ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಾತ್ತಾಪ ಪಡುತ್ತೀರಾ: 'ಜೋಡೆತ್ತು'ಗಳಿಗೆ ಕುಮಾರಸ್ವಾಮಿ ವಾರ್ನಿಂಗ್

|
Google Oneindia Kannada News

Recommended Video

ಚುನಾವಣೆ ಮುಗಿದ ಮೇಲೂ ಜೋಡೆತ್ತುಗಳಿಗೆ ವಾರ್ನಿಂಗ್ ಕೊಟ್ಟ ಕುಮಾರಣ್ಣ..! | Oneindia Kannada

ಹುಬ್ಬಳ್ಳಿ, ಏ 21: ಯಾರ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು, ನನ್ನ ವಿರುದ್ದ ಆರೋಪ ಮಾಡಿರುವ ಚಿತ್ರನಟರಾದ ದರ್ಶನ್ ಮತ್ತು ಯಶ್, ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಾ, ಮಂಡ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬಾರದೆಂದು ಏನೆಲ್ಲಾ ಷಡ್ಯಂತ್ರ ಮಾಡಲಾಗಿದೆ ಎನ್ನುವುದನ್ನು ಅರಿತಿದ್ದೇನೆ. ಏನೇ ಆಗಲಿ ನಿಖಿಲ್ ಗೆಲುವು ನಿಶ್ಚಿತ ಎಂದು ಕುಮಾರಸ್ವಾಮಿ ಭರವಸೆಯ ಮಾತನ್ನಾಡಿದ್ದಾರೆ.

ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದ ನಂತರ, ಏನೆಲ್ಲಾ ಆಗಿದೆ ಎನ್ನುವುದನ್ನು ತಿಳಿದಿದೆ. ದರ್ಶನ್ ಮತ್ತು ಯಶ್, ಚುನಾವಣಾ ಫಲಿತಾಂಶದ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ. ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Darshan and Yash will regret shortly for their words during in Mandya campaigning, CM Kumaraswamy

ಎರಡನೇ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಭಾನುವಾರ (ಏ21) ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ, ಕುಮಾರಸ್ವಾಮಿ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ವಿರುದ್ದ ಪ್ರಚಾರಕ್ಕೆ ನಿಂತರೆ, ರಿಸ್ಕ್ ಯಾಕೆ ಎಂದು ಚಿತ್ರೋದ್ಯಮದ ಬಹುತೇಕ ಕಲಾವಿದರು ತಮ್ಮ ಪಾಡಿಗೆ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರು. ಆ ಸಂದರ್ಭದಲ್ಲಿ ಚಿತ್ರೋದ್ಯಮದ ಮೈನ್ ಸ್ಟ್ರೀಂ ನಟರಲ್ಲಿ ಸುಮಲತಾ ಪರವಾಗಿ ನಿಂತವರು ದರ್ಶನ್ ಮತ್ತು ಯಶ್ ಎನ್ನುವ ಜೋಡೆತ್ತುಗಳು.

ನಿಖಿಲ್ ಗೆಲುವಿಗೆ 150 ಕೋಟಿ: ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು?ನಿಖಿಲ್ ಗೆಲುವಿಗೆ 150 ಕೋಟಿ: ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು?

ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಮುಖಂಡರು ಮತ್ತು ಸುಮಲತಾ, ದರ್ಶನ್, ಯಶ್ ನಡುವೆ ವಾಗ್ಯುದ್ದವೇ ನಡೆದಿತ್ತು. ಜೆಡಿಎಸ್ ಸಂಸದ, ಶಿವರಾಮೇಗೌಡ್ರಂತೂ, ಸುಮಲತಾ ಅವರ ಜಾತಿಯನ್ನೇ ಎಳೆದು ತಂದರು. ರೇವಣ್ಣ, ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಈಯಮ್ಮಂಗೆ ರಾಜಕೀಯ ಬೇಕಾ ಎನ್ನುವ ಮಾತು ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು.

English summary
Kannada actor Darshan and Yash will regret shortly for their words during in Mandya loksabha election campaigning, CM Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X