ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ಪ್ಲಸ್; ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದಲೇ ಅಪಾಯ

|
Google Oneindia Kannada News

ಬೆಂಗಳೂರು, ಜೂನ್ 23; ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಲಾಕ್‌ಡೌನ್ ಈಗ ತೆರವುಗೊಂಡಿದ್ದು, ಅಕ್ಕಪಕ್ಕದ ರಾಜ್ಯಗಳಿಂದ ಡೆಲ್ಟಾ ಪ್ಲಸ್ ಅಪಾಯ ಎದುರಾಗಿದೆ.

ಕರ್ನಾಟಕದ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ 20 ಪ್ರಕರಣಗಳಿವೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.

 ಭಾರತದಲ್ಲಿ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆ, ಯಾವ ರಾಜ್ಯದಲ್ಲಿ ಎಷ್ಟು? ಭಾರತದಲ್ಲಿ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆ, ಯಾವ ರಾಜ್ಯದಲ್ಲಿ ಎಷ್ಟು?

ತಮಿಳುನಾಡಿನಲ್ಲಿ 4 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳಿರುವ 2ನೇ ರಾಜ್ಯ ತಮಿಳುನಾಡು ಆಗಿದೆ. ಇದರಿಂದಾಗಿ ಈಗ ಅನ್‌ಲಾಕ್‌ಗೊಂಡಿರುವ ಕರ್ನಾಟಕಕ್ಕೆ ಆತಂಕ ಎದುರಾಗಿದೆ.

ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರುಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರು

Delta Plus Variant Of Coronavirus Challenge To Karnataka By Interstate Travelers

ಕರ್ನಾಟಕದಲ್ಲಿ ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಅಕ್ಕ-ಪಕ್ಕದ ರಾಜ್ಯಗಳು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳ ಸಂಚಾರದಿಂದಲೇ ಪ್ರಕರಣಗಳು ಹೆಚ್ಚಾಗಿದ್ದವು.

 ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ

ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಡೆಲ್ಟಾ ಪ್ಲಸ್ ಬಗ್ಗೆ ಮಾತನಾಡಿದ್ದಾರೆ. "ಡೆಲ್ಟಾ ಪ್ಲಸ್ ವೈರಸ್ ಮೊದಲ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಿತರಿಗೆ ಹರಡಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಈಗಾಗಲೇ ಅನ್‌ಲಾಕ್ ಗೊಂಡಿರುವ ಕರ್ನಾಟಕ ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ವೈರಸ್ ಹರಡುವಿಕೆ ತಡೆಯಲು ಅಂತರ ರಾಜ್ಯ ಸಂಚಾರದ ಮೇಲೆ ನಿಗಾವಹಿಸಬೇಕಿದೆ. ಆದರೆ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಅವಕಾಶವಿಲ್ಲ.

ಆದ್ದರಿಂದ ಸರ್ಕಾರ ಅಂತರ ರಾಜ್ಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕಿದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ಡೆಲ್ಟಾ ಪ್ಲಸ್ ಅಪಾಯದಿಂದ ದೂರವುಳಿಯಬಹುದಾಗಿದೆ.

ಈಗಾಗಲೇ ಭಾರತದ ನಾಲ್ಕು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಮಾದರಿಯ ವೈರಸ್ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಸಾಕಷ್ಟು ಮಾದರಿಗಳನ್ನು ಜೆನೂಮ್ ಸಿಕ್ವೆನ್ಸಿಂಗ್‌ಗೆ ಒಳಪಡಿಸಲಾಗಿಲ್ಲದ ಕಾರಣ ಇದರ ವ್ಯಾಪ್ತಿಯನ್ನು ಅಂದಾಜಿಸುವುದು ಕಷ್ಟವಾಗಿದೆ.

Recommended Video

WTC ಪಂದ್ಯದಲ್ಲಿ ಆಡೋಕೆ ಟೀಮ್ ಇಂಡಿಯಾದಲ್ಲಿ ಈ ಬೌಲರ್ ಇದ್ದಿದ್ರೆ ಕಥೆನೇ ಬೇರೆ ಆಗ್ತಿತ್ತು | Oneindia Kannada

English summary
Panic created in Karnataka after people infected with Delta Plus variant of Coronavirus is rising in neighbouring states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X