ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಪ್ರಯಾಣದರ ಎಷ್ಟು ಕಡಿಮೆಯಾಗಲಿದೆ?

|
Google Oneindia Kannada News

ಹಾಸನ, ಡಿ. 24 : ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಇಳಿಕೆ ಮಾಡುವುದಾಗಿ ಸರ್ಕಾರ ಬೆಳಗಾವಿ ಅಧಿವೇಶದಲ್ಲಿ ಘೋಷಣೆ ಮಾಡಿತ್ತು. ಡಿಸೆಂಬರ್ ಅಂತ್ಯಕ್ಕೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದ್ದು, ಜನವರಿ 1ರಿಂದ ನೂತನ ದರ ಜಾರಿಗೆ ಬರಲಿದೆ.

ಹಾಸನದಲ್ಲಿ ಬುಧವಾರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ಪ್ರಯಾಣ ದರ ಇಳಿಕೆ ಮಾಡುವ ವಿಚಾರ ಕೊನೆಯ ಹಂತಕ್ಕೆ ತಲುಪಿದ್ದು, ಜನವರಿ 1ರಿಂದ ನೂತನ ಬಸ್ ಪ್ರಯಾಣ ದರ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.[ಸಾರಿಗೆ ಇಲಾಖೆಯ ನಷ್ಟದ ವಿವರ ಇಲ್ಲಿದೆ]

Ramalinga Reddy

ಬಸ್ ಪ್ರಯಾಣ ಕಡಿಮೆ ಮಾಡುವ ಕುರಿತು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಸಚಿವರಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿವೆ. ಕೆಎಸ್ಆರ್‌ಟಿಸಿ ದರ ಶೇ.3ರಿಂದ 4 ಮತ್ತು ಬಿಎಂಟಿಸಿ ಪ್ರಯಾಣ ದರ ಪ್ರತಿ ಸ್ಟೇಜ್‍ಗೆ 1 ರೂ. ಇಳಿಕೆ ಹಾಗೂ ದಿನದ ಬಸ್ ಪಾಸ್ ದರದಲ್ಲಿ 5 ರೂ. ಇಳಿಕೆಯಾಗುವ ಸಾಧ್ಯತೆ ಇದೆ. [ಪ್ರಯಾಣದರ ಇಳಿಕೆ, ಸಚಿವರ ಸುಳಿವು]

ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳ ಪ್ರವಾಸದಲ್ಲಿದ್ದು ಇಂದು ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ ಅವರು ಸಿಎಂ ಅವರನ್ನು ಭೇಟಿ ಮಾಡಿ, ದರ ಇಳಿಕೆ ಬಗ್ಗೆ ಅಂತಿಮ ಒಪ್ಪಿಗೆ ಪಡೆಯಲಿದ್ದಾರೆ. ಡಿಸೆಂಬರ್ 26ರಂದು ದರ ಇಳಿಕೆ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

ಕಳೆದ ಮೂರು-ನಾಲ್ಕು ತಿಂಗಳಲ್ಲಿ ಡೀಸೆಲ್ ದರ ಒಟ್ಟಾರೆ 8 ರೂ. ಇಳಿಕೆಯಾಗಿದ್ದರೂ ಸರ್ಕಾರ ಬಸ್ ಪ್ರಯಾಣ ದರ ಕಡಿಮೆ ಮಾಡಿರಲಿಲ್ಲ. ಇದು ಜನರು ಮತ್ತು ವಿವಿಧ ಸಂಘಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಷ್ಟದ ನೆಪ ಹೇಳಿದ್ದ ಇಲಾಖೆ ಕೊನೆಗೂ ಜನರ ಮತ್ತು ಸಂಘಸಂಸ್ಥೆಗಳ ಒತ್ತಾಯಕ್ಕೆ ಮಣಿದು ಬಸ್ ದರ ಇಳಿಸಲು ಮುಂದಾಗಿದೆ.

English summary
KSRTC and BMTC bus fares reduction will be announced on December 26 said, Transport Minister Ramalinga Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X