• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಲಕಚ್ಚಿದ ತರಕಾರಿ ಬೆಲೆ: ಕಂಗಾಲಾದ ರೈತಾಪಿ ವರ್ಗ

By Balaraj
|

ಬೆಂಗಳೂರು, ಡಿ 11: ನೋಟು ನಿಷೇಧ ಮತ್ತು ಚಿಲ್ಲರೆ ಸಮಸ್ಯೆಯಿಂದ ತರಕಾರಿ ಬೆಲೆಯಲ್ಲಿ ಭಾರೀ ಕುಸಿತಗೊಂಡಿದ್ದು, ರೈತಾಪಿ ವರ್ಗ ಕಂಗಾಲಾಗಿದೆ.

ಪ್ರಮುಖವಾಗಿ ಚಿಲ್ಲರೆ ಸಮಸ್ಯೆಯಿಂದ ತರಕಾರಿ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ನಿಗದಿ ಪಡಿಸಿದ ದರಕ್ಕೆ ರೈತರು ಬೇರೆ ದಾರಿಯಿಲ್ಲದೆ ತರಕಾರಿ ಮಾರಿ ಹೋಗುತ್ತಿದ್ದಾರೆ.

ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದ ತರಕಾರಿಗಳಿಗೂ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮ್ಯಾಟೋ ಬೆಲೆಯಂತೂ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ಎರಡು ರೂಪಾಯಿಯಂತೆ ಮಾರಾಟವಾಗುತ್ತಿದೆ. (ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್)

ಚಿಲ್ಲರೆ ಇದ್ದವರಿಗೆ ಮಾತ್ರ ತರಕಾರಿ ಮಾರಬೇಕಾದ ಅನಿವಾರ್ಯತೆಯಲ್ಲಿರುವ ಬೀದಿ ಮತ್ತು ತಳ್ಳುಗಾಡಿ ವ್ಯಾಪಾರಿಗಳಿಗೆ ಅಪನಗದೀಕರಣದ ಬಿಸಿ ಹೆಚ್ಚಿನ ಮಟ್ಟದಲ್ಲಿ ತಟ್ಟುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ಬೆಲೆ ಇಂತಿದೆ (ಕೆಜಿಯೊಂದಕ್ಕೆ)

ಟೊಮ್ಯಾಟೋ - ರೂ. 2 - 3

ಬದನೆಕಾಯಿ - ರೂ. 10-12

ಹೂಕೋಸು - ರೂ. 12 - 15

ಹಸಿ ಮೆಣಸಿನಕಾಯಿ - ರೂ. 20-25

ಹುರುಳಿಕಾಯಿ - ರೂ. 15-18

ಕ್ಯಾರೆಟ್ - ರೂ. 18-20

ಬೆಂಡೇಕಾಯಿ - ರೂ. 12 - 15

ಹಾಗಲಕಾಯಿ - ರೂ. 15-18

ಬೀಟ್ರೋಟ್ - ರೂ. 20-25

English summary
Demonetisation and Change problem, Vegetable prize fallen down heavily in APMC market in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X