ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಕೋಟಿ ರೂ.ಗೆ ಗಂಡು ಕುದುರೆ ಖರೀದಿಸಿದ ಮಲ್ಯ!

By Srinath
|
Google Oneindia Kannada News

ಬೆಂಗಳೂರು, ಫೆ.28: ಸಿಬಿಐ ತನಿಖಾ ಸಂಸ್ಥೆಯು 45,000 ಕೋಟಿ ರೂ ಅಗಾಧ ಪ್ರಮಾಣದ ವಂಚನೆ ಜಾಲ ಬಯಲಿಗೆಳೆದಿರುವುದನ್ನು ಇದೀಗ ತಾನೆ ಓದಿದಿರಿ. ಇದಕ್ಕೂ ಈಗ ಹೇಳಹೊರಟಿರುವ ಸ್ಟೋರಿಗೂ ಯಾವುದೇ ನೇರ ಸಂಬಂಧ/ ಹೋಲಿಕೆ ಇಲ್ಲವಾದರೂ...

ಕಿಂಗ್ ಫಿಶರ್ ಏಲ್ ಲೈನ್ಸ್ ಮಾಲೀಕ, ಸಾಲಶೂರ ವಿಜಯ್ ಮಲ್ಯ ಅವರು ತಮ್ಮ ತಲೆಯ ಮೇಲಿರುವ ಸಾಲದ ಹೊರೆಯನ್ನು ಕೆಳೆಗಿಳಿಸಿ (ಅಂದರೆ, ಸಾಲ ಮರುಪಾವತಿಸಿದ್ದಾರೆ ಅಂತಲ್ಲ) ಬರೋಬ್ಬರಿ 6 ಕೋಟಿ ರೂಪಾಯಿ ಕ್ಯಾಷ್ ನೀಡಿ, ಬಲಾಢ್ಯ ಗಂಡು ಕುದುರೆಯನ್ನು ಖರೀದಿಸಿದ್ದಾರೆ.

ಅಂದಹಾಗೆ, ರೇಸ್ ಕುದುರೆಗಳ ಸಂತಾನಾಭಿವೃದ್ಧಿಗಾಗಿ ಇಷ್ಟೊಂದು ಬೆಲೆಬಾಳುವ Air Support ಹೆಸರಿನ ವಿಶೇಷ ತಳಿ ಕುದುರೆಯನ್ನು ಮಲ್ಯ ಆಮದು ಮಾಡಿಕೊಂಡಿದ್ದಾರೆ. UB Group ಮಾಲೀಕರಾಗಿ ವಿಜಯ್ ಮಲ್ಯ ಅವರು Bangalore Royal Challengers ತಂಡ ಕಟ್ಟಲು ಇತ್ತೀಚೆಗೆ 14 ಕೋಟಿ ರೂ ನೀಡಿ, IPLಗಾಗಿ 7 ಕ್ರಿಕೆಟ್ಟಿಗರನ್ನು ಖರೀದಿಸಿದ್ದರು ಎಂಬುದು ಗಮನಾರ್ಹ.

VM: 21ನೆಯ ವಯಸ್ಸಿನಲ್ಲಿ ಕುದುರೆ ಜೂಜು ಅಂಗಳಕ್ಕೆ

VM: 21ನೆಯ ವಯಸ್ಸಿನಲ್ಲಿ ಕುದುರೆ ಜೂಜು ಅಂಗಳಕ್ಕೆ

ತಮ್ಮ 21ನೆಯ ವಯಸ್ಸಿನಲ್ಲಿ ಕುದುರೆ ಜೂಜು ಅಂಗಳಕ್ಕೆ ಕಾಲಿಟ್ಟ 59 ವರ್ಷದ Vijay Mallya ದೇಶದಲ್ಲಿ ಅತಿ ಹೆಚ್ಚು ಕುದುರೆಗಳನ್ನು ಹೊಂದಿರುವ ಮೂವರು ಕುದುರೆ ಮಾಲೀಕರ ಪೈಕಿ ಮೂರನೆಯವರು. ಮೊದಲಿಗರು, (ಮುಂಬೈನ) ಪೂನಾವಾಲಾ ಕುಟುಂಬ ಮತ್ತು ಎರಡನೆಯವರು ಎಂಎಎಂ ರಾಮಸ್ವಾಮಿ (ಕನ್ನಡಿಗರೇ). ಇವರ ಪೈಕಿ ಕುದುರೆಯೊಂದಕ್ಕೆ ಇಷ್ಟೊಂದು ಭಾರಿ ಮೊತ್ತವನ್ನು ನೀಡಿರುವುದು ಇದುವರೆಗೂ ಮಲ್ಯ ಒಬ್ಬರೇ.

6 ಕೋಟಿ ರೂ. ಕುದುರೆ ಕುಣಿಗಲ್ ಸ್ಟಡ್ ಫಾರಂಗೆ

6 ಕೋಟಿ ರೂ. ಕುದುರೆ ಕುಣಿಗಲ್ ಸ್ಟಡ್ ಫಾರಂಗೆ

UB Group ಅಧ್ಯಕ್ಷ ವಿಜಯ್ ಮಲ್ಯ ಅವರು 6 ಕೋಟಿ ರೂ. ನೀಡಿ ಕುದುರೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಆರು ವರ್ಷದ Air Support ಹೆಸರಿನ ಕುದುರೆಯನ್ನು ಸದ್ಯದಲ್ಲೇ ಬರಮಾಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಕುದುರೆಯನ್ನು ಚೆನ್ನೈನಲ್ಲಿ ವಿಶೇಷ ಏಕಾಂತ ಸ್ಥಳದಲ್ಲಿ ಕಟ್ಟಿಹಾಕಲಾಗಿದೆ. ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವಂತಾಗಲು 60 ದಿನಗಳ ಕಾಲ ಇದನ್ನು ಏಕಾಂತ ಸ್ಥಳದಲ್ಲಿರಿಸಲಾಗುತ್ತದೆ. ಆ ಬಳಿಕ ಅದನ್ನು 450 ಎಕರೆ ಪ್ರದೇಶದಲ್ಲಿರುವ ಚರಿತ್ರಾರ್ಹ ಕುಣಿಗಲ್ ಸ್ಟಡ್ ಫಾರಂಗೆ ಕರೆತರಲಾಗುವುದು. 1993ರಲ್ಲಿ ಮಲ್ಯ ಈ ಕುದುರೆ ಕೇಂದ್ರವನ್ನು ಖರೀದಿಸಿದ್ದರು.

ಕುದುರೆ ಶೋಕಿಯ ಟಿಪ್ಪು ಸುಲ್ತಾನ್ ಕುಣಿಗಲ್ ಸ್ಟಡ್ ಫಾರಂ

ಕುದುರೆ ಶೋಕಿಯ ಟಿಪ್ಪು ಸುಲ್ತಾನ್ ಕುಣಿಗಲ್ ಸ್ಟಡ್ ಫಾರಂ

ಕುದುರೆ ಶೋಕಿಯ ಟಿಪ್ಪು ಸುಲ್ತಾನ್ 250 ವರ್ಷಗಳ ಹಿಂದೆ ಕುಣಿಗಲ್ ಸ್ಟಡ್ ಫಾರಂ ಕೇಂದ್ರವನ್ನು ಸ್ಥಾಪಿಸಿದ್ದರು. ಇದೀಗ UB Group ಕಂಪನಿಯ ಮುಖ್ಯಕೇಂದ್ರವಾಗಿದೆ. United Racing and Bloodstock Breeders ಕಂಪನಿಯು ವಿಜಯ್ ಮಲ್ಯಾರ ಕುದುರೆ ರೇಸಿಂಗ್ ಮತ್ತು ಕುದುರೆ ಸಂತಾನಾಭಿವೃದ್ಧಿ ಆಸಕ್ತಿಗಳನ್ನು ನಿರ್ವಹಿಸುತ್ತಾ ಬಂದಿದೆ. ಸ್ವತಃ ಮಲ್ಯ ಅವರು 4 ಕೋಟಿ ನೀಡಿದ್ದರೆ 2 ಕೋಟಿ ರೂ. ಗಳನ್ನು UB Group MD ಝೆಯನ್ ಮಿರ್ಜಾ ನೀಡಿದ್ದಾರೆ.

ಆಮದು ತಳಿ Air Support ಸಂತಾನಾಭಿವೃದ್ಧಿಗೆ ಮಾತ್ರ

ಆಮದು ತಳಿ Air Support ಸಂತಾನಾಭಿವೃದ್ಧಿಗೆ ಮಾತ್ರ

Kunigal Stud Farm ನಲ್ಲಿ ಪ್ರಸ್ತುತ 100 ಹೆಣ್ಣು ಕುದುರೆಗಳಿವೆ. ಇವುಗಳ ಪೈಕಿ ಸುಮಾರು 60 ಕುದುರೆಗಳಿಗೆ ಆಮದು ತಳಿಯಾದ Air Support ಶೀಘ್ರವೇ ಸಂತಾನಾಭಿವೃದ್ಧಿ ಕರುಣಿಸಲಿದೆ. ಭಾರತದಲ್ಲಿ ಸದ್ಯಕ್ಕೆ 20 ಗಂಡು ಕುದುರೆಗಳಿವೆ. ಈ ಕುದುರೆಗಳೆಲ್ಲಾ ರೇಸ್ ಮುಗಿಸಿದ್ದು, ಇದೀಗ ಸಂತಾನಾಭಿವೃದ್ಧಿಗೆ ಮಾತ್ರ ಬಳಕೆಯಾಗುತ್ತಿವೆ.

English summary
Debt ridden Kingfisher Vijay Mallya purchases stallion horse for Rs 6 crore. The UB Group chairman is paying Rs 6 crore for an imported stallion to strengthen his hold in India's multi-million dollar racing circuit. The stallion will be bought to breed racehorses at the historic 450-acre Kunigal stud farm, which Mallya took over in 1992.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X