ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಉಸ್ತುವಾರಿ ಪಟ್ಟ: ಯಾರಿಗೆ ಯಾವ ಜಿಲ್ಲೆ?

By Nayana
|
Google Oneindia Kannada News

Recommended Video

ಕರ್ನಾಟಕ ಜಿಲ್ಲಾ ಉಸ್ತುವಾರಿ ಪಟ್ಟ ಯಾರಿಗೆ ಯಾವ ಜಿಲ್ಲೆ?

ಬೆಂಗಳೂರು, ಜೂನ್ 14: ಕಾಂಗ್ರೆಸ್‌-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು ತಿಂಗಳ ಬಳಿಕ ಸಚಿವ ಸಂಪುಟದ ಸದಸ್ಯರುಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ.

ಗುರುವಾರ ಸಂಜೆ ನಡೆಯುವ ಸಮನ್ವಯ ಸಮಿತಿ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಹಂಚಿಕೆ ಪಟ್ಟಿ ಹೊರಬೀಳಲಿದ್ದು, ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಸ್ವಂತ ಜಿಲ್ಲೆ ಹಾಸನ ಜಿಲ್ಲೆಯ ಉಸ್ತುವಾರಿ ದಕ್ಕಲಿದೆ.

ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ

ಮತ್ತೊಂದೆಡೆ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ಗೆ ರಾಮನಗರ ಜಿಲ್ಎ ದೊರಕಲಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಯು.ಟಿ. ಖಾದರ್ ಜಿಲ್ಲೆ ಉಸ್ತುವಾರಿ ಸಚಿವರಾಗಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

DCM may get Tumkur incharge George will be Bengaluru incharge

ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದ್ದು ಈ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಸಚಿವರ ಹೆಸರು ಜಿಲ್ಲೆ
ಡಾ. ಜಿ. ಪರಮೇಶ್ವರ್ ತುಮಕೂರು
ಡಿ.ಕೆ. ಶಿವಕುಮಾರ್‌ ರಾಮನಗರ
ಎಚ್‌.ಡಿ. ರೇವಣ್ಣ ಹಾಸನ
ಯು.ಟಿ. ಖಾದರ್ ಮಂಗಳೂರು
ಆರ್.ವಿ. ದೇಶಪಾಂಡೆ ಉತ್ತರಕನ್ನಡ
ಜಿ.ಟಿ. ದೇವೇಗೌಡ ಮೈಸೂರು
ಡಿ.ಸಿ. ತಮ್ಮಣ್ಣ ಮಂಡ್ಯ
ಪುಟ್ಟರಂಗಶೆಟ್ಟಿ ಚಾಮರಾಜನಗರ
ಎನ್‌.ಎಚ್‌.ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ
ಕೃಷ್ಣಬೈರೇಗೌಡ ಕೋಲಾರ
ಕೆ.ಜೆ. ಜಾರ್ಜ್ ಬೆಂಗಳೂರು ನಗರ
ರಮೇಶ್‌ ಜಾರಕಿಹೊಳಿ ಬೆಳಗಾವಿ
ಪ್ರಿಯಾಂಕ್ ಖರ್ಗೆ ಕಲಬುರಗಿ
ಶಿವಾನಂದ್ ಪಾಟೀಲ ವಿಜಯಪುರ
ಬಂಡೆಪ್ಪ ಕಾಶಂಪುರ್ ಬೀದರ್
ರಾಜಶೇಖರ ಪಾಟೀಲ ಬಾಗಲಕೋಟೆ
ಆರ್‌.ಶಂಕರ್ ಹಾವೇರಿ
ಜಯಮಾಲಾ ಶಿವಮೊಗ್ಗ
ಎಂ.ಸಿ. ಮನಗೂಳಿ ಕೊಪ್ಪಳ
ವೆಂಕಟರಾವ್ ನಾಡಗೌಡ ರಾಯಚೂರು
ಎಸ್‌.ಆರ್‌. ಶ್ರೀನಿವಾಸ್ ಚಿಕ್ಕಮಗಳೂರು

English summary
After a month of Government formation JDS and Congress district incharge will be alloted soon, Deputy chief minister Dr. G Parameshwar may get Tumkur incharge, Previous Bengaluru development KJ George will be Bengaluru incharge again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X