ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಗೂಲಿ ಅವಧಿಯಲ್ಲಿ ನೌಕರರ ಗ್ರ್ಯಾಚುಟಿಗೆ ಅರ್ಹರೆಂದ ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಮೇ 22; ನೌಕರರು ದಿನಗೂಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯೂ ಗ್ರ್ಯಾಚುಟಿಗೆ ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ದಿನಗೂಲಿ ನೌಕರರ ಪ್ರಕರಣದಲ್ಲಿ ನಿಯಂತ್ರಣ ಪ್ರಾಕಾರ/ ಮೇಲ್ಮನವಿ ಪ್ರಾಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ. ಎಸ್. ಮುದ್ಗಲ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.

ಉದ್ಯೋಗಿಗಳಿಗೆ ಸಿಹಿ ಸುದ್ದಿ, ಗ್ರಾಚ್ಯುಟಿ ಅವಧಿ ಇಳಿಕೆ ಸಾಧ್ಯತೆ!ಉದ್ಯೋಗಿಗಳಿಗೆ ಸಿಹಿ ಸುದ್ದಿ, ಗ್ರಾಚ್ಯುಟಿ ಅವಧಿ ಇಳಿಕೆ ಸಾಧ್ಯತೆ!

ಕೋರ್ಟ್ ಆದೇಶವೇನು?; ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿದ್ದವರಿಗೆ ತಮ್ಮ ಸೇವೆ ಖಾಯಂ ಆಗುವವರೆಗಿನ ಅವಧಿ ಕೆಲಸಕ್ಕೂ ಗ್ರ್ಯಾಚುಟಿ ಪಡೆಯಲು ಅರ್ಹರು ಎಂದೂ ಆದೇಶ ನೀಡಲಾಗಿದೆ.

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

high court

ಅಲ್ಲದೆ, ಗ್ರ್ಯಾಚುಟಿ ಪಾವತಿ ಕಾಯಿದೆ 1972ರ ಅನ್ವಯ ಸಕ್ಷಮ ಪ್ರಾಕಾರ, ಗ್ರ್ಯಾಚುಟಿ ಪಾವತಿಸುವಂತೆ ಮಾಡಿದ್ದ ಆದೇಶವನ್ನು ರದ್ದುಗೊಳಿಸಲು ನ್ಯಾಯಪೀಠ ನಿರಾಕರಿಸಿದೆ.

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?

ಹಲವು ಮಂದಿ ಮಾಜಿ ಉದ್ಯೋಗಿಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಯಲ್ಲಿ ಸರ್ಕಾರಕ್ಕೆ ಯಾವುದೇ ಪರಿಹಾರ ನೀಡಲು ನಿರಾಕರಿಸಿರುವ ನ್ಯಾಯಪೀಠ, ಸರ್ಕಾರ ಪ್ರತಿವಾದಿಗಳ ಸೇವೆ ಖಾಯಂಗೊಳಿಸಿರುವ ಕುರಿತು ಯಾವುದೇ ತಕರಾರು ತೆಗೆದಿಲ್ಲ. ಜೊತೆಗೆ ನಿಯಮದಂತೆ ಆ ನೌಕರರರು ಗ್ರ್ಯಾಚುಟಿ ಪಾವತಿಗೆ ಅರ್ಹರು ಎಂದು ಹೇಳಿದೆ.

ನ್ಯಾಯಾಲಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಉದ್ಯೋಗಿಗಳು ಸೇವೆ ಕಾಯಂ ಆಗುವ ಮುನ್ನ ಸಲ್ಲಿಸಿದ್ದ ಸೇವೆಯ ಅವಧಿಗೂ ಗ್ರ್ಯಾಚುಟಿ ನೀಡಲೇಬೇಕಾಗುತ್ತದೆ ಎಂದು ಆದೇಶಿಸಿದೆ.

"ಕರ್ನಾಟಕ ನಾಗರಿಕ ಸೇವಾ ಕಾಯಿದೆ(ಕೆಸಿಎಸ್‌ಆರ್) ಪ್ರಾಧಿಕಾರ ಪ್ರತಿವಾದಿ ಉದ್ಯೋಗಿಗಳ ಸೇವೆಯನ್ನು ಕಾಯಂಗೊಳಿಸಲಾಗಿದೆ, ಅವರು ನಿವೃತ್ತರಾಗಿ ಪಿಂಚಣಿ ಮತ್ತು ಗ್ರ್ಯಾಚುಟಿಯನ್ನು ಪಡೆದಿದ್ದಾರೆ. ಆದರೆ ಉದ್ಯೋಗಿಗಳಿಗೆ ಸೇವೆ ಕಾಯಂ ಆದ ನಂತರದ ಅವಗೆ ಮಾತ್ರ ಗ್ರ್ಯಾಚುಟಿ ಪಾವತಿಸಲಾಗಿದೆ. ಉದ್ಯೋಗಿಗಳು ದಿನಗೂಲಿ ನೌಕರರಾಗಿದ್ದ ಸಮಯವನ್ನು ಗ್ರ್ಯಾಚುಟಿಗೆ ಪರಿಗಣಿಸಿಲ್ಲ. ಅದನ್ನು ಒಪ್ಪಲಾಗದು" ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನಲೆ: ಕೆ. ವಿ. ಪುಟ್ಟರಾಜು ಮತ್ತಿತರರು ಸರಕಾರದ ನಾನಾ ಇಲಾಖೆಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರಿಗೆ ಕಟ್ ಆಫ್ ದಿನಾಂಕ ನೀಡಿ ಅವರುಗಳ ಸೇವೆಯನ್ನು ಖಾಯಂಗೊಳಿಸಲಾಯಿತು.

ಆ ಸಿಬ್ಬಂದಿ ಸೇವಾವಧಿ ಪೂರೈಸಿ ನಿವೃತ್ತರಾದರು. ಆನಂತರ ಅವರಿಗೆ ನಿಯಮದಂತೆ ಪಿಂಚಣಿ ಮತ್ತು ಗ್ರ್ಯಾಚುಟಿ ನೀಡಲಾಗಿದೆ. ಆದರೆ ಅವರಿಗೆ ದಿನಗೂಲಿ ನೌಕರರರಾಗಿ ದುಡಿದ ಅವಧಿಯನ್ನು ಗ್ರ್ಯಾಚುಟಿ ನೀಡಲು ಪರಿಗಣಿಸಿರಲಿಲ್ಲ. ಅದನ್ನು ಪ್ರಶ್ನಿಸಿ ಅವರು ಸಕ್ಷಮ ಪ್ರಾಧಿಕಾರದ ಮೊರೆ ಹೋಗಿದ್ದರು. ಪ್ರಾಧಿಕಾರ ಅವರಿಗೆ ಸೇವೆ ಖಾಯಂ ಆಗುವ ಮುನ್ನ ಸಲ್ಲಿಸಿದ್ದ ಅವಧಿಗೂ ಗ್ರ್ಯಾಚುಟಿ ನೀಡುವಂತೆ ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

English summary
Karnataka high court orderd that daily wage period of Employees also eligible for gratuity facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X