ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವ

|
Google Oneindia Kannada News

ಬೆಂಗಳೂರು, ಅ 4: ಕೇಂದ್ರ ಸರಕಾರದಿಂದ ಬರಬೇಕಾಗಿರುವ ಬರಪರಿಹಾರ ವಿಳಂಬವಾಗುತ್ತಿರುವುದಕ್ಕೆ, ಇದೇ ಮೊದಲ ಬಾರಿಗೆ ಸಚಿವರು, ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು, " ಕೇಂದ್ರ ಸರಕಾರದಿಂದ ಪರಿಹಾರ ಬರುವುದು ತಡವಾಗುತ್ತಿದೆ. ಇದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು. ಈ ಸಂಬಂಧ, ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸುತ್ತಿದ್ದೇನೆ" ಎಂದು ಸಚಿವರು ಹೇಳಿದ್ದಾರೆ.

ಪ್ರತಾಪ್ ಸಿಂಹ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್ : ಸೂಲಿಬೆಲೆಪ್ರತಾಪ್ ಸಿಂಹ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್ : ಸೂಲಿಬೆಲೆ

"ಇದೊಂದು ದೊಡ್ಡ ಮೊತ್ತದ ಪರಿಹಾರ ಆಗಿರುವುದರಿಂದ, ಯಾರೂ ನಿರೀಕ್ಷಿದಷ್ಟು ತಡವಾಗುತ್ತಿದೆ. ಇಷ್ಟು ವಿಳಂಬವಾಗುತ್ತದೆ ಎಂದು ನಾವ್ಯಾರೂ ನಿರೀಕ್ಷಿಸಿರಲಿಲ್ಲ" ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.

Delay In Flood Relief: Karnataka Health Minister B Sriramaulu Taken Apology To North Karnataka People

"ಈ ಹಿಂದೆ, ಕೇಂದ್ರದಿಂದ ಬರುವ ಹಣವೆಲ್ಲಾ ಸೂಕ್ತ ಸಮಯದಲ್ಲಿ ಬಂದಿದೆ. ಇದು ಮಾತ್ರ ವಿಳಂಬವಾಗುತ್ತಿರುವುದಕ್ಕೆ, ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇವೆ" ಎಂದು ಶ್ರೀರಾಮುಲು ಹೇಳಿದ್ದಾರೆ.

ಪರಿಹಾರ ಮೊತ್ತ ಬರುವುದು ವಿಳಂಬವಾಗುತ್ತಿರುವ ವಿಚಾರ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಹಲವು ಸಚಿವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

"ನೆರೆ ಪರಿಹಾರ ಸೂಕ್ಷ್ಮ ವಿಚಾರ. ಸಚಿವರುಗಳು ಎಲ್ಲರೂ ತಾಳ್ಮೆಯಿಂದ ಇರಬೇಕು. ಹೇಳಿಕೆ ನೀಡುವಾಗ ವಿಪಕ್ಷಗಳಿಗೆ ಆಹಾರವಾಗದಂತೆ, ಜನರು ಸಿಟ್ಟಾಗದಂತೆ ನೋಡಿಕೊಳ್ಳಿ" ಎಂದು ಮುಖ್ಯಮಂತ್ರಿಗಳು, ಎಲ್ಲಾ ಸಚಿವರುಗಳಿಗೆ ತಾಕೀತು ಮಾಡಿದ್ದಾರೆಂದು ಹೇಳಲಾಗುತ್ತಿದೆ.

English summary
Delay In Flood Relief: Karnataka Health Minister B Sriramaulu Taken Apology To North Karnataka People
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X