ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿ ಬೀಳಿಸುವಂತಿವೆ ಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವರದಿ!

|
Google Oneindia Kannada News

ಬೆಂಗಳೂರು, ಡಿ. 10: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಕುರಿತು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ವರದಿ ತಯಾರಿಸಿ ಇಲಾಖೆಗೆ ಸಲ್ಲಿಸಿದ್ದರು. ಆದರೆ ಆ ವರದಿ ಸೋರಿಕೆಯಾಗಿದ್ದರಿಂದ ತೀವ್ರ ಮುಜುಗುರಕ್ಕೆ ಒಳಗಾಗಿದ್ದ ಆಗಿನ ಸರ್ಕಾರ ಬಂಧಿಖಾನೆ ಇಲಾಖೆಯ ಡಿಐಜಿ ಆಗಿದ್ದ ಡಿ. ರೂಪಾ ಅವರನ್ನು ಬೆಂಗಳೂರು ನಗರದ ರಸ್ತೆ ಸುರಕ್ಷತೆ ಹಾಗೂ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಆ ವರ್ಗಾವಣೆ ರಾಷ್ಟ್ರಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಈಡಾಗಿತ್ತು.

ಬಳಿಕ ಕಳೆದ ಆಗಷ್ಟ್ ತಿಂಗಳಿನಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರೂಪಾ ಅವರು ಆಧಿಕಾರ ವಹಿಸಿಕೊಂಡಾಗ ಜೈಲಿನ ಅವ್ಯವಹಾರಗಳನ್ನು ಸಂಪೂರ್ಣವಾಗಿ ಮಟ್ಟಹಾಕುತ್ತಾರೆ ಎನ್ನಲಾಗಿತ್ತು. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಬಂಧಿಖಾನೆ ಇಲಾಖೆಯಲ್ಲಿ ಸುಧಾರಣೆ ತರಲು ರೂಪಾ ಅವರು ಪ್ರಯತ್ನಿಸಿದ್ದರು. ಹೀಗಾಗಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ಅಧಿಕಾರ ವಹಿಸಿಕೊಂಡಾಗ ಮಹತ್ವದ ಬದಲಾವಣೆಗಳನ್ನು ನಾಡಿನ ಜನತೆ ನಿರೀಕ್ಷಿಸಿದ್ದರು.

ಐಪಿಎಸ್ ಅಧಿಕಾರಿ ರೂಪಾ ಜತೆ ಪಟಾಕಿ ವಾಗ್ವಾದ; ಟ್ರೂ ಇಂಡಾಲಜಿ ಖಾತೆ ಬ್ಯಾನ್ ಐಪಿಎಸ್ ಅಧಿಕಾರಿ ರೂಪಾ ಜತೆ ಪಟಾಕಿ ವಾಗ್ವಾದ; ಟ್ರೂ ಇಂಡಾಲಜಿ ಖಾತೆ ಬ್ಯಾನ್

ಅದರಂತೆಯೆ ಇದೀಗ ಡಿ. ರೂಪಾ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ರಾಜ್ಯ ಗೃಹ ಇಲಾಖೆಯಿಂದ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿರುವ ಜೈಲುಗಳ ಸ್ಥಿತಿಗತಿಗಳನ್ನು ವಿವರಿಸಿದ್ದಾರೆ.

 ಆಂತರಿಕ ವ್ಯವಸ್ಥೆ ವರದಿ

ಆಂತರಿಕ ವ್ಯವಸ್ಥೆ ವರದಿ

ಬಂಧಿಖಾನೆ ಇಲಾಖೆಯಲ್ಲಿನ ಆಂತರಿಕ ನಿಯಂತ್ರಣ ವ್ಯವಸ್ಥೆಯ ಕುರಿತು ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿಯನ್ನು ಕೊಟ್ಟಿದೆ. ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರೂಪಾ ಅವರು ಕೊಟ್ಟಿರುವ ಆ ಅನುಸರಣಾ ವರದಿಯಲ್ಲಿ ಜೈಲುಗಳಲ್ಲಿನ ಸುರಕ್ಷತೆ ಹಾಗೂ ಭದ್ರತೆಯನ್ನು ವಿವರಿಸಲಾಗಿದ್ದು, ರಾಜ್ಯದಲ್ಲಿರುವ ಪ್ರಮುಖ ಕಾರಾಗೃಹಗಳಲ್ಲಿನ ವ್ಯವಸ್ಥೆಯನ್ನು ವರದಿಯಲ್ಲಿ ಸೇರಿಸಲಾಗಿದೆ.

ತಪ್ಪಿಸಿಕೊಂಡಿರುವ ಬಂಧಿಗಳು

ತಪ್ಪಿಸಿಕೊಂಡಿರುವ ಬಂಧಿಗಳು

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರೂಪಾ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕೊಟ್ಟಿರುವ ವರದಿಯಲ್ಲಿ ಕಳೆದ 2012ರ ಜನವರಿ 1 ರಿಂದ 2017ರ ಜುಲೈ 31ರ ವರೆಗೆ ವಿವಿಧ ಕಾರಾಗೃಹಗಳಿಂದ ಒಟ್ಟು 84 ಆರೋಪಿಗಳು ಪರಾರಿಯಾಗಿದ್ದರು. ಅವರಲ್ಲಿ 53 ಜನರನ್ನು ಮತ್ತೆ ಬಂಧಿಸಲಾಗಿದ್ದು, ಉಳಿದ 31 ಬಂಧಿಗಳನ್ನು ಮತ್ತೆ ಬಂಧಿಸಲಾಗಿಲ್ಲ.

ತಪ್ಪಿಸಿಕೊಂಡಿರುವ 31 ಬಂಧಿಗಳನ್ನು ಮರು ಬಂಧಿಸಲಾಗಿದೆಯೆ ಇಲ್ಲವೇ ಎಂಬ ವರದಿ ಕೊಡುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಸೂಚಿಸಿರುವುದು ವರದಿಯಲ್ಲಿದೆ. ಬಂಧಿಗಳು ತಪ್ಪಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿ ಸೇರಿದಂತೆ ಒಟ್ಟು 88 ಸಿಬ್ಬಂದಿ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ನಿಯಮಾವಳಿಗಳಂತೆ ವಿಚಾರಣೆ ನಡೆಯುತ್ತಿದೆ ಎಂದು ವರದಿಯಲ್ಲಿದೆ.

ಮೊಬೈಲ್ ಜಾಮರ್ ಉನ್ನತೀಕರಣ

ಮೊಬೈಲ್ ಜಾಮರ್ ಉನ್ನತೀಕರಣ

ಬೆಂಗಳೂರು, ಮೈಸೂರು, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಕೇಂದ್ರ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ವ್ಯವಸ್ಥೆಯನ್ನು ಉನ್ನತೀಕರಣ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯ 4ಜಿ ನೆಟ್‌ವರ್ಕ್‌ ಬಳಕೆಯಲ್ಲಿ ಇರುವುದರಿಂದ 3ಜಿ ನೆಟ್‌ವರ್ಕ್‌ ತಡೆಯಲು ಹಾಕಿರುವ ಮೊಬೈಲ್‌ ಜಾಮರ್‌ಗಳು ಸರಿಯಾಗಿ ಮೊಬೈಲ್‌ ನೆಟ್‌ವರ್ಕ್‌ ನಿಯಂತ್ರಣ ಮಾಡುತ್ತಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರು ಜಿಲ್ಲಾ ಕೇಂದ್ರ ಕಾರಾಗೃಹಗಳಲ್ಲಿನ ಒಟ್ಟು 66 ಮೊಬೈಲ್ ಜಾಮರ್‌ಗಳನ್ನು 3ಜಿ ಯಿಂದ 4ಜಿ ವ್ಯವಸ್ಥೆಗೆ ಉನ್ನತೀಕರಿಸಲು 3 ವರ್ಷಗಳ ನಿರ್ವಹಣೆ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಕೇಂದ್ರ ಸಚಿವವಾಲಯದಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಎಂಬುದು ವರದಿಯಲ್ಲಿದೆ.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada
ಅಧಿಕಾರಿಗಳ ಕರ್ತವ್ಯಲೋಪ

ಅಧಿಕಾರಿಗಳ ಕರ್ತವ್ಯಲೋಪ

ಮಾದಕ ವಸ್ತುಗಳು (ಹೆಚ್ಚಾಗಿ ಗಾಂಜಾ), ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಕಾರಾಗೃಹದ ಒಳಗೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಕಳೆದ 8 ವರ್ಷಗಳಲ್ಲಿ ಇದರಲ್ಲಿ ವಿಫಲರಾಗಿ ಕರ್ತವ್ಯಲೋಪ ಎಸಗಿದ್ದ 38 ಅಧಿಕಾರಿಗಳಲ್ಲಿ 33 ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ.


ಆದರೆ ಯಾವ ಹಂತದ ಅಧಿಕಾರಿಗಳು ವಿಫಲರಾಗಿದ್ದಾರೆ? ಹಾಗೂ ಯಾವ ಶಿಸ್ತುಕ್ರಮ ಜರುಗಿಸಿಲ್ಲ ಎಂಬುದನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ಬಂಧಿಖಾನೆಗಳ ಸುರಕ್ಷೆತೆಗೆ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

English summary
Principal Secretary to Home Department D Roopa submitted a report on Status of Central Prisons in the State to the Assembly's Public Accounting Committee. Know more about the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X