ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಿಗೇ ಪತ್ರ ಬರೆದಿದ್ದ ಶ್ರೀರಾಮುಲುಗೆ ಇದ್ದದ್ದನ್ನೂ ಉಳಿಸಿಕೊಳ್ಳಲಾಗಲಿಲ್ಲ!

|
Google Oneindia Kannada News

ಒಮ್ಮೆ ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯ ವೇಳೆ ನಡೆಯುತ್ತಿದ್ದ ರಾಜಕೀಯದ ಕಡೆ ಗಮನ ಹರಿಸುವುದಾದರೆ, ಶ್ರೀರಾಮುಲು ಎರಡು ಕಡೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊಣಕಾಲ್ಮೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದ ರಾಮುಲು, ಅಲ್ಲಿ ಭರ್ಜರಿ ಪ್ರಚಾರವನ್ನೂ ಆರಂಭಿಸಿದ್ದರು.

Recommended Video

Sriramulu ಎರಡು ವರುಷ ಇಂದ ಕೇಳ್ತಿದಿನಿ | Oneindia Kannada

ಯಾವಾಗ, ಚಾಮುಂಡೇಶ್ವರಿ ಹೊರತಾಗಿ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಖಾತ್ರಿಯಾಯಿತೋ, ಅವರನ್ನು ಹೇಗಾದರೂ ಮಣಿಸಬೇಕೆಂದು ಜಿದ್ದಿಗೆ ಬಿದ್ದ ಬಿಜೆಪಿಗೆ ಸೂಕ್ತ ಅಭ್ಯರ್ಥಿ ಎಂದು ಕಂಡಿದ್ದು ಶ್ರೀರಾಮುಲು.

ಖಾತೆ ಬದಲಾವಣೆ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಮಹತ್ವದ ಹೇಳಿಕೆ!ಖಾತೆ ಬದಲಾವಣೆ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಮಹತ್ವದ ಹೇಳಿಕೆ!

ಯಾವುದೇ ಕಾರಣಕ್ಕೂ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎನ್ನುವ ಹಠಕ್ಕೆ ಬಿದ್ದಿದ್ದ ಶ್ರೀರಾಮುಲು ಅನ್ನು ಹಾಗೂಹೀಗೂ ಒಪ್ಪಿಸಿ, ಬಾದಾಮಿಯಿಂದಲೂ ಬಿಜೆಪಿ ಕಣಕ್ಕಿಳಿಸಿತ್ತು. ಪಕ್ಷದ ತೀರ್ಮಾನಕ್ಕೆ ಬದ್ದರಾದ ಶ್ರೀರಾಮುಲುಗೆ ಅಂದು ಬಾದಾಮಿಯಿಂದ ಸ್ಪರ್ಧಿಸಲು ಆಮಿಷವೊಂದನ್ನು ಒಡ್ಡಲಾಗಿತ್ತು.

ಅದು ಬಿಜೆಪಿ ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಹುದ್ದೆ. ಆದರೆ, ಸ್ವಲ್ಪದರಲ್ಲೇ ಬಹುಮತದಿಂದ ದೂರವಾದ ಬಿಜೆಪಿ, ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ನಂತರ, ಆಪರೇಶನ್ ಕಮಲ, ಸಮ್ಮಿಶ್ರ ಸರಕಾರದ ಪತನ, ಯಡಿಯೂರಪ್ಪ ಸಿಎಂ. ಆದರೆ, ಶ್ರೀರಾಮುಲು ಡಿಸಿಎಂ ಆದರಾ?

ಖಾತೆ ಬದಲಾವಣೆ: ಹೈಕಮಾಂಡ್‌ಗೆ ಶ್ರೀರಾಮುಲು ಮಹತ್ವದ ಪತ್ರ?ಖಾತೆ ಬದಲಾವಣೆ: ಹೈಕಮಾಂಡ್‌ಗೆ ಶ್ರೀರಾಮುಲು ಮಹತ್ವದ ಪತ್ರ?

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ, ತನಗೆ, ಅಂದು ಕೊಟ್ಟ ಮಾತಿನಂತೆ ಉಪಮುಖ್ಯಮಂತ್ರಿ ಹುದ್ದೆ ಸಿಗುತ್ತೆ ಎಂದು ಶ್ರೀರಾಮುಲು ನಂಬಿದ್ದರು. ಆದರೆ, ಡಿಸಿಎಂ ಆಗಿದ್ದು ಬೇರೆ ಮೂವರು. ಯಾವಾಗ, ಈ ಹುದ್ದೆ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಯಿತೋ ಆಯಕಟ್ಟಿನ ಸಚಿವ ಸ್ಥಾನವನ್ನು ಶ್ರೀರಾಮುಲು ಬಯಸಿದ್ದರು. ಆದರೆ, ಆರೋಗ್ಯ ಖಾತೆ ಸಿಕ್ಕಾಗ, ಒಲ್ಲದ ಮನಸ್ಸಿನಿಂದಲೇ ಆ ಹುದ್ದೆಯನ್ನು ಸ್ವೀಕರಿಸಿದ್ದರು.

ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲು

ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲು

ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲು, ತಮ್ಮ ಆಕಾಂಕ್ಷೆಯನ್ನು ಸಮುದಾಯದ ಪೀಠಾಧಿಪತಿಗಳು, ಗಣ್ಯರ ಮೂಲಕ ವ್ಯಕ್ತ ಪಡಿಸುತ್ತಲೇ ಇದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗಿರಲಿಲ್ಲ. ಆವೇಳೆ, ಕೊರೊನಾ ಹಾವಳಿ ಆರಂಭವಾದ ನಂತರ, ಆರೋಗ್ಯ ಇಲಾಖೆಯ ಮೇಲೆ ಗುರುತರ ಜವಾಬ್ದಾರಿ ಬಿತ್ತು. ಅದನ್ನು ಆರಂಭದಲ್ಲಿ ಲವಲವಿಕೆಯಿಂದಲೇ ಶ್ರೀರಾಮುಲು ನಿಭಾಯಿಸಿಕೊಂಡು ಬರುತ್ತಿದ್ದರೂ, ಕೊರೊನಾ ನಿಯಂತ್ರಣಕ್ಕೆ ಬರಲಿಲ್ಲ.

ಶ್ರೀರಾಮುಲು ಇನ್ನಷ್ಟು ಬೇಸರಕ್ಕೆ

ಶ್ರೀರಾಮುಲು ಇನ್ನಷ್ಟು ಬೇಸರಕ್ಕೆ

ಆ ವೇಳೆ, ಕೊರೊನಾ ಜವಾಬ್ದಾರಿಯನ್ನು ಸಿಎಂ ನಾಲ್ಕು ಜನರಿಗೆ ಹಂಚಿದ್ದರು. ಇದು ಶ್ರೀರಾಮುಲು ಅವರನ್ನು ಇನ್ನಷ್ಟು ಬೇಸರಕ್ಕೆ ದೂಡಿದ್ದು ಒಂದೆ ಕಡೆಯಾದರೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ನಡುವೆ ತಾಳ ತಪ್ಪಲು ಕಾರಣವಾಯಿತು. ಡಾ.ಸುಧಾಕರ್ ಜೊತೆ ಮುಸುಕಿನ ಗುದ್ದಾಟಕ್ಕೂ ಕಾರಣವಾಯಿತು.

ಆರೋಗ್ಯ ಇಲಾಖೆಯ ಜಬಾಬ್ದಾರಿ ಡಾ.ಸುಧಾಕರ್ ಗೆ

ಆರೋಗ್ಯ ಇಲಾಖೆಯ ಜಬಾಬ್ದಾರಿ ಡಾ.ಸುಧಾಕರ್ ಗೆ

ಕೊರೊನಾ ನಿಯಂತ್ರಣ ಬಾರದೇ ಇದ್ದಾಗ, ಆರೋಗ್ಯ ಇಲಾಖೆಯ ಜಬಾಬ್ದಾರಿಯನ್ನು ಸಿಎಂ ಸಂಪೂರ್ಣವಾಗಿ ಡಾ.ಸುಧಾಕರ್ ಗೆ ವಹಿಸಿದರು. ಇದರಿಂದ ಮತ್ತಷ್ಟು ಕುಗ್ಗಿದ ಶ್ರೀರಾಮುಲು, ತಮ್ಮ ನೋವನ್ನು ಯಡಿಯೂರಪ್ಪನವರ ಬಳಿ ತೋಡಿಕೊಂಡರು. ಆದರೆ, ಶ್ರೀರಾಮುಲು ಅವರನ್ನು ಸಮಾಧಾನ ಪಡಿಸಿದ ಯಡಿಯೂರಪ್ಪ, ಮತ್ತೊಂದು ದೊಡ್ಡ ಇಲಾಖೆ ಸಮಾಜ ಕಲ್ಯಾಣವನ್ನು ವಹಿಸಿದ್ದಾರೆ. ಅಲ್ಲಿಗೆ, ಡಿಸಿಎಂ ಹುದ್ದೆ ಅತ್ತಗಿರಲಿ, ಇದ್ದ ಹುದ್ದೆಯನ್ನೂ ಶ್ರೀರಾಮುಲುಗೆ ಉಳಿಸಿಕೊಳ್ಲಲಾಗಲಿಲ್ಲ. ಅಂದ ಹಾಗೇ, ಶ್ರೀರಾಮುಲು ದೇವರಿಗೇ ಕೆಲವು ದಿನಗಳ ಹಿಂದೆ ಪತ್ರ ಬರೆದಿದ್ದದ್ದು ದೊಡ್ಡ ಸುದ್ದಿಯಾಗಿತ್ತು.

English summary
DCM Post Aspirant B Sriramulu Moved To Other Department Is It A Setback,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X