ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಕೈ ಸೇರಿದ ಡಾ. ರೇವಂತ್ ಕೊನೆ ಪೋನ್ ಕರೆ ವಿವರ!

|
Google Oneindia Kannada News

ಬೆಂಗಳೂರು, ಮಾರ್ಚ್ 03 : ಚಿಕ್ಕಮಗಳೂರಿನಲ್ಲಿ ಫೆಬ್ರವರಿ 17ರಂದು ನಡೆದ ಒಂದು ಕೊಲೆ ಮತ್ತಿಬ್ಬರ ಆತ್ಮಹತ್ಯೆಗೆ ಕಾರಣವಾಗಿತ್ತು. ದಂತವೈದ್ಯ ಡಾ. ರೇವಂತ್ ಪತ್ನಿ ಕವಿತಾರನ್ನು ಹತ್ಯೆ ಮಾಡಿದ್ದ. ಐದು ದಿನಗಳ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

Recommended Video

Karnataka Police submitted 25 demands list to B.S.Yediyurappa | Karnataka Police | Yediyurappa

ಒಂದು ಕೊಲೆ, ಎರಡು ಆತ್ಮಹತ್ಯೆ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆದಿತ್ತು. ಪ್ರೇಯಸಿ ಹರ್ಷಿತಾಗಾಗಿ ಡಾ. ರೇವಂತ್ ಪತ್ನಿಯನ್ನು ಕೊಲೆ ಮಾಡಿದ್ದ. ಆದರೆ, ಪೊಲೀಸರು ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ.

ರೇವಂತ್‌ಗೆ ಬಂದ ಕರೆ ಕವಿತಾ ಕೊಲೆಗೆ ಕಾರಣವಾಯಿತುರೇವಂತ್‌ಗೆ ಬಂದ ಕರೆ ಕವಿತಾ ಕೊಲೆಗೆ ಕಾರಣವಾಯಿತು

ಪತ್ನಿ ಕವಿತಾಳನ್ನು ಕೊಲೆ ಮಾಡಿ ಅದು ದರೋಡೆ ಎಂದು ನಂಬಿಸುವ ಡಾ. ರೇವಂತ್ ಪ್ರಯತ್ನ ವಿಫಲವಾಗಿತ್ತು. ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಡಾ. ರೇವಂತ್ ಕೈವಾಡ ಇರುವುದು ಸ್ಪಷ್ಟವಾಗಿತ್ತು.

ರೇವಂತ್‌ಗೆ ಪತ್ನಿ ಕೊಲೆಯ ಐಡಿಯಾ ಕೊಟ್ಟಿದ್ದು ಹರ್ಷಿತಾರೇವಂತ್‌ಗೆ ಪತ್ನಿ ಕೊಲೆಯ ಐಡಿಯಾ ಕೊಟ್ಟಿದ್ದು ಹರ್ಷಿತಾ

ಪತ್ನಿ ಕವಿತಾರ ಹತ್ಯೆ ಮಾಡಿದ ಐದು ದಿನದ ಬಳಿಕ ಚಿಕ್ಕಮಗಳೂರಿನ ಬಂಡಿಕೊಪ್ಪಲು ರೈಲ್ವೆ ಗೇಟ್‌ ಸಮೀಪ ರೈಲಿಗೆ ತಲೆಕೊಟ್ಟು ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕೊನೆಯ ದೂರವಾಣಿ ಕರೆಗಳ ಮಾಹಿತಿ ಈಗ ಪೊಲೀಸರ ಕೈ ಸೇರಿದ್ದು, ಪರಿಶೀಲನೆ ಮುಂದುವರೆದಿದೆ.

ಮಸಾಲೆ ದೋಸೆ ತಿನ್ನಲು ಹೋಗಿ ಸಿಕ್ಕಿ ಬಿದ್ದಿದ್ದ ಡಾ. ರೇವಂತ್ಮಸಾಲೆ ದೋಸೆ ತಿನ್ನಲು ಹೋಗಿ ಸಿಕ್ಕಿ ಬಿದ್ದಿದ್ದ ಡಾ. ರೇವಂತ್

ಡಾ. ರೇವಂತ್ ಮೇಲೆ ಅನುಮಾನ

ಡಾ. ರೇವಂತ್ ಮೇಲೆ ಅನುಮಾನ

ಫೆಬ್ರವರಿ 17ರಂದು ಕವಿತಾಳಿಗೆ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿದ್ದ ಡಾ. ರೇವಂತ್ ಕಾರು ಶೆಡ್‌ಗೆ ಆಕೆಯನ್ನು ಎಳೆದುಕೊಂಡು ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದರು. ರಕ್ತ ಬಿದ್ದ ಜಾಗಕ್ಕೆಲ್ಲ ಮ್ಯಾಟ್ ಹಾಕಿದ್ದರು. ಹತ್ಯೆ ನಡೆದ ಸ್ಥಳಕ್ಕೆ ಬಂದ ಪೊಲೀಸರಿಗೆ ಡಾ. ರೇವಂತ್ ಕೈವಾಡ ಇರುವ ಅನುಮಾನ ಉಂಟಾಗಿತ್ತು. ಆದರೆ, ರೇವಂತ್ ಪತ್ನಿಯನ್ನು ಯಾರೋ ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಲಾಗಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.

ವಿಚಾರಣೆಗೆ ಪೊಲೀಸರ ನೋಟಿಸ್

ವಿಚಾರಣೆಗೆ ಪೊಲೀಸರ ನೋಟಿಸ್

ಕವಿತಾಳ ಮರಣೋತ್ತರ ಪರೀಕ್ಷೆ ವರದಿ ಬಂದಾಗ ಆಕೆಗೆ 2 ಇಂಜೆಕ್ಷನ್ ಚುಚ್ಚಿದ್ದು ಬಯಲಾಗಿತ್ತು. ಆಗ ಪೊಲೀಸರಿಗೆ ರೇವಂತ್ ಮೇಲಿನ ಅನುಮಾನ ಖಚಿತವಾಯಿತು. ರೇವಂತ್ ಮತ್ತು ಕವಿತಾ ದಂಪತಿಯ 5 ವರ್ಷದ ಪುತ್ರ ಶಾಲೆಯಿಂದ ನಾನು ಮನೆಗೆ ಬಂದಾಗ ಅಮ್ಮ ಇರಲಿಲ್ಲ. ನನ್ನನ್ನು ಮಾತ್ರ ಮಸಾಲೆ ದೋಸೆ ತಿನ್ನಲು ಕರೆದುಕೊಂಡು ಹೋದರು ಎಂದು ಹೇಳಿಕೆ ಕೊಟ್ಟಿದ್ದ. ಪೊಲೀಸರು ವಿಚಾರಣೆಗೆ ಬರುವಂತೆ ರೇವಂತ್‌ಗೆ ನೋಟಿಸ್ ಕೊಟ್ಟರು.

ಅರ್ಧ ಗಂಟೆ ಬಳಿಕ ನಾನು ಇರುವುದಿಲ್ಲ

ಅರ್ಧ ಗಂಟೆ ಬಳಿಕ ನಾನು ಇರುವುದಿಲ್ಲ

ಫೆಬ್ರವರಿ 22ರಂದು ಬಂಡಿಕೊಪ್ಪಲು ರೈಲ್ವೆ ಗೇಟ್‌ ಸಮೀಪ ರೈಲಿಗೆ ತಲೆಕೊಟ್ಟು ರೇವಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆಲವು ಸ್ನೇಹಿತರಿಗೆ ರೇವಂತ್ ಕರೆ ಮಾಡಿದ್ದಾರೆ. ಇನ್ನು ಅರ್ಧಗಂಟೆ ಬಳಿಕ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಈ ಕೊನೆಯ ಫೋನ್ ಕರೆಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

ಚಿನ್ನದ ಆಭರಣಗಳು ವಶಕ್ಕೆ

ಚಿನ್ನದ ಆಭರಣಗಳು ವಶಕ್ಕೆ

ಫೆಬ್ರವರಿ 17ರಂದು ಕವಿತಾ ಹತ್ಯೆ ಮಾಡಿದ್ದ ಡಾ. ರೇವಂತ್ ದರೋಡೆ ಎಂದು ನಂಬಿಸಲು ಮನೆಯ ಬೀರು ಒಡೆದು ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಹೋಗಿದ್ದ. ಈ ಚಿನ್ನಾಭರಣಗಳನ್ನು ಬೆಂಗಳೂರಿನಲ್ಲಿದ್ದ ಪ್ರೇಯಸಿ ಹರ್ಷಿತಾಗೆ ಕೋರಿಯರ್ ಮಾಡಿದ್ದ. ಇದನ್ನು ಪತ್ತೆ ಹಚ್ಚಿದ್ದ ಕಡೂರು ಪೊಲೀಸರು ಬೆಂಗಳೂರಲ್ಲಿ ಆಭರಣಗಳನ್ನು ವಶಕ್ಕೆ ಪಡೆದಿದ್ದರು.

ಹರ್ಷಿತಾ ಆತ್ಮಹತ್ಯೆ

ಹರ್ಷಿತಾ ಆತ್ಮಹತ್ಯೆ

ಡಾ. ರೇವಂತ್ ಮತ್ತು ಹರ್ಷಿತಾ ನಡುವೆ ಅಕ್ರಮ ಸಂಬಂಧವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕವಿತಾಳಿಗೆ ಈ ವಿಚಾರ ತಿಳಿದು ಮನೆಯಲ್ಲಿ ಗಲಾಟೆ ನಡೆದಿತ್ತು. ಹರ್ಷಿತಾ ಕೊಟ್ಟ ಕುಮ್ಮಕ್ಕಿನಿಂದಲೇ ರೇವಂತ್ ಕವಿತಾ ಹತ್ಯೆ ಮಾಡಿದ್ದ. ಆದರೆ, ರೇವಂತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ಹರ್ಷಿತಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು.

English summary
Kadur police who probing dentist Dr.Revanth suicide case. Police collected Revanth final call details. Dr.Revanth killed wife Kavitha and committed suicide after 5 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X