ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ್ತಿ ಮೀಸಲಾತಿ ಸುರಕ್ಷತಾ ಕಾಯ್ದೆ ಯಾವುದೇ ಕ್ಷಣ ಜಾರಿ: ಡಿಸಿಎಂ

|
Google Oneindia Kannada News

ಬೆಂಗಳೂರು, ಸೆ.24: ರಾಜ್ಯದಲ್ಲಿ ಬಡ್ತಿ ಮೀಸಲಾತಿಯನ್ನು ರಕ್ಷಿಸಿಕೊಳ್ಳಲು ರೂಪಿಸಲಾದ ಬಡ್ತಿ ಮೀಸಲಾತಿ ಸುರಕ್ಷತಾ ಕಾಯ್ದೆ ಯಾವುದೇ ಕ್ಷಣದಲ್ಲಿ ಜಾರಿಗೆ ಬರಬಹುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬ ಬೇಸರ ನನಗೂ ಇದೆ, ಸಂಪುಟ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಲಾಗಿದೆ. ಕಾಯ್ದೆ ಜಾರಿಗಿರುವ ಕಾನೂನು ತೊಡಕುಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ.

ಬಡ್ತಿ ಮೀಸಲಾತಿ ವಿಳಂಬಕ್ಕೆ ಸಮ್ಮಿಶ್ರ ಸರ್ಕಾರ ಹೊಣೆ: ವೀರಯ್ಯ ಆರೋಪ ಬಡ್ತಿ ಮೀಸಲಾತಿ ವಿಳಂಬಕ್ಕೆ ಸಮ್ಮಿಶ್ರ ಸರ್ಕಾರ ಹೊಣೆ: ವೀರಯ್ಯ ಆರೋಪ

ಎಸ್‌ಸಿ ಎಸ್‌ಟಿ ನೌಕರರಿಗೆ ಆಗಿರುವ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ, ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಗೀಕಾರ ಸಿಕ್ಕಿದೆ ಹಾಗಾಗಿ ಇವತ್ತೇ ಇಲ್ಲವೇ ನಾಳೆ‌ಯೇ ಜಾರಿಯಾಗಬಹುದು ಎಂದು ಭರವಸೆ ನೀಡಿದರು.

ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಇಲ್ಲ

ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಇಲ್ಲ

ಅನುದಾನ ಬಿಡುಗಡೆ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರ ಕುರಿತು ಮಾತನಾಡಿದ ಅವರು, ಕ್ಷೇತ್ರದ ತಾರತಮ್ಯದ ಬಗ್ಗೆ ಅಸಮಾಧನ ಇರಬಹುದು. ಆದರೆ ಯಾವ ಶಾಸಕರಿಗೂ ಅನುದಾನ ಬಿಡುಗಡೆಗೆ ತಾರತಮ್ಯ ಮಾಡುತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳು ಕೂಡ ತಾರತಮ್ಯ ಮಾಡಿಲ್ಲ. ಶಾಸಕರು ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ. ಅದನ್ನು ನಾವು ಬಗೆಹರಿಸುತ್ತೇವೆ ಎಂದು ಹೇಳಿದರು.

ಬಡ್ತಿ ಮೀಸಲಾತಿ: ಮತ್ತೆ 3 ತಿಂಗಳ ಸಮಯ ಕೇಳಿದ ಸರ್ಕಾರ ಬಡ್ತಿ ಮೀಸಲಾತಿ: ಮತ್ತೆ 3 ತಿಂಗಳ ಸಮಯ ಕೇಳಿದ ಸರ್ಕಾರ

ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಗೀಕಾರ

ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಗೀಕಾರ

ಎಸ್‌ಸಿ ಎಸ್ ಟಿ ಬಡ್ತಿ ಮೀಸಲಾತಿಗೆ ಈಗಾಗಲೇ ರಾಷ್ಟ್ರಪತಿಗಳಿಂದ ಅಂಗೀಕಾರ ದೊರೆತಿದ್ದು ಯಾವುದೇ ಕ್ಷಣದಲ್ಲಿ ಬೇಕಾದರೂ ಕಾಯ್ದೆ ಜಾರಿಗೆಬರುವ ಸಾಧ್ಯತೆ ಇದೆ ಎಂದು ಪರಮೇಶ್ವರ ತಿಳಿಸಿದರು.

ಕಾಂಗ್ರೆಸ್ ಶಾಸಕರು ಚೆನ್ನೈ ದೇವಸ್ಥಾನಕ್ಕೆ ಹೋಗಿದ್ದರು

ಕಾಂಗ್ರೆಸ್ ಶಾಸಕರು ಚೆನ್ನೈ ದೇವಸ್ಥಾನಕ್ಕೆ ಹೋಗಿದ್ದರು

ನಮ್ಮ ಶಾಸಕರು ಚೆನೈಗೆ ದೇವಸ್ಥಾನಕ್ಕೆ ಹೋಗಿದ್ದರು ಅಷ್ಟೇ. ಆಪರೇಷನ್ ಇಲ್ಲಾ, ಏನೂ ಇಲ್ಲ. ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುವುದಕ್ಕೆ ಪ್ರಯತ್ನ ಮಾಡಿದ್ದು ನಿಜ. ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಇರೋಕೆ ಆಗುತ್ತಿಲ್ಲ. ಈ ಹಿಂದೆ ಅಧಿಕಾರದ ರುಚಿ ನೋಡಿದ್ದಾರೆ. ಈಗ ಅಧಿಕಾರಕ್ಕಾಗಿ ಏನೇನೋ ಸರ್ಕಸ್ ಮಾಡುತ್ತಿದ್ದಾರೆ, ಯಡಿಯೂರಪ್ಪ ಮಾಡುವ ಯಾವುದೇ ಪ್ರಯತ್ನ ಯಶಸ್ವಿಯಾಗೋದಿಲ್ಲ.

ಸುಧಾಕರ್ ಗೆ ಅಸಮಾಧಾನ ಇರಬಹುದು

ಸುಧಾಕರ್ ಗೆ ಅಸಮಾಧಾನ ಇರಬಹುದು

ಶಾಸಕ ಸುಧಾಕರ್ ಗೆ ಅಸಮಾಧಾನ ಇರಬಹುದು. ಅವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ನನ್ನ ಜೊತೆಗೂ ಹೇಳಿಕೊಂಡಿದ್ದಾರೆ. ಅದನ್ನು ನಾವು ಬಗೆಹರಿಸ್ತೀವಿ ಯಾವ ಶಾಸಕರು ಕೂಡ ಮಂತ್ರಿ ಸ್ಥಾನಕ್ಕೆ ಬ್ಲಾಕ್ ಮೇಲ್ ತಂತ್ರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

English summary
Deputy chief minister Dr.G.Parameshwara has assured that the act which was signed by president of India will be implemented any time in the state. The new act provides security to provisions of reservation in promotion for scheduled caste and tribe employees in the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X