ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ

|
Google Oneindia Kannada News

ಬೆಂಗಳೂರು, ಜೂನ್ 26: ಹವಾಮಾನ ಬದಲಾವಣೆ, ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡೆಂಗ್ಯೂ ಹಾವಳಿ ವಿಪರೀತವಾಗಿದೆ. 29 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.

ಆಗಾಗ ಒಂದೊಂದು ಮಳೆ ಬಂದು ನಿಂತಿರುವ ನೀರಿನಲ್ಲಿ ಹೆಚ್ಚು ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 796 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 311, ಶಿವಮೊಗ್ಗದಲ್ಲಿ 99 ಪ್ರಕರಣ ದಾಖಲಾಗಿತ್ತು, 360 ಚಿಕೂನ್ ಗುನ್ಯಾ ಪ್ರಕರಣವು ಕೂಡ ಇದೆ.

ಕೆಲವು ರೋಗಿಗಳಲ್ಲಿ ಪ್ಲೇಟ್‌ಲೆಟ್‌ ಕೌಂಟ್ ಕೇವಲ ಪ್ರತಿ ಮೈಕ್ರೋ ಲೀಟರ್‌ಗೆ ಕೇವಲ 16 ಸಾವಿರ ಪ್ಲೇಟ್‌ಲೆಟ್ ಕೌಂಟ್ ಇದೆ. ಸಾಮಾನ್ಯವಾಗಿ 1,50,000ರಿಂದ 4,50,000 ಇರಬೇಕು.

ಈ ಸಮಯದಲ್ಲಿ ಅವರ ದೇಹದ ಉಷ್ಣತೆ 103 ರಿಂದ105 ಡಿಗ್ರಿವರೆಗೆ ಏರುತ್ತದೆ. ಇದರ ಜೊತೆಗೆ ತೀವ್ರ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಪಾಯಕಾರಿ ಹಂತವಲ್ಲ. ಈ ತೀವ್ರ ಜ್ವರ 2 ರಿಂದ 3 ದಿನದೊಳಗೆ ಕಡಿಮೆಯಾಗುತ್ತದೆ. ಈ ಜ್ವರ ಕಡಿಮೆಯಾಗುವ ಅವಧಿ ಅತ್ಯಂತ ನಿರ್ಣಾಯಕವಾದದ್ದು. ಈ ಸಮಯದಲ್ಲಿ ದೇಹದಲ್ಲಿ ಕೆಂಪು ಕಲೆಗಳು ಮೂಡುತ್ತವೆ.

ಪ್ಲೇಟ್ಲೇಟ್ ಗಳ ಸಂಖ್ಯೆ ಕುಸಿಯುತ್ತದೆ ಜೊತೆಗೆ ರಕ್ತದೊತ್ತಡವೂ ಕಡಿಮೆಯಾಗುತ್ತದೆ. ಇದು ಡೆಂಗ್ಯೂ ಜ್ವರದ ಅತ್ಯಂತ ಅಪಾಯಕಾರಿ ಹಂತ. ಈ ಜ್ವರ ಹೆಚ್ಚಾಗುವ ಸಮಯಕ್ಕಿಂತ ಅದು ಕಡಿಮೆಯಾಗುತ್ತಿರುವ ಸಮಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅತಿ ಅಗತ್ಯ. ಈ ಸಮಯದಲ್ಲಿ ನೀವು ವೈದ್ಯರು ಸೂಚನೆ ಕೊಟ್ಟರೆ ಆಸ್ಪತ್ರೆಯಲ್ಲಿಯೇ ಉಳಿದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಡೆಂಗ್ಯೂ ರೋಗದ ಮುಖ್ಯ ಲಕ್ಷಣಗಳು

ಡೆಂಗ್ಯೂ ರೋಗದ ಮುಖ್ಯ ಲಕ್ಷಣಗಳು

ಡೆಂಗ್ಯೂ ಬಂದರೆ ತೀವ್ರವಾದ ತಲೆನೋವುಃ ಡೆಂಗ್ಯೂ ಲಕ್ಷಣಗಳಲ್ಲಿ ಮುಖ್ಯವಾದದ್ದು ತಲೆನೋವು. ಡೆಂಗ್ಯೂ ಸೋಕಿದವರಿಗೆ ವಿಪರೀತ ತಲೆನೋವು ಇರುತ್ತದೆ. ತಲೆ ಭಾರವಾಗಿ ಇರುತ್ತದೆ. ಜ್ವರಃ ಡೆಂಗ್ಯೂ ಸೋಂಕು ಇರುವರಿಗೆ ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫಾರನ್ ಹೀಟ್ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಆ ಜ್ವರ ಡೆಂಗ್ಯೂಗೆ ದಾರಿಯಾಗಬಹುದು.
ವಾಂತಿ ಮತ್ತು ಭೇದಿಃ ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ಮಾತುಮಾತಿಗೂ ದಾಹವಾಗುತ್ತಿರುತ್ತದೆ. ಅದೇ ರೀತಿ ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಕೀಲು ನೋವುಃ ಡೆಂಗ್ಯೂ ಕಾಯಿಲೆ ಬಂದರೆ ಕೀಲು ನೋವು, ಸ್ನಾಯುಗಳ ನೋವು ಹೆಚ್ಚಾಗಿ ಇರುತ್ತದೆ. ರಕ್ತಸ್ರಾವಃ ಡೆಂಗ್ಯೂ ಲಕ್ಷಣಗಳಲ್ಲಿ ಇದು ಮುಖ್ಯವಾದದ್ದು. ಡೆಂಗ್ಯೂ ಇದ್ದರೆ ಮೂಗಿನಿಂದ ರಕ್ತಸ್ರಾವ ಆಗುತ್ತಿರುತ್ತದೆ. ಕಾಯಿಲೆ ತೀವ್ರಗೊಂಡರೆ ಈ ರಕ್ತಸ್ರಾವ ಅಧಿಕವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಯುವ ಸಾಧ್ಯತೆಗಳಿರುತ್ತವೆ.

ಡೆಂಗ್ಯೂ ಬರುವುದು ಹೇಗೆ?

ಡೆಂಗ್ಯೂ ಬರುವುದು ಹೇಗೆ?

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.

ಕಪ್ಪು ಬಿಳಿ ಬಣ್ಣ ಈಡೀಸ್ ಸೊಳ್ಳೆ

ಕಪ್ಪು ಬಿಳಿ ಬಣ್ಣ ಈಡೀಸ್ ಸೊಳ್ಳೆ

ಇದು ನೋಡಲು ಸಾದ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆ ಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ.ಸಾಮಾನ್ಯವಾಗಿ ಇವು ಹಗಲು ಸಮಯ ಮಾತ್ರ ಕಡಿಯುತ್ತವೆ.

Array

Array

-ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.

-ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.

-ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.

-ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

ಡೆಂಗ್ಯೂ ತಡೆಗಟ್ಟುವ ಕ್ರಮಗಳು

ಡೆಂಗ್ಯೂ ತಡೆಗಟ್ಟುವ ಕ್ರಮಗಳು

-ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ.
-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು
-ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

English summary
In Karnataka many districts people are suffering from Dengue, Here are the information about symptoms, prevention and treatment of Dengue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X