ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರು ಭಯ ಹುಟ್ಟಿಸುವವರು, ಕಟುಕರು, ಹಂತಕರು!

|
Google Oneindia Kannada News

ಬೆಂಗಳೂರು, ಡಿ. 17: ಬ್ರಾಹ್ಮಣ ಸಮುದಾಯದ ಕುರಿತಾದ ಪಾಠವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಅಖಿಲ ಕರ್ನಾಟಕ ಮಹಾಸಭಾ ಸರ್ಕಾರದ ಗಮನವನ್ನು ಸೆಳೆದಿದ್ದು, ಇಷ್ಟು ವರ್ಷಗಳ ಕಾಲ ಇದು ಯಾರ ಗಮನಕ್ಕೂ ಬರದೇ ಇರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಬ್ರಾಹ್ಮಣ ಸಮಾಜ-ಸಮುದಾಯದ ಮೇಲೆ ವಿದ್ಯಾರ್ಥಿಗಳಲ್ಲಿ ತಪ್ಪುಕಲ್ಪನೆ ಉಂಟಾಗುವಂತೆ ಬಿಂಬಿಸಿ ಪಾಠವನ್ನು ಮುದ್ರಿಸಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಮಹಾಸಭಾ ದೂರಿದೆ.

ಬ್ರಾಹ್ಮಣರ ಅವಹೇಳನ ಪಠ್ಯ ತೆಗೆದು ಹಾಕಲು ಸುರೇಶ್ ಕುಮಾರ್ ಸೂಚನೆ!ಬ್ರಾಹ್ಮಣರ ಅವಹೇಳನ ಪಠ್ಯ ತೆಗೆದು ಹಾಕಲು ಸುರೇಶ್ ಕುಮಾರ್ ಸೂಚನೆ!

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರೂ ಕೂಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ವಿವರಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಗಮನ ಹರಿಸುವುದಾಗಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಭರವಸೆ ನೀಡಿದ್ದಾರೆ. ಅಷ್ಟಕ್ಕೂ ಆ ಪಾಠದಲ್ಲಿ ಇರುವುದೇನು? ಅದಕ್ಕೆ ಸರ್ಕಾರ ಕೊಟ್ಟಿರುವ ಭರವಸೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಕೋವಿಡ್ ಸಲಹಾ ಸಮಿತಿ ಮಹತ್ವದ ಸೂಚನೆ! ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಕೋವಿಡ್ ಸಲಹಾ ಸಮಿತಿ ಮಹತ್ವದ ಸೂಚನೆ!

ಭಯ ಹುಟ್ಟಿಸುವ ಬ್ರಾಹ್ಮಣರು

ಭಯ ಹುಟ್ಟಿಸುವ ಬ್ರಾಹ್ಮಣರು

ವಿಪ್ರ ಸಮುದಾಯ ಹಾಗೂ ಪುರೋಹಿತರು ಬಡವರನ್ನು ಸುಲಿಗೆ ಮಾಡುವವರು, ಜನರಲ್ಲಿ ಭಯ ಹುಟ್ಟಿಸುವವರು, ಹಂತಕರು ಮತ್ತು ಕಟುಕರು ಎಂಬಂತೆ ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ.

ಇದು ಬ್ರಾಹ್ಮಣ ಸಮುದಾಯವು ಆಕ್ರೋಶ ಗೊಳ್ಳುವಂತೆ ಮಾಡಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದೂರಿದೆ. ಇಂತಹ ಪಾಠಗಳಿಂದ ಜಾತಿ-ಧರ್ಮದ ವಿಷಬೀಜವನ್ನು ಬಿತ್ತುವ ಶಿಕ್ಷಣ ಇಲಾಖೆಯ ಖಂಡಿಸುತ್ತದೆ ಎಂದು ಬ್ರಾಹ್ಮಣ ಮಹಾಸಭಾ ವಿರೋಧಿಸಿದೆ.

ಬ್ರಾಹ್ಮಣರ ಕುರಿತು ಅವಹೇಳನ

ಬ್ರಾಹ್ಮಣರ ಕುರಿತು ಅವಹೇಳನ

ಸಾರ್ವಜನಿಕ ಶಿಕ್ಷಣ ಇಲಾಖೆಯ 6ನೇ ತರಗತಿಯ ಸಮಾಜ ವಿಜ್ಞಾನ ವಿಭಾಗ-1ರ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಕುರಿತು ಶಿಕ್ಷಣ ಇಲಾಖೆಯು ಬ್ರಾಹ್ಮಣರ ಕುರಿತು ಇಂತಹ ಅವಹೇಳನಕಾರಿ ಅಂಶಗಳನ್ನು ತಕ್ಷಣ ತೆಗದು ಹಾಕಬೇಕು. ಜೊತೆಗೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ವಿವರಗಳುಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ವಿವರಗಳು

ಮಂತ್ರಾಲಯ ಶ್ರೀಗಳ ಮನವಿ

ಮಂತ್ರಾಲಯ ಶ್ರೀಗಳ ಮನವಿ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ದೂರವಾಣಿಯ ಮೂಲಕ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸ್ವಾಮೀಜಿಗಳು ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದರು.

Recommended Video

ನಾಪತ್ತೆಯಾಗಿದ್ದ ಹೊಸಕೋಟೆ ವೈದ್ಯಾಧಿಕಾರಿ ದಿಢೀರ್ ಪತ್ತೆ! ಎಸ್ ‌ಪಿ ರವಿ ಚನ್ನಣ್ಣನವರ್ ಮಾಹಿತಿ | Oneindia Kannada
ಶಿಕ್ಷಣ ಸಚಿವರ ಭರವಸೆ

ಶಿಕ್ಷಣ ಸಚಿವರ ಭರವಸೆ

ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಪಠ್ಯಪುಸ್ತಕದ ಪರಿಷ್ಕರಣೆ ಆಗಿಲ್ಲ. ಅಥವಾ ಹೊಸ ಪಾಠ ಸೇರಿಸಿಲ್ಲ ಎಂದಿದ್ದಾರೆ. ಈ ಹಿಂದೆಯೇ ಆಗಿರುವ, ಆದರೆ ಈಗ ಬೆಳಕಿಗೆ ಬಂದಿರುವ ಈ ಪ್ರಮಾದವನ್ನು ತಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪೂಜ್ಯ ಮಂತ್ರಾಲಯದ ಸ್ವಾಮೀಜಿಗಳಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಭರವಸೆ ನೀಡಿದ್ದಾರೆ.

English summary
The derogatory remarks about Brahmins have been published in the textbook of Social Science Section-I of the 6th Class of the Public Education Department. All Karnataka Brahmin Mahasabha demanded to Minister of Education S Suresh Kumar that it be removed immediately. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X