ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.5ರ ಕರ್ನಾಟಕ ಬಂದ್; ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್

|
Google Oneindia Kannada News

ಬೆಂಗಳೂರು, ನವೆಂಬರ್ 25: ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಲು ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಡಿಸೆಂಬರ್ 5ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಕರ್ನಾಟಕ ಹೈಕೋರ್ಟ್‌ ಬಂದ್ ಬಗ್ಗೆ ಮಹತ್ವದ ಸೂಚನೆಯನ್ನು ನೀಡಿದೆ.

ಬಂದ್ ನಡೆಸುವಾಗ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ಕನ್ನಡ ಚಳವಳಿ ವಾಟಾಳ್ ಪಕ್ಷಕ್ಕೆ ನಿರ್ದೇಶನವನ್ನು ನೀಡಿದೆ.

ಕರ್ನಾಟಕ ಬಂದ್: ಕರವೇ ನಿಲುವು ಸ್ಪಷ್ಟ ಪಡಿಸಿದ ನಾರಾಯಣ ಗೌಡ್ರುಕರ್ನಾಟಕ ಬಂದ್: ಕರವೇ ನಿಲುವು ಸ್ಪಷ್ಟ ಪಡಿಸಿದ ನಾರಾಯಣ ಗೌಡ್ರು

ರಾಜಕೀಯ ಪಕ್ಷಗಳು ಸಮಾವೇಶ, ಜಾಥಾದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷವನ್ನು ನ್ಯಾಯಾಲಯ ಪ್ರತಿವಾದಿಯಾಗಿ ಮಾಡಿದೆ.

ಡಿ.5ರ ಕರ್ನಾಟಕ ಬಂದ್ ಕರೆ ವಾಪಸ್ ಇಲ್ಲ; ವಾಟಾಳ್ ನಾಗರಾಜ್ ಡಿ.5ರ ಕರ್ನಾಟಕ ಬಂದ್ ಕರೆ ವಾಪಸ್ ಇಲ್ಲ; ವಾಟಾಳ್ ನಾಗರಾಜ್

December 5 Karnataka Bandh COVID Protocol High Court Direction

ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಬಿಜೆಪಿ, ಕಾಂಗ್ರೆಸ್, ಸಿಪಿಐ (ಎಂ), ಜೆಡಿಎಸ್ ಪಕ್ಷವನ್ನು ಪ್ರತಿವಾದಿಯನ್ನಾಗಿ ಮಾಡಿದೆ.

ಮರಾಠ ಅಭಿವೃದ್ಧಿ ನಿಗಮ ಏಕೆ; ಯಡಿಯೂರಪ್ಪಗೆ ವಾಟಾಳ್ ಪ್ರಶ್ನೆ ಮರಾಠ ಅಭಿವೃದ್ಧಿ ನಿಗಮ ಏಕೆ; ಯಡಿಯೂರಪ್ಪಗೆ ವಾಟಾಳ್ ಪ್ರಶ್ನೆ

ಈ ಹಿಂದೆ ನಡೆದ ಸಮಾವೇಶ, ಜಾಥಾಗಳ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಅವರ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವು ಸಂದರ್ಭದಲ್ಲಿ ತಡವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ರಾಜಕೀಯ ಪಕ್ಷಗಳ ಪ್ರಮುಖ ಜವಾಬ್ದಾರಿ ಎಂದು ಹೇಳಿರು ಕೋರ್ಟ್, ಕಾರ್ಯಕರ್ತರಿಗೆ ಈ ಸೂಚನೆಗಳನ್ನು ನೀಡಲು ಪಕ್ಷ ಸಿದ್ಧವಿದೆಯೇ? ಎಂದು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

Recommended Video

Cyclone Nivar Effect: ಮಳೆ ಮಳೆ ... ಎಚ್ಚರ!! | Oneindia Kannada

ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್ ಸಂದರ್ಭದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ದೂರಿದ್ದಾರೆ. ಆದ್ದರಿಂದ, ವಾಟಾಳ್ ಪಕ್ಷಕ್ಕೆ ಸಹ ಸೂಚನೆ ಕೊಡಲಾಗಿದೆ.

English summary
Karnataka high court directed Kannada chalavali vatal paksha to submit report on steps taken to follow COVID protocol in the time of December 5 Karnataka bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X