ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮ

By ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ
|
Google Oneindia Kannada News

ವೀರಶೈವ ಮತ್ತು ಲಿಂಗಾಯತ ಇವು ಬಸವ ಪೂರ್ವ ಮತ್ತು ನಂತರದ ಚರ್ಚೆಗಳಿಗೆ ಗ್ರಾಸವಾದ ವಿಷಯಗಳು. ಗುರು ವಿರಕ್ತ ಪರಂಪರೆ ವಾದ ಹೇಗೆ ಮತ್ತು ಏಕೆ ಹುಟ್ಟಿಕೊಂಡವು ? ಎಂಬುದು ಒಂದು ಜಿಜ್ಞಾಸೆಯ ಚರ್ಚೆಯಾಗಿದೆ.

ಬಸವಣ್ಣನವರು 12 ನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಸರ್ವಕಾಲಿಕ ಸಮಕಾಲೀನ ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣಿಕ್ರತವಲ್ಲದ ಲಿಂಗ ಆಶ್ರಮ ವರ್ಗ ವರ್ಣ ಬೇಧ ಹೊರೆತು ಪಡೆಸಿದ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗೆ ಪಾತ್ರವಾದ ಲಿಂಗಾಯತ ಧರ್ಮ ಹೇಗೆ ತನ್ನ ಅಸ್ತಿತ್ವ ಕಳೆದು ಕೊಳ್ಳ ಹತ್ತಿತು ಮತ್ತು ಆಂಧ್ರ ಮೂಲದಿಂದ ಬಂದ ವೀರಶೈವ ವೃತ ಆಚರಣೆಯು ಹೇಗೆ ಲಿಂಗಾಯತ ಧರ್ಮವನ್ನು ಅತಿಕ್ರಮಿಸಿ ಅದರ ಮೂಲ ತತ್ವಗಳನ್ನು ನುಂಗಿ ಹಾಕಲು ಪ್ರಯತ್ನಿಸಿತು ಎಂಬುದರ ಪೂರ್ಣ ಸಾಕ್ಷಿ ದಾಖಲೆ ಸಮೇತ ಸದರಪಡಿಸುತ್ತದೆ ಈ ಲೇಖನ.

ಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳುಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳು

'ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ'
ಬಸವಣ್ಣನ ಆಗಮನವನ್ನು ಜನಪದಿಗರು ತುಂಬು ಮನದಿಂದ ಸ್ವಾಗತಿಸಿದ್ದಾರೆ.

debate about Lingayatha seprate religion

ಸನಾತನದ ಶೈವ ಪ್ರಭೆದಗಳಾಗಿದ್ದ ಕಾಪಲಿಕ ಕಾಳಮುಖಿ ಲಕುಲಿಶ ಹೀಗೆ ಬೇರೆ ಬೇರೆ ಪ್ರಬೇಧಗಳಿದ್ದವು. ಉತ್ತರಾಗಮದ ಭಾಗವಾಗಿ 18 ಮತ್ತು 19 ನೆ ಶತಮಾನದಲ್ಲಿ ಆಂಧ್ರ ಮೂಲದಿಂದ ಬಂದ ವೀರಶೈವವೆಂಬ 60 ವೃತಗಳ ಸಂಪ್ರದಾಯ ಮುಂದೆ ಒಂದು ಪುರೋಹಿತ ಮಾಹೇಶ್ವರ ವರ್ಗವನ್ನು ನಿರ್ಮಿಸುವ ಕುತಂತ್ರದಿಂದ. ಬಸವ ಧರ್ಮಿಯರ ಮೇಲೆ ವೀರಶೈವ ತನ್ನ ಸವಾರಿ ನಡೆಸಿತು. ಬಸವ ಧರ್ಮ ಇದು ಸ್ವತಂತ್ರ ಧರ್ಮ ಅಪ್ಪ ಬಸವಣ್ಣನವರು ಕೊಟ್ಟ ಗುರು ಲಿಂಗ ಜಂಗಮ-ಕಾಯಕ ದಾಸೋಹ ತತ್ವಗಳ ಮೂಲಕ ಸರ್ವರೊಳಗೆ ಸಮಾನತೆ ತಂದ ಶ್ರೇಷ್ಠ ಧರ್ಮ.

ಕಲ್ಲಿನಿಂದ ಮನುಜ ಹುಟ್ಟ ಬುಹುದೇ? ಹುಟ್ಟಿದರೂ ಅವರು(ಲಿಂಗೋದ್ಭವಿಗಳು) ಮಂಗೋಲಿಯನ್, ಕರೆಬಿಯಾನ್ , ಆಫ್ರಿಕನ್ ನಿಗ್ರೋ ಪಿಗ್ಮಿ ಹೀಗೆ ಯಾವ ಜನಾಂಗವನ್ನು ಹೋಲುತ್ತಿದ್ದರು?. ಇದೊಂದು ಕಾಲ್ಪನಿಕ ಅವೈಜ್ಞಾನಿಕ ಕಟ್ಟು ಕಥೆ.

ಕಾಂಗ್ರೆಸಿನ ಸೋಲಿಗೆ ಹಲವು ಕಾರಣ, ನಾಯಕರ ಆತ್ಮವಿಮರ್ಶೆಕಾಂಗ್ರೆಸಿನ ಸೋಲಿಗೆ ಹಲವು ಕಾರಣ, ನಾಯಕರ ಆತ್ಮವಿಮರ್ಶೆ

ವಚನ ಸಾಹಿತ್ಯಗಳು ಸಂಕಲನಕಾರ ಸಮಯದಲ್ಲಿ ಬೇರೆ ಬೇರೆ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಪ್ರಕ್ಷಿಪತತೆಯಾಗಿದ್ದು. ಪರ್ಯಾಯ ಪದಗಳ ಸೇರಿಕೆ, ಸಂದರ್ಭ ಸಂಗತಿಗಳನ್ನು ಮುಂದು ಮಾಡಿ ಕೆಲವು ಪದಗಳ ಕೂಡಿಸುವ, ಪಾಠಾ೦ತರ ಸಮಯದಲ್ಲಿ ತಿಳಿದೊ ತಿಳಿಯದೋ ಮಾಡಿದ ವಾಕ್ಯ ಸಂಯೋಜನೆ. ವೈಭವಿಸುವ ಉದ್ಧೇಶದಿಂದ ಒಮ್ಮೊಮ್ಮೆ ವಚನಗಳಲ್ಲಿ ಇಂತಹ ಪ್ರಕ್ಷಿಪತತೆ ಕಂಡು ಬಂದಿದೆ. (12ನೆ ಶತಮಾನದ ನಂತರ 15 ನೆ ಶತಮಾನದಲ್ಲಿ ಸಂಕಲನ ಪರಿಷ್ಕರಣೆ ನಡೆಯಿತು)

debate about Lingayatha seprate religion

ಎಡೆಯೂರ ಶ್ರೀ ಸಿದ್ಧಲಿಂಗ ಯತಿಗಳು ಸುಮಾರು ಮೂರು ಶತಮಾನದವರೆಗೆ ಭೂಗರ್ಭ ಸೇರಿದ ವಚನಗಳ ಹೆಕ್ಕಿ ಅವಗಳ ಪಾಠಾಂತರ ಮತ್ತು ಪರಿಷ್ಕರಣೆ ಕಾರ್ಯ ನಡೆಸಿದರು. ಈ ಕಾಲವನ್ನು ವಚನಗಳ ಜೀವನ್ಮುಕ್ತಿಯ ಕಾಲವೆಂದೆ ಹೇಳಬಹುದು.
ನಂತರ 16 ನೆ ಶತಮಾನದಲ್ಲಿ ಉದ್ದೇಶ ಪೂರಿತ ಪ್ರಕ್ಷಿಪ್ತತೆ ನಡೆಯಿತು. ಅಂದಿನ ಕವಿಗಳು ಆಚಾರ್ಯ ಮೂಲದಿಂದ ಬಂದವರಾಗಿದ್ದರಿಂದ ಸಂಸ್ಕೃತ ಮತ್ತು ವೀರಶೈವ ಪದಗಳನ್ನು ಅನಗತ್ಯವಾಗಿ ವಚನಗಳಲ್ಲಿ ಸೇರ್ಪಡಿಸಲಾಯಿತು. ಆರಾಧ್ಯ ಪರಂಪರೆಯವರು ಶರಣ ಸಾಹಿತ್ಯವನ್ನು ತಿರುಚಲು ವಿರೂಪಗೊಳಿಸಲು ಯತ್ನಿಸಿದ್ದಾರೆ. ಅಚ್ಚ ಕನ್ನಡದಲ್ಲಿಯೇ ಸಾಹಿತ್ಯ ರಚಿಸಿದ ಶರಣರಿಗೆ ಸಂಸ್ಕೃತದ ವ್ಯಾಮೊಹವೆಕೆ? ಇದೊಂದು ಅಪ್ಪಟ ಸುಳ್ಳು ಮತ್ತು ಕೃತ್ರಿಮತೆ.

debate about Lingayatha seprate religion

ವೀರಶೈವ ಧರ್ಮವೆನ್ನುವವರಿಗೆ ನನ್ನ ಪ್ರಶ್ನೆ?

ಆಂಧ್ರದ ಕೊಲ್ಲಿಪಾಕಿನಲ್ಲಿ ಉಧ್ಭವವಾದ ರೇಣುಕಾಚಾರ್ಯರು ಮತ್ತು ಇತರ ಶಿವಾಚಾರ್ಯರು ಏಕ ಕಾಲಕ್ಕೆ ಕೇದಾರ ಶ್ರೀಶೈಲ ಉಜ್ಜೈನಿ ಮತ್ತು ಕಾಶಿಯ ಶ್ರೀಗಳು ಜನ್ಮ ತಾಳಿದರೆ.? ಅಥವಾ ಒಬ್ಬೊಬ್ಬರಾಗಿ ಕಲ್ಲು ಸೀಳಿ ಹುಟ್ಟಿ ಬಂದರೆ?. ವೀರಶೈವ ವೃತ -ಅದಕ್ಕೆ ಧರ್ಮ ಗುರುವಿಲ್ಲ ಕಾಲ್ಪನಿಕ ಕಟ್ಟು ಕಥೆ. ಅದಕ್ಕೆ ಧರ್ಮ ಗ್ರಂಥವಿಲ್ಲ, ಕಾರಣ ಸಿದ್ಧಾಂತ ಶಿಖಾಮಣಿ ಇದು ಬಸವೊತ್ತರದ ಕೃತಿಯೆಂದು ಸಿದ್ದವಾಗಿದೆ ಅಷ್ಟೆ ಏಕೆ ಆ ಕೃತಿಯ ಮೊದಲೆನೆಯ ಪುಟದಲ್ಲಿ ಓಂ ಶ್ರೀ ಗುರು ಬಸವಲಿಂಗಾಯನಮ: ಎಂದು ದಾಖಲಿಸಲಾಗಿದೆ. ಬಹುದೇವೊಪಾಸನೆಯನ್ನು ಆಚರಿಸುವ ವೀರಶೈವ ಹೇಗೆ ಧರ್ಮವಾಗುತ್ತದೆ. ವೀರಶೈವ ವೃತಕ್ಕೆ ಧರ್ಮ ಸೂತ್ರಗಳಿಲ್ಲ. 15 -16 ನೆ ಶತಮಾನದಲ್ಲಿ ವೀರಶೈವ ಪದ ಬಳಕೆಯಲ್ಲಿ ಬಂತು. 1886 ರ ವೇಳೆಗೆ ಲಿಂಗಾಯತ ಮುಖಂಡರನ್ನು ನಂಬಿಸಿ ಕೃತಕ ವೀರಶೈವ ಸಾಹಿತ್ಯ ಹುಟ್ಟ ಹಾಕಿದರು. ಅವರಲ್ಲಿ....
1 ) ಹುಬ್ಬಳ್ಳಿಯ ಚೆನ್ನವೀರಸ್ವಾಮಿಗಳು.
2) ಬಾರ್ಸಿಯ ಪ್ರಭುಲಿಂಗಯ್ಯನವರು
3)ಸೀತಾರಾಮ ಶಾಸ್ತ್ರಿ ರೆತ್ರೆಕರ ( ಬರ್ಸಿ) ಸಂಸ್ಕೃತ ಪಂಡಿತ.
4 ) ದಡ್ಡಿರಗಪ್ಪರಗಶೆಟ್ಟಿ
5 ) ಯಜಮಾನ ವೀರಸಂಗಪ್ಪನವರು.

debate about Lingayatha seprate religion

ಇವರು ಕೃತ್ರಿಮವಾಗಿ ರಚಿಸಿದ ಸಾಹಿತ್ಯವನ್ನು ಚಿಕ್ಕಬಳ್ಳಾಪುರದ 1) ವಿರುಪಾಕ್ಷ ಶಾಸ್ತ್ರಿಗಳು 2 ) ರಾಯಚೂರು ಕೃಷ್ನಾಮಾಚಾರ 3 ) ಫಕೀರ ಪರ್ವತ ಬಸವಲಿಂಗ ಶಿವ ಬಸವ ಶಾಸ್ತ್ರಿಗಳು. 4) ಕರವೇ ವೆಂಕಟ ರಂಗೋ ಇವರ ಸಹಾಯದಿಂದ ರಚಿಸಿ ಪರಿಶೀಲಿಸಿ ತಾವು ಲಿಂಗಿ ಬ್ರಾಹ್ಮಣ ಎಂದು ಸಾಧಿಸ ಹೊರಟಿದ್ದು ಮೊದಲನೆಯ ತಪ್ಪು. ಇದನ್ನು 1886 ರಲ್ಲಿ ಸೆಪ್ಟೆಂಬರ್11 ರಿಂದ 25 ವರೆಗೆ ಬೆಳಗಾವಿಯ ಶಿವಾನಂದ ಥೀಯೇಟರ್ ಬಳಿಯ ಶಿವಾನಂದ ಪ್ರಿ೦ಟಿಂಗ್ ಪ್ರೆಸ್ಸಿನಲ್ಲಿ ಪ್ರಕಟಗೊಳಿಸಿದ್ದಾರೆ. ವೀರಶೈವ ನಿರ್ಣಯ ಚಿಂತಾಮಣಿ "ಇದರಲ್ಲಿ ಈ ವಿಷಯವನ್ನು ಕಾಣ ಬಹುದು.

ಪರಳಿ ವೈಜನಾಥ ದೇವಸ್ಥಾನಕ್ಕೆ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಅಂದಿನ ಹಿರಿಯ ಮುಖಂಡರಾದ ಶ್ರೀ ವಾರದ ಮಲ್ಲಪ್ಪನವರಿಂದ ಸಿದ್ದರಾಮಪ್ಪ ಪಾವಟೆ ಅವರ ಕಾನೂನಿನ ನೆರವಿಂದ ಲಿಂಗಾಯತರು" ಲಿಂಗಿ ಬ್ರಾಹ್ಮಣ" ಎಂದು ವಾದಿಸಿ ತಾವು ಬ್ರಾಹ್ಮಣ ರಿಗೆ ಸಮಾನರು ಶೂದ್ರರಲ್ಲ ಅಂತಾ ಸಾಧಿಸಿದರು,ಇದು ಲಿಂಗಾಯತ ಧರ್ಮಕ್ಕೆ ಬಿದ್ದ ಇನ್ನೊಂದು ದೊಡ್ಡ ಪೆಟ್ಟು.

1904 ರಲ್ಲಿ ಹಾನಗಲ್ಲ ಕುಮಾರ ಸ್ವಾಮೀಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಸ್ಥಾಪಿಸಿದ್ಧು ಲಿಂಗಾಯತ ಧರ್ಮಕ್ಕೆ ಕೊನೆಯ ಏಟು . 1910 ರಲ್ಲಿ ಹಾನಗಲ್ಲ ಕುಮಾರ ಸ್ವಾಮೀಗಳು ಬಾದಾಮಿಯ ಬಳಿ ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಮತ್ತು ಸಂಸ್ಕೃತ ಶಾಲೆ ಬಸವ ಧರ್ಮೀಯರಿಗೆ ಮಾಡಿದ ಘೋರ ಅನ್ಯಾಯ . ವೀರಶೈವರಿಗೆ ಅರವತ್ತು ಆಚರಣೆಗಳಿವೆ.ಅವು ಯಾವು ಬಸವ ತತ್ವಕ್ಕೆ ಸರಿ ಬಾರವು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನೆಂದು ಸಮಕಾಲೀನ ವಚನಕಾರರು ನಂತರದ ಕವಿಗಳು ಮತ್ತು ಜನಪದ ಕವಿಗಳು ಅನೇಕ ಸಾಧಕರು ಜನ ಗಣತಿಯ ಸೆನ್ಸಸ್ ಹಾಗು ಕೋರ್ಟ್ ಆದೇಶಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಹೇಳುವಲ್ಲಿ ಸಹಾಯಕವಾಗಿವೆ.

debate about Lingayatha seprate religion

ವೀರಶೈವರ ಅರವತ್ತು ಆಚರಣೆಗಳಲ್ಲಿ, ತಲೆ ಕೂದಲು ಸುಟ್ಟು ಕೊಳ್ಳುವುದು, ಬೆಂಕಿ ಹಾಯುವುದು, ಮುಳ್ಳಾವುಗೆಯ ಮೇಲೆ ನಿಲ್ಲುವುದು, ಅಸ್ತ್ರಗಳನ್ನು ಮೈಗೆ ಚುಚ್ಚಿ ಕೊಳ್ಳುವುದು. ಹೀಗೆ ಹಿ೦ಸೆಯನ್ನು ಆಚರಿಸುವ ಒಂದು ಉಪಕ್ರಮ ಮಾತ್ರ. ಅವರಲ್ಲಿ ಕೆಲವರು ಪೌರೋಹಿತ್ಯರಿಗೆ ನೆರವಾಗುವ ಕಾಯಕ ಮಾಡುತ್ತಿದ್ದರು.

ಅನೇಕ ಖೊಟ್ಟಿ ದಾಖಲೆಗಳನ್ನು ಮುಂದು ಮಾಡಿ ಮುಂದೆ ಹಾನಗಲ ಕುಮಾರ ಸ್ವಾಮೀಗಳು ಅವರು ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿ ಗಳಿಗೆ ವೀರಶೈವ ಚರಿತ್ರೆ ಬರೆಯಲು ಆಜ್ಞಾಪಿಸಿದರು. ಬ್ಯಾಡಗಿ ವಿರಕ್ತ ಮಠದ ಶ್ರೀ ಮನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ವೀರಶೈವ ಪಂಚಾಚಾರ್ಯರ ಚರಿತ್ರೆ ಎಂಬ ಕೃತಿಯನ್ನು 1958 ರಲ್ಲಿ ರಚಿಸಿದ್ದಾರೆ.ಅದರಲ್ಲಿ ಅವರು ಸ್ಪಷ್ಟವಾಗಿ ರೇಣುಕ ಒಂದು ಕಲ್ಪನೆ ಆದರೆ ರೇವುಣಸಿದ್ಧರೆ -ರೇಣುಕರು ಎಂದು ವಾದಿಸಿದ್ದಾರೆ. ಪುಟ 157 -159.

ಮುಂದೆ ಕಾಶಿನಾಥ ಶಾಸ್ತ್ರಿಗಳಿಗೆ ಚಿತ್ರದುರ್ಗ ಮಠದ ಪೀಠ ತಪ್ಪುವುದೋ ಅಂದೇ ಅವರು ಗುರು ವಿರಕ್ತ ಪಂಚ ಪೀಠ ವಿವಾದ ಹುಟ್ಟು ಹಾಕುತ್ತಾರೆ. ಈ ಹಿಂದೆ ವ್ಯವಸ್ಥಿತವಾಗಿ ಕ್ರೊಡಿಕರಿಸಿದ ಕೊಟ್ಟಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು. ಮೊಂಡುವಾದವನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

1872ರಿಂದ -1989 ವರೆಗಿನ ಎಲ್ಲ ಗೆಜೆಟ್ಟಗಳಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ. ಕೆಲವು ಕಡೆ ವೀರಶೈವ ಅಂತಾ ದಾಖಲಾದರೂ ಸಹಿತ ಅದು ಲಿಂಗಾಯತ ಧರ್ಮದ ಒಂದು ಒಳ ಪಂಗಡ ಎಂದು ಹೇಳಲಾಗಿದೆ. ಇನು ಪಂಚಪೀಠದವರೊಬ್ಬಲಾದ ಶ್ರೀಶೈಲ ಪೀಠದ ಆದಿ ಜಗದ್ಗುರು ಮಲ್ಲಿಕಾರ್ಜುನ ಪಂಡಿತರು ಬಸವಣ್ಣನವರನ್ನು ಭೇಟಿ ಆಗಲು ಕಲ್ಯಾಣಕ್ಕೆ ಬರುತಿರಲು ಬಸವಣ್ಣನವರು ಐಕ್ಯವಾದ ಸುದ್ಧಿ ಕೇಳಿ ಮಲ್ಲಿಕಾರ್ಜುನ ಪಂಡಿತರು ಐಕ್ಯವಾದ ಘಟನೆ ತೆಲುಗು ಶಾಸನ 1190 ರಲ್ಲಿ ದಾಖಲಾಗಿದೆ. ಮಲ್ಲಿಕಾರ್ಜುನ ಪಂಡಿತರು ತಮ್ಮ ವಚನಗಳಲ್ಲಿ ಬಸವಣ್ಣ ತಮ್ಮ ಆರಾಧ್ಯ ಧೈವವೆಂದು ಹೊಗಳಿದ್ದಾರೆ.

ಪಾಶ್ಚಿಮಾತ್ಯ ಸಂಶೋಧಕರಾದ ಎಂತ್ಹೊವಾನ್, ಕ್ಯಾಂಪ ಬೆಲ್, ಆರ್.ಸಿ.ಕಾರ್. ಅರ್ಥರ್ ಮೈಲ್ಸ್ , ಥರ್ಸ್ಟನ್ ಮುಂತಾದ ನೂರಾರು ಜನರು ಬಸವಣ್ಣನೆ ಲಿಂಗಾಯತ ಧರ್ಮದ ಸ್ಥಾಪಕ ಎಂದು ಸ್ಪಷ್ಟ ಪಡಿಸುತ್ತಾರೆ. 1966ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಶ್ರೀ ಪಿ.ಬಿ. ಗಜೇಂದ್ರಗಡಕರ ಅವರು *Buddhism Is started by Buddha Jainisam started by Mahaveera Basavanna became The founder of Lingayat Religion* ಎಂಬ ಸ್ಪಷ್ಟವಾದ ಅಭಿಮತಕ್ಕೆ ಬಂದಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಕೆಲ ಅರೆ ಬರೆ ಜ್ಞಾನಿಗಳು ಸ್ವಾಮೀಗಳು ತಾವೇ ವೀರಶೈವ ಮತ ಸ್ಥಾಪಕರೆಂದು ಅದು ಬಸವ ಪೂರ್ವ ಧರ್ಮವೆಂದು ಬೊಗಳೆ ಬಿಡುತ್ತಾರೆ.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ವಚನ ಸಂಕಲನ ಪರಿಸ್ಕರಣೆಯಲ್ಲಿ ಕೆಲ ಜಾತಿವಾದಿ ಮೂಲಭೂತ ವಾದಿಗಳು ಅನಗತ್ಯ ಖೊಟ್ಟಿ ವೀರಶೈವ ಪದಗಳನ್ನು ಸೇರಿಸಿ ಕೊಟ್ಟರು ಇದರ ಅರಿವಿಲ್ಲದ ಮುಗ್ಧ ಡಾ ಹಳಕಟ್ಟಿ ಅವರಿಂದಾ ಕೆಲ ಅನೇಕ ತಪ್ಪು ಪದಗಳ ಜೋಡಣೆಯಾದವು ಅವುಗಳಲ್ಲಿ ಸಂಸ್ಕೃತ ಪದ ಮತ್ತು ವೀರಶೈವ ಪದಗಳು ಇವೆ.

ವೀರಶೈವ ಆಚರಣೆಯು ವೇದ ಶಾಸ್ತ್ರ ಆಗಮ ಮಾನ್ಯತೆಯಂತೆ ನಡೆಯುತ್ತವೆ ಅಲ್ಲಿ ಹವನ ಹೋಮ ಯಜ್ಞಗಳ ಆಚರಣೆ ಇವೆ, ವೀರಶೈವವು ಪುನರ್ಜನ್ಮ ಕರ್ಮ ಸಿದ್ಧಾಂತವನ್ನು ಒಪ್ಪುತ್ತದೆ. ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರಗಳನ್ನು ಧಿಕ್ಕರಿಸುತ್ತದೆ. ವೀರಶೈವ ಆಚರಣೆಯಲ್ಲಿ ನಂದಿ ಗಣಪತಿ ವೀರಭದ್ರ ಪರಶಿವ ಪಾರ್ವತಿಯ ಪೂಜೆಗೆ ಅವಕಾಶವಿದೆ. ಲಿಂಗಾಯತ ಧರ್ಮವು ಇದನ್ನು ಉಗ್ರವಾಗಿ ವಿರೋಧಿಸುವದಲ್ಲದೆ ಗುಡಿ ಗುಂಡಾರ ಸಂಸ್ಕೃತಿಯನ್ನು ತಳ್ಳಿ ಹಾಕುತ್ತದೆ. ಲಿಂಗಾಯತ ಧರ್ಮದಲ್ಲಿ ಜೀವಾತ್ಮನೇ ಪರಮಾತ್ಮನು. ನರನೊಳಗೆ ಹರನನ್ನು ಕಾಣುವ ಸೂಕ್ಷ್ಮ ಹಾಗು ಮುಕ್ತ ಧರ್ಮವೇ ಲಿಂಗಾಯತ ಧರ್ಮವು. ಲಿಂಗಾಯತ ಧರ್ಮವು ಸನ್ಯಾಸತ್ವವನ್ನು ಒಪ್ಪುವದಿಲ್ಲ ಸಹಜ ದಾಂಪತ್ಯವನ್ನು ಪುರಸ್ಕರಿಸುತ್ತದೆ. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎನ್ನುವ ಸುಂದರ ಸರಳ ಧರ್ಮದ ಮೂಲ ನೀತಿ ಕಾಯಕ ದಾಸೋಹ ಮತ್ತು ದಯೆ ಪ್ರೀತಿ ಸಮಾನತೆ.

ಇನ್ನು ಲಿಂಗಾಯತರಿಗೆ ಮಠಗಳ ವ್ಯವಸ್ಥೆ ಇಲ್ಲಾ ಭಕ್ತರ ಮನೆಗಳೇ ಮಹಾ ಮನೆಗಳು (ಮಠಗಳು). ಮಠಗಳು ಭಕ್ತರನ್ನು ದಾಸ್ಯತ್ವಕ್ಕೆ ತಳ್ಳುತ್ತವೆ. ಭಕ್ತ ಪ್ರಧಾನ ಧರ್ಮವೇ ಲಿಂಗಾಯತ ಬಸವ ಧರ್ಮ. ಗುಲಾಮಗಿರಿಯ ಧರ್ಮವಲ್ಲ. ವೀರಶೈವ ಒಂದು ಆಚರಣೆ ಹಾಗೂ ವೃತ ಆದರೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ, ಒಂದು ಸ್ವತಂತ್ರ ಅವೈದಿಕ ಹಿಂದುಯೇತರ ಪರಿಪೂರ್ಣ ಧರ್ಮ.

English summary
Dr. Shashikanth Ramadurga debating that Lingayat is separate religion. in other hand Veerashaiva is just a ritual. He ask some important questions who say Veerashaiva is a religion. article contains detail information about Veerashaiva and Lingayat community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X