ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದ ದಾವಣಗೆರೆ ಪೋರ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ ಜುಲೈ 08; ಈ ಪುಟ್ಟ ಬಾಲಕನ ಹೆಸರು‌ ಅರಸು. ಇನ್ನು ಕೇವಲ ಮೂರು ವರ್ಷ ಎರಡು ತಿಂಗಳು.‌ ಇಷ್ಟು ಚಿಕ್ಕವಯಸ್ಸಿಗೆ ಈತನ ಜ್ಞಾಪಕ ಶಕ್ತಿ ಎಷ್ಟಿದೆಯೆಂದರೆ ಏನೇ ಕೇಳಿದರೂ ಪಟಪಟ ಅಂತಾ ಹೇಳುತ್ತಾನೆ. ಒಮ್ಮೆ ನೋಡಿದರೆ ಸಾಕು ನೆನಪಿನಲ್ಲಿ ಹಾಗೇ ಇಟ್ಟುಕೊಂಡು ಯಾವಾಗ ಕೇಳಿದರೂ ಹೇಳುವಂತಹ ಶಕ್ತಿ ಹೊಂದಿದ್ದಾನೆ.

ಅರಸು ತಂದೆ ಸಿವಿಲ್ ಇಂಜಿನಿಯರ್ ಪ್ರದೀಪ್ ಹಾಗೂ ತಾಯಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ ಮಮತಾ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈತನ ಜಾಣ್ಮೆಯನ್ನು ಪೋಷಕರು ಗುರುತಿಸಿದ ಪರಿಣಾಮ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಂತ ಸಾಧನೆ ಮಾಡಿದ್ದಾನೆ.

ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ

ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಬೇಕಷ್ಟೇ. ದಾವಣಗೆರೆಯ ಶಿವಕುಮಾರ ಬಡಾವಣೆಯ ಮೂರು ವರ್ಷ ಎರಡು ತಿಂಗಳು ವಯಸ್ಸಿನ ಬಾಲಕನ ಸಾಧನೆ ಕೇಳಿದರೆ ನಿಬ್ಬೆರಗಾಗುವುದು ಖಚಿತ.

ಚೆಸ್ ಬೋರ್ಡ್ ಮೇಲೆ 6ರ ಪೋರಿ ಶ್ರೀಯಾನಾ ಕಮಾಲ್..!ಚೆಸ್ ಬೋರ್ಡ್ ಮೇಲೆ 6ರ ಪೋರಿ ಶ್ರೀಯಾನಾ ಕಮಾಲ್..!

Davanagere Child All Set To Join Guinness World Record

ಇನ್ನು ತೊದಲು ನುಡಿಯುವ ವಯಸ್ಸಿನಲ್ಲಿ ಈತನ ಸ್ಮರಣ ಶಕ್ತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಜೊತೆಗೆ ಪ್ರಶ್ನೆ ಕೇಳಿದರೆ ಸಾಕು ಅರಳು ಹುರಿದಂತೆ ಪಟಪಟ ಅಂತಾ ಉತ್ತರ ನೀಡುವ ಅರಸು ಬಾಯಲ್ಲಿ ವಚನಗಳು ಸರಾಗವಾಗಿ ಹರಿದಾಡುತ್ತವೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಹಿರಿಯೂರಿನ ಪುಟ್ಟ ಪೋರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಹಿರಿಯೂರಿನ ಪುಟ್ಟ ಪೋರ

ಬಾಲಕನ ಸಾಧನೆ; ಬುಕ್ ಇಂಡಿಯಾ ಪ್ರಚಂಡ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಅರಸು ಗೆದ್ದಿದ್ದು, ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದಿದ್ದಾ‌ನೆ. ಕೊರೊನಾ ಹಿನ್ನೆಲೆಯಲ್ಲಿ ಝೂಮ್‌ನಲ್ಲಿ ಸ್ಪರ್ಧೆ ನಡೆಸಲಾಗಿದ್ದು, ಇದರಲ್ಲಿ ಜಯಭೇರಿ ಬಾರಿಸಿದ್ದಾನೆ.

‌ಈ ಮೂಲಕ ಅತಿ ಬುದ್ಧಿವಂತಿಕೆ ಇರುವ ಮಕ್ಕಳ ಸಾಲಿಗೆ ಸೇರಿರುವ ಅರಸು, ಗಿನ್ನಿಸ್ ರೆಕಾರ್ಡ್ ಆಯ್ಕೆ ಪ್ರಕ್ರಿಯೆಗೆ ಸೆಲೆಕ್ಟ್ ಆಗಿದ್ದಾನೆ. ನಾಲ್ಕನೇ ವರ್ಷಕ್ಕೆ ಅರಸು ಗಿನ್ನಿಸ್ ರೆಕಾರ್ಡ್‌ಗೆ ಸ್ಪರ್ಧೆ ಮಾಡಲಿದ್ದಾನೆ ಎನ್ನುತ್ತಾರೆ ಪ್ರದೀಪ್ ಹಾಗೂ ಮಮತಾ.

ಸಾವಿರಾರು ಸಾಮಾನ್ಯ ಜ್ಞಾನದ ಪ್ರಶ್ನೆಗಳು, ಭಾರತದ ನಕ್ಷೆ, ವಚನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಳುತ್ತಿದ್ದಂತೆಯೇ ಸರಿಯಾದ ಉತ್ತರ ನೀಡುವ ಜಾಣ್ಮೆ ಹೊಂದಿರುವ ಅರಸು, ಮೊದ ಮೊದಲು ಯಾರಾದರೂ ಮನೆಗೆ ಬಂದರೆ, ಹೋದ ಸ್ಥಳ ಸೇರಿದಂತೆ ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಂಡು ಹೇಳುತ್ತಿದ್ದ.

ಇದನ್ನು ಗಮನಿಸಿದ ಪೋಷಕರು ಆತನಿಗೆ ತರಬೇತಿ ನೀಡುತ್ತಾ ಹೋದರು. ಎರಡು ವರ್ಷದವನಿದ್ದಾಗಲೇ ಅರಸು ಜ್ಞಾನದ ಬಗ್ಗೆ ಅಚ್ಚರಿಗೊಳಗಾದ ಪ್ರದೀಪ್ ಹಾಗೂ ಮಮತಾ ಆತನಿಗೆ ಈಗ ಎಲ್ಲವನ್ನೂ ಹೇಳಿಕೊಟ್ಟಿದ್ದಾರೆ. ಭಾರತದ ನಕ್ಷೆ ತೋರಿಸಿದರೆ ಯಾವುದೇ ರಾಜ್ಯದ ಹೆಸರು ಹೇಳಿದರೆ ಥಟ್ಟನೇ ಗುರುತಿಸುತ್ತಾನೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹಾಗೂ ಭಾವಚಿತ್ರಗಳನ್ನು ಗುರುತಿಸುತ್ತಾನೆ. ಕಾಳಿಂಗ ಸರ್ಪ ಎಲ್ಲಿ ಜಾಸ್ತಿ ಇವೆ, ರಾಜಧಾನಿಗಳು, ಮಹಾನ್ ನಾಯಕರ ಹೆಸರು ಸೇರಿದಂತೆ ವಚನಗಳು ಈತನ ನಾಲಗೆಯಲ್ಲಿ ಸುಲಲಿತವಾಗಿ ಹರದಾಡುತ್ತದೆ.‌

Recommended Video

ತುಮಕೂರು ರಸ್ತೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ಡಿಕೆ ಶಿವಕುಮಾರ್ ಮಾಡಿದ ಸಹಾಯ ನೋಡಿ | Oneindia Kannada

"ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಅವಕಾಶ ಇದ್ದರೂ ಕೊರೊನಾ ಹಿನ್ನೆಲೆಯಲ್ಲಿ ಸಾಧ್ಯವಾಗುತ್ತಿಲ್ಲ. ನಾಲ್ಕು ವರ್ಷ ತುಂಬಿದ ಬಳಿಕ ಈ ಪ್ರಯತ್ನ ಮಾಡುತ್ತೇವೆ" ಎಂದು ಅರಸು ತಾಯಿ ಮಮತಾ ತಿಳಿಸಿದ್ದಾರೆ.

English summary
Arasu Davanagere based 3 year 2 months old child has drag the attention of people by his memory power. Child will join guinness world record after completing the 4 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X