ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ

By Manjunatha
|
Google Oneindia Kannada News

ಬೆಂಗಳೂರು, ಜೂನ್ 12: ಸೊಳ್ಳೆಗಳಿಂದ ಉಂಟಾಗುವ ಡೆಂಗಿ ಜ್ವರ ಪ್ರಕರಣದಲ್ಲಿ ತಮಿಳುನಾಡು, ಕೇರಳದ ನಂತರ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದೆ. ದಕ್ಷಿಣದ ರಾಜ್ಯಗಳಲ್ಲೇ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವುದು ವಿಶೇಷ.

ರಾಜ್ಯದಲ್ಲಿ 2018ರಲ್ಲಿ ಈ ವರೆಗೆ 1006 ಡೆಂಗಿ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 17,265 ಡೆಂಗಿ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ತಮಿಳುನಾಡಿನಲ್ಲಿ 23,294 ಹಾಗೂ ಕೇರಳದಲ್ಲಿ 19,975 ಪ್ರಕರಣಗಳು ದಾಖಲಾಗಿದ್ದವು.

ನಿಪಾಹ್ ಭೀತಿ: ಹಂದಿಗಳ ಸೆರೆಗೆ ಮುಂದಾದ ಬಿಬಿಎಂಪಿನಿಪಾಹ್ ಭೀತಿ: ಹಂದಿಗಳ ಸೆರೆಗೆ ಮುಂದಾದ ಬಿಬಿಎಂಪಿ

ರಾಜ್ಯದಲ್ಲಿ ನಿಯಮಿತವಾಗಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಅದರಲ್ಲಿಯೂ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರದಲ್ಲಿ ಇತ್ತೀಚೆಗಷ್ಟೆ 40 ಚಿಕೂನ್ ಗುನ್ಯಾ ಮತ್ತು 380 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದವು.

Dengue cases rise in Karnataka, third in country

ಎಲ್ಲೆಡೆ ಮಳೆ ಪ್ರಾರಂಭವಾಗಿದ್ದು ಇಂತಹಾ ವಾತಾವರಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯ ಸುತ್ತ-ಮುತ್ತ ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಎಚ್ಚರಿಕೆ ನೀಡಿದೆ.

English summary
Dengue cases are in the rise in Karnataka state. After Tamilnadu and Kerala Karnataka detected more dengue cases in country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X