ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ; ಬೆಂಗಳೂರು-ಬೀದರ್ ವಿಶೇಷ ರೈಲು, ದರಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02 : ದಸರಾ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲನ್ನು ಓಡಿಸುತ್ತಿದೆ. ಅಕ್ಟೋಬರ್ 4 ಮತ್ತು 7ರಂದು ವಿಶೇಷ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೀದರ್-ಬೆಂಗಳೂರು ನಡುವೆ 82661, 82662 ಸುವಿಧಾ ವಿಶೇಷ ರೈಲು ಸಂಚಾರ ನಡೆಸಲಿದೆ. ಬೆಂಗಳೂರಿನ ಯಲಹಂಕದಿಂದ ಬೀದರ್‌ಗೆ ರೈಲು ಸಂಚರಿಸಲಿದೆ.

ದಸರಾ 2019; ಕೆಎಸ್ಆರ್‌ಟಿಸಿಯಿಂದ 2500 ವಿಶೇಷ ಬಸ್ ದಸರಾ 2019; ಕೆಎಸ್ಆರ್‌ಟಿಸಿಯಿಂದ 2500 ವಿಶೇಷ ಬಸ್

ಬೀದರ್‌ನಿಂದ ಯಲಹಂಕಕ್ಕೆ ಅಕ್ಟೋಬರ್ 5 ಮತ್ತು 8ರಂದು ವಿಶೇಷ ರೈಲು ಸಂಚಾರ ನಡೆಸಲಿದೆ. ಅಕ್ಟೋಬರ್ 4 ರಂದು ವಿಶೇಷ ರೈಲು ಯಲಹಂಕದಿಂದ ಬೀದರ್‌ಗೆ ಪ್ರಯಾಣ ಬೆಳೆಸಲಿದೆ.

ಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿ ಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿ

Dasara Special Train Between Bengaluru And Bidar

ವೇಳಾಪಟ್ಟಿ : ಅಕ್ಟೋಬರ್ 4ರಂದು ಸಂಜೆ 5ಗಂಟೆಗೆ ಯಲಹಂಕದಿಂದ ಹೊರಡುವ ರೈಲು ರಾಯಚೂರು, ಯಾದಗಿರಿ, ವಾಡಿ, ಕಲಬುರಗಿ, ಹಮನಾಬಾದ್ ಮಾರ್ಗವಾಗಿ ಸಂಚರಿಸಿ ಮರುದಿನ ಬೆಳಗ್ಗೆ 8.30ಕ್ಕೆ ಬೀದರ್ ತಲುಪಲಿದೆ.

ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ

ಬೀದರ್‌ನಿಂದ ಅಕ್ಟೋಬರ್ 5ರಂದು ಸಂಜೆ 4ಗಂಟೆಗೆ ಬೀದರ್‌ನಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ.

ಈ ರೈಲಿನಲ್ಲಿ 3 ಎಸಿ ದರ್ಜೆಯ ದರ ಪ್ರತಿ ಪ್ರಯಾಣಿಕರಿಗೆ 2,510 ರೂ., ಸೆಕೆಂಡ್ ಕ್ಲಾಸ್ ಸ್ಲೀಪರ್ ದರ 1,100 ಇರುತ್ತದೆ. ಬೇಡಿಕೆ ಹೆಚ್ಚಾದರ ದರವೂ ಹೆಚ್ಚಾಗಲಿದೆ.

English summary
South Western Railway announced Dasara special train between Bengaluru and Bidar. Train will run on October 4 and 7, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X