ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸದ್ದು ಮಾಡುತ್ತಿದೆ ಡೆಂಗ್ಯೂ ಮಹಾಮಾರಿ, ಪರಿಹಾರ ಹೇಗೆ?

|
Google Oneindia Kannada News

ಚಿಟಿಕೆ ಗಾತ್ರವಿರದ ಸೊಳ್ಳೆ ಐದು-ಆರಡಿಯ ಮನುಷ್ಯರನ್ನೇ ಮುಗಿಸಿಬಿಡಬಹುದು ಎಂದರೆ ನಂಬುವುದು ಕಷ್ಟವಾಗಬಹುದು. ಆದರೆ ಅದು ಸಾಧ್ಯ ಎಂಬುದನ್ನು ಡೆಂಗ್ಯೂ,, ಮಲೇರಿಯಾ, ಚಿಕೂನ್ ಗುನ್ಯಾದಂಥ ಕಾಯಿಲೆಗಳು ಸಾಬೀತುಪಡಿಸಿವೆ.

ಮಳೆಗಾಲವೆಲ್ಲ ಮುಗಿಯುತ್ತಾ ಬಂದು ಸಣ್ಣಗೆ ಆಗಲೋ, ಈಗಲೋ ಬಿಸಿಲು ಮೂಡುತ್ತಿರುವ ಹೊತ್ತಲ್ಲಿ ಈ ಡೆಂಗ್ಯೂ ಎಂಬ ಮಹಾಮಾರಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳುಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

ಎಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡು ಮನುಷ್ಯನನ್ನು ನಿತ್ರಾಣವಾಗಿಸುತ್ತದೆ. ದೇಹದಲ್ಲಿರುವ ಬಿಳಿ ರಕ್ತಕಣಗಳು ನಾಶವಾಗುತ್ತ, ಕೊನೆಗೆ ವ್ಯಕ್ತಿ ಸಾಯುವ ಹಂತವನ್ನೂ ತಲುಪಬಹುದು.

ಆದರೆ ಮೊದಲೇ ರೋಗ ಪತ್ತೆ ಮಾಡುವುದರಿಂದ, ಚಿಕಿತ್ಸೆ ಆರಂಭಿಸುವುದರಿಂದ, ಸೂಕ್ತ ಮುನ್ನೆಚ್ಚರಿಕೆಯಿಂದ ಈ ರೋಗ ಪರಿಹಾರ ಮತ್ತು ಬರದಂತೆ ಎಚ್ಚರಿಕೆ ವಹಿಸುವುದು ಸಾಧ್ಯ.

ಡೆಂಗ್ಯೂ ಲಕ್ಷಣಗಳಿವು

ಡೆಂಗ್ಯೂ ಲಕ್ಷಣಗಳಿವು

* ಇದ್ದಕ್ಕಿದ್ದಂತೆ ಆರಂಭವಾಗುವ ವಿಪರೀತ ಜ್ವರ
* ಅಸಹನೀಯ ತಲೆನೋವು
* ಕಣ್ಣಿನ ಬಳಿ ನೋವು
* ವಿಪರೀತ ಕೀಲು ನೋವು
* ಸುಸ್ತು, ವಾಂತಿ
* ಚರ್ಮದ ಮೇಲೆ rashes ಆಗುವುದು.
* ರಕ್ತದೊತ್ತಡ ಕಡಿಮೆ ಆಗುವುದು

ಡೆಂಗ್ಯೂ ಹೊಡೆತಕ್ಕೆ ಕರಾವಳಿ ತತ್ತರ, ರೋಗಿಗಳಿಗೆ ರಕ್ತಕ್ಕೆ ತತ್ವಾರಡೆಂಗ್ಯೂ ಹೊಡೆತಕ್ಕೆ ಕರಾವಳಿ ತತ್ತರ, ರೋಗಿಗಳಿಗೆ ರಕ್ತಕ್ಕೆ ತತ್ವಾರ

ರೋಗ ಪತ್ತೆ ಮತ್ತು ಚಿಕಿತ್ಸೆ

ರೋಗ ಪತ್ತೆ ಮತ್ತು ಚಿಕಿತ್ಸೆ

ಮೇಲಿನ ಲಕ್ಷಣಗಳಲ್ಲಿ ಕೆಲವು ಕಂಡುಬಂದರೆ ವೈದ್ಯರೇ ರಕ್ತ ಪರೀಕ್ಷೆಗೆ ಸೂಚಿಸುತ್ತಾರೆ. ರಕ್ತ ಪರೀಕ್ಷೆಯ ಮುಳಕ ಡೆಂಗ್ಯೂ ಸೋಂಕು ತಗುಲಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಡೆಂಗ್ಯೂಗೆ ಯಾವುದೇ ರೀತಿಯ ನಿರ್ದಿಷ್ಟ ಔಷಧ ಎಂಬುದಿಲ್ಲ. ರೋಗ ಉಲ್ಬಣಿಸಿದರೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುವುದೇ ಈ ರೋಗಕ್ಕಿರುವ ಪರಿಹಾರ.

ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ

ಮುನ್ನೆಚ್ಚರಿಕೆ ಕ್ರಮಗಳು

ಮುನ್ನೆಚ್ಚರಿಕೆ ಕ್ರಮಗಳು

ಡೆಂಗ್ಯೂ ಬಾರದಂತೆ ಎಚ್ಚರ ವಹಿಸಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮನೆಯ ಅಕ್ಕ-ಪಕ್ಕ ಅಥವಾ ಇನ್ನೆಲ್ಲೇ ನೀರು ನಿಲ್ಲುವಂಥ ಜಾಗಗಳಿದ್ದರೆ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಲ್ಲೆಲ್ಲೂ ಸ್ವಚ್ಛತೆಯನ್ನು ಕಾಪಾಡಬೇಕು. ರೋಗ ಪತ್ತೆಯಾಗುತ್ತಿದ್ದಂತೆಯೇ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ರೋಗ ಪತ್ತೆಯಾದ ನಂತರ ವೈದ್ಯರು ನೀಡಿದ ಔಷಧವನ್ನು ನಿರ್ಲಕ್ಷಿಸಬಾರದು. ಅದರ ಜೊತೆ ಜೊತೆಯಲ್ಲೇ ಮನೆಮದ್ದುಗಳನ್ನು ಮಾಡಿಕೊಳ್ಳಬೇಕು.

6 ಪರಿಣಾಮಕಾರೀ ಮನೆಮದ್ದುಗಳು

6 ಪರಿಣಾಮಕಾರೀ ಮನೆಮದ್ದುಗಳು

* ಅಮೃತಬಳ್ಳಿ ಕಷಾಯ: ಯಾವುದೇ ರೀತಿಯ ಜ್ವರಕ್ಕೆ ಅಮೃತಬಳ್ಳಿ(giloy)ಯ ಕಷಾಯ ಅತ್ಯುತ್ತಮ ಮನೆಮದ್ದು. ವಾರಕ್ಕೊಮ್ಮೆ ಈ ಕಷಾಯ ಸೇವಿಸುವುದರಿಂದ ಡೆಂಗ್ಯೂದಂಥ ಖಾಯಿಲೆ ಬಾರದಂತೆ ಎಚ್ಚರ ವಹಿಸಬಹುದು.
* ಪಪ್ಪಾಯ ಎಲೆ: ಪಪ್ಪಾಯ ಮರದ ಎಲೆಯ ರಸವನ್ನು ಸೇವಿಸಿದರೆ ಬಿಳಿ ರಕ್ತಕಣಗಳು ಹೆಚ್ಚುತ್ತವೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ದೇಹದ ಉಷ್ಣತೆ ಹೆಚ್ಚಾಗಿ ಸಮಸ್ಯೆಯಾಗಬಹುದು.
* ಮೆಂತ್ಯ ಎಲೆ: ಮೆಂತ್ಯ ಎಲೆ ಜ್ವರವನ್ನು ಹತೋಟಿಗೆ ತರುವುದಲ್ಲದೆ, ಗಂಟು ನೋವುಗಳನ್ನೂ ನಿವಾರಿಸಬಲ್ಲದು.
* ಗೋಲ್ಡನ್ ಸೀಲ್(Goldenseal): ಪಪ್ಪಾಯ ಎಲೆಗಳಂತೆಯೇ ಕಂಡುಬರುವ ಈ ಎಲೆಗಳು ಸಹ ಜ್ವರವನ್ನು ಬಹುಬೇಗ ಕಡಿಮೆ ಮಾಡಬಲ್ಲವು.
* ಅರಿಶಿಣ: ಅರಿಶಿಣವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಾಲಿನೊಂದಿಗೆ ಅರಿಶಿಣ ಸೇರಿಸಿ ಸೇವಿಸಿ.
* ತುಳಸಿ ಎಲೆ: ತುಳಸಿ ಎಲೆಯೂ ಅತ್ಯತ್ತಮ ರೋಗಪ್ರಿರೋಧವಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಯ ಕಷಾಯ ಮಾಡಿ ಚಿಟಕಿ ಮೆಣಸಿನ ಪುಡಿ ಸೇರಿಸಿ ಕುಡಿದರೆ ದೇಹದ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.

English summary
Dengue fever is a painful, debilitating mosquito-borne disease . It is one of the deadly disease. Here are the symptoms and Home remedies
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X