ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ ಹಿಂದಿಕ್ಕಿದ್ದಕ್ಕೆ ಮರಕ್ಕೆ ಕಟ್ಟಿ ಥಳಿಸಿದ ಸವರ್ಣೀಯರು: ಕೋಲಾರದಲ್ಲಿ ದಲಿತ ಯುವಕ ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 02: ಬೈಕ್‌ ಹಿಂದಿಕ್ಕಿದ್ದಾನೆ ಎಂಬ ಕಾರಣಕ್ಕೆ ದಲಿತ ಯುವಕನೊಬ್ಬನನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದ ಯುವಕರು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಪೆತ್ತಾಂಡ್ಲಹಳ್ಳಿಯಲ್ಲಿ ನಡೆದಿದೆ. ದುರಂತವೆಂದರೆ, ಅವಮಾನಕ್ಕೊಳಗಾದ ಪರಿಶಿಷ್ಟ ಜಾತಿಗೆ ಸೇರಿದ ಯುವಕ ಬೇವ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿಗಳು ದಲಿತ ಯುವಕನನ್ನು ಥಳಿಸಿದ್ದಲ್ಲದೇ, ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..

ಚಿತ್ರದುರ್ಗದಲ್ಲಿ ಸಿಎಂ ಬೆಂಗಾವಲು ವಾಹನ-ಬೈಕ್‌ ಡಿಕ್ಕಿ: ಇಬ್ಬರ ಸ್ಥಿತಿ ಗಂಭೀರಚಿತ್ರದುರ್ಗದಲ್ಲಿ ಸಿಎಂ ಬೆಂಗಾವಲು ವಾಹನ-ಬೈಕ್‌ ಡಿಕ್ಕಿ: ಇಬ್ಬರ ಸ್ಥಿತಿ ಗಂಭೀರ

ಆತ್ಮಹತ್ಯೆಗೆ ಶರಣಾದ ಯುವಕ ಬೇವಹಳ್ಳಿಯ ಉದಯ್‌ ಕಿರಣ್‌ ಎಂದು ತಿಳಿದುಬಂದಿದೆ. ಆತನನ್ನು ಮರಕ್ಕೆ ಕಟ್ಟಿ ಥಳಿಸಿದ ಆರೋಪಿಗಳನ್ನು ಸವರ್ಣೀಯ ಜಾತಿಗೆ (ಒಕ್ಕಲಿಗ ಸಮುದಾಯ) ಸೇರಿದವರೆಂದು ಗೊತ್ತಾಗಿದೆ. ಆರೋಪಿಗಳಾದ ಗೋಪಾಲಕೃಷ್ಣಪ್ಪ, ಶಿವರಾಜ್, ರಾಜು ಹಾಗೂ ಮುನಿವೆಂಕಟಪ್ಪ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Dalit youth commits suicide in Kolar after tying him to a tree and beating him for overtaking a bike

ಉದಯ್‌ ಕಿರಣ್‌ ಸೋದರ ಮಾವ ಬಿ.ಎಚ್‌.ನಾಗರಾಜ್‌ ಎಂಬುವವರು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಅವರಿಗೆ ತೀವ್ರ ಶೋಧ ನಡೆಸಲಾಗುತ್ತಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳನ್ನು ಅತಿ ಶೀಘ್ರದಲ್ಲೇ ಬಂಧಿಸಲಾಗುವುದು' ಎಂದು ನಂಗಲಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್‌ ಸಿಂಗ್‌ ತಿಳಿಸಿದ್ದಾರೆ.

Dalit youth commits suicide in Kolar after tying him to a tree and beating him for overtaking a bike

ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣ

ಪ್ರಕರಣದ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಬಿಜೆಪಿ ಆಡಳಿತದಲ್ಲಿ ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ಯಾವೊಬ್ಬ ನಾಯಕನೂ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ' ಎಂದು ಪ್ರಶ್ನಿಸಿದೆ.

English summary
An incident took place in Pettandlahalli of Kolar district where youths belonging to the Okkaliga community tied a Dalit youth to a tree and beat him up because he overtook a bike. Tragically, a disgraced Scheduled Caste youth commits suicide in Beva village. Information is available that the accused not only beat up the Dalit youth, but also used caste abuse,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X