ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಅಧಿಕಾರಿಗಳಿಗೆ ಮುಂಬಡ್ತಿ, 21 ಡಿವೈಎಸ್‌ಪಿಗಳಿಗೆ ಹಿಂಬಡ್ತಿ ಆದೇಶ

By Nayana
|
Google Oneindia Kannada News

ಬೆಂಗಳೂರು, ಜು.26: ಪೊಲೀಸ್‌ ಇಲಾಖೆ ಪ್ರಕಟಿಸಿದ್ದ ಜ್ಯೇಷ್ಠತಾ ಪಟ್ಟಿಯಲ್ಲಿ ದೋಷಗಳಿವೆ ಎಂಬ ಕಾರಣಕ್ಕೆ 2018 ಏ.17ರಿಂದ ಅನ್ವಯವಾಗುವಂತೆ ಹೈದರಾಬಾದ್‌-ಕರ್ನಾಟಕೇತರ ವೃತ್ತದಲ್ಲಿ ಆಗಿದ್ದ ಹಿಂಬಡ್ತಿ-ಮುಂಬಡ್ತಿ ಆದೇಶವನ್ನು ಸರ್ಕಾರ ವಾಪಸ್‌ ಪಡೆದಿದೆ.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅನ್ವಯ ಡಿವೈಎಸ್‌ಪಿ ಹುದ್ದೆಗೆ ಮುಂಬಡ್ತಿ ಹೊಂದಿದ್ದ 21 ಅಧಿಕಾರಿಗಳನ್ನು ಮತ್ತೆ ಇನ್‌ಸ್ಪೆಕ್ಟರ್‌ ಹುದ್ದೆಗೆ ಹಿಂಬಡ್ತಿಗೊಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಇದೇ ವೇಳೆ ಡಿವೈಎಸ್‌ಪಿಯಿಂದ ಇನ್‌ಸ್ಪೆಕ್ಟರ್‌ ಹುದ್ದೆಗೆ ಹಿಂಬಡ್ತಿಯಾಗಿದ್ದ 8 ಅಧಿಕಾರಿಗಳನ್ನು ಡಿವೈಎಸ್‌ಪಿ ಹುದ್ದೆಯಲ್ಲಿ ಮುಂದುವರೆಯಲು ಸೂಚಿಸಿದೆ.

ಕೇರಳ ಲಾಕಪ್‌ ಡೆತ್‌: ಇಬ್ಬರು ಪೊಲೀಸರಿಗೆ ಮರಣ ದಂಡನೆಕೇರಳ ಲಾಕಪ್‌ ಡೆತ್‌: ಇಬ್ಬರು ಪೊಲೀಸರಿಗೆ ಮರಣ ದಂಡನೆ

ಈಗ ಡಿವೈಎಸ್‌ಪಿ ಇನ್‌ಸ್ಪೆಕ್ಟರ್‌ ಹುದ್ದೆಗೆ ಹಿಂಬಡ್ತಿಯಾಗಿರುವ 21 ಅಧಿಕಾರಿಗಳಿಗೆ ಮುಂಬಡ್ತಿ ಆಗುವ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ವಾಪಸ್‌ ನಿಯುಕ್ತಿಗೊಳಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

Depromotion to 21 DYSP and promotion for 8 officers

ಸುಪ್ರೀಂಕೋರ್ಟ್‌ ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ರದ್ದುಗೊಳಿಸಿದ್ದರಿಂದ ಪೊಲೀಸ್‌ ಇಲಾಖೆ ಸಿದ್ಧಪಡಿಸಿದ್ದ ಜ್ಯೇಷ್ಠತಾ ಪಟ್ಟಿ ಅನ್ವಯ ಹಿಂಬಡ್ತಿ ಹಾಗೂ ಮುಂಬಡ್ತಿ ಆದೇಶ ಹೊರಡಿಸಿ ಜಾರಿಗೆ ತರಲಾಗಿತ್ತು.

ಅದೇ ರೀತಿ ಡಿವೈಎಸ್‌ಪಿ ಹುದ್ದೆಯಿಂದ ಹಿಂಬಡ್ತಿಯಾಗಿದ್ದ 8 ಅಧಿಕಾರಿಗಳುಅವರು ಈ ಮೊದಲು ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲೇ ಮುಂದುವರೆಯುವಂತೆ ನಿರ್ದೇಶಿಸಲಾಗಿದೆ. ಅಧಿಕಾರಿಗಳು ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಡಿಜಿಪಿ ಆದೇಶಿಸಿದ್ದಾರೆ.

English summary
Supreme court is hearing contempt petetion on reservation in promotion issue. So Karnataka Government had taken decision of depromoting 21 dysps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X