿ 407651.792 ಲೀ.ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 1699 ಪ್ರಕರಣಗಳು, 1406 ಪ್ರಕರಣಗಳು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 3533 ಪ್ರಕರಣಗಳನ್ನು ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 548 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈವರೆಗೆ 97,024 ದಾಸ್ತಾನು ಮಾಡಿಕೊಳ್ಳಲಾಗಿದೆ

ಈವರೆಗೆ 97,024 ದಾಸ್ತಾನು ಮಾಡಿಕೊಳ್ಳಲಾಗಿದೆ

ಕಳೆದ 24 ಗಂಟೆಗಳಲ್ಲಿ ಸಿಆರ್‌ಪಿಸಿ ಕಾಯ್ದೆಯಡಿ 435 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 5 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 815 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ. 153 ಪ್ರಕರಣಗಳನ್ನು ಸಿಆರ್‍ಪಿಸಿ ಕಾಯ್ದೆಯಡಿ ದಾಖಲು ಮಾಡಲಾಗಿದೆ. 896 ನಾಕಾಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಒಟ್ಟಾರೆ 71567 ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಈವರೆಗೆ ಒಟ್ಟು 97,037 ಶಸ್ತ್ರಾಸ್ತ್ರಗಳ ಪೈಕಿ 97,024 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಟ್ಟು 6 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಪಡಿಸಲಾಗಿದೆ, ಸಿಆರ್‍ಪಿಸಿ ಕಾಯ್ದೆಯಡಿಯಲ್ಲಿ 15915 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 18459 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 31476 ಜಾಮೀನು ರಹಿತ ವಾರೆಂಟ್‌ಗಳನ್ನು ಈವರೆಗೆ ಹೊರಡಿಸಲಾಗಿದೆ.

English summary
Election commission gives details of sized money and liquor and many other things during the last 24 hours. election Code of Conduct is on from March 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X