ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ರಾಜ್ಯದಲ್ಲಿ ಈ ಬಾರಿ ಸಕಾಲಕ್ಕೆ ಮುಂಗಾರು ಮಳೆ ಆಗಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಇಲ್ಲದಂತಾಗಿದೆ.

ನೆರೆ ಹಾಗೂ ಅತಿವೃಷ್ಟಿಯಿಂದ ಪಕ್ಕದ ಕೇರಳದಲ್ಲಿ ಇಲಿ ಜ್ವರ ಭೀತಿ ಎದುರಾಗಿದ್ದರೂ, ಕರ್ನಾಟಕದಲ್ಲಿ ಇಲಿಜ್ವರ ಸೇರಿದಂತೆ ಮೇರಿಯಾ, ಡೆಂಗ್ಯೂ ಇನ್ನಿತರೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ಐದು ವರ್ಷಗಳಲ್ಲಿ 2013ರಿಂದ 2016ರ ಅವಧಿಯಲ್ಲಿ ಮೂರು ವರ್ಷಗಳ ಕಾಲ ಮಳೆ ಕೊರತೆ ಉಂಟಾಗಿದ್ದರಿಂದ ರಾಜ್ಯದಲ್ಲಿ ಡೆಂಗ್ಯೂನಿಂದ ಹಲವಾರು ಜನ ಮೃತಪಟ್ಟಿದ್ದರು.

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

2018-19ರ ಸಾಲಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷ ಆರಂಭದಿಂದಲೇ ಡೆಂಗ್ಯೂ ಭೀತಿ ಎದುರಾಗಿದ್ದರೂ ಜೂನ್ ಮಧ್ಯಂತರಲ್ಲಿ ಈ ಭೀತಿ ದೂರವಾಗಿತ್ತು. ಇದೀಗ ಸಕಾಲದಲ್ಲಿ ಮಳೆಯಾಗಿರುವುದರಿಂದ ಈ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿಲ್ಲ.

ಡೆಂಗ್ಯೂ ರೋಗದ ಲಕ್ಷಣಗಳು

ಡೆಂಗ್ಯೂ ರೋಗದ ಲಕ್ಷಣಗಳು

ಈ ಸಮಯದಲ್ಲಿ ಅವರ ದೇಹದ ಉಷ್ಣತೆ 103 ರಿಂದ105 ಡಿಗ್ರಿವರೆಗೆ ಏರುತ್ತದೆ. ಇದರ ಜೊತೆಗೆ ತೀವ್ರ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಪಾಯಕಾರಿ ಹಂತವಲ್ಲ. ಈ ತೀವ್ರ ಜ್ವರ 2 ರಿಂದ 3 ದಿನದೊಳಗೆ ಕಡಿಮೆಯಾಗುತ್ತದೆ. ಈ ಜ್ವರ ಕಡಿಮೆಯಾಗುವ ಅವಧಿ ಅತ್ಯಂತ ನಿರ್ಣಾಯಕವಾದದ್ದು. ಈ ಸಮಯದಲ್ಲಿ ದೇಹದಲ್ಲಿ ಕೆಂಪು ಕಲೆಗಳು ಮೂಡುತ್ತವೆ,

ಪ್ಲೇಟ್ಲೇಟ್ ಗಳ ಸಂಖ್ಯೆ ಕುಸಿಯುತ್ತದೆ ಜೊತೆಗೆ ರಕ್ತದೊತ್ತಡವೂ ಕಡಿಮೆಯಾಗುತ್ತದೆ. ಇದು ಡೆಂಗ್ಯೂ ಜ್ವರದ ಅತ್ಯಂತ ಅಪಾಯಕಾರಿ ಹಂತ. ಈ ಜ್ವರ ಹೆಚ್ಚಾಗುವ ಸಮಯಕ್ಕಿಂತ ಅದು ಕಡಿಮೆಯಾಗುತ್ತಿರುವ ಸಮಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅತಿ ಅಗತ್ಯ. ಈ ಸಮಯದಲ್ಲಿ ನೀವು ವೈದ್ಯರು ಸೂಚನೆ ಕೊಟ್ಟರೆ ಆಸ್ಪತ್ರೆಯಲ್ಲಿಯೇ ಉಳಿದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು? ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

ಡೆಂಗ್ಯೂ ಎಂದರೇನು?

ಡೆಂಗ್ಯೂ ಎಂದರೇನು?

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು... ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

ಈಡೀಸ್ ಸೊಳ್ಳೆ ನೋಡಲು ಹೇಗಿರುತ್ತದೆ

ಈಡೀಸ್ ಸೊಳ್ಳೆ ನೋಡಲು ಹೇಗಿರುತ್ತದೆ

ಇದು ನೋಡಲು ಸಾದ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆ ಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ.ಸಾಮಾನ್ಯವಾಗಿ ಇವು ಹಗಲು ಸಮಯ ಮಾತ್ರ ಕಡಿಯುತ್ತವೆ.

ಡೆಂಗ್ಯೂ ಬಗ್ಗೆ ನೆನಪಿಡಲೇ ಬೇಕಾದ ಅಂಶಗಳು

ಡೆಂಗ್ಯೂ ಬಗ್ಗೆ ನೆನಪಿಡಲೇ ಬೇಕಾದ ಅಂಶಗಳು

-ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.

- ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.

-ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.

-ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

ಡೆಂಗ್ಯೂ ಸೋಂಕು ತಡೆಗಟ್ಟುವುದು ಹೇಗೆ?

ಡೆಂಗ್ಯೂ ಸೋಂಕು ತಡೆಗಟ್ಟುವುದು ಹೇಗೆ?

-ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ.

-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು

-ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

English summary
Following good rain fall in the state, dengue and many communicable diseases under control this year, health department sources revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X