ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅನುಸರಿಸಿದ್ದು ನಿಜವಾ?

|
Google Oneindia Kannada News

ಬೆಂಗಳೂರು, ಮೇ 04: ರಾಜಕೀಯದಲ್ಲಿ ಸವಾಲುಗಳನ್ನು ಎದುರಿಸುವುದಲ್ಲ, ಸವಾಲುಗಳನ್ನು ಮೈಮೇಲೆ ಎಳೆದುಕೊಂಡರೆ ಮಾತ್ರ ಗಟ್ಟಿಯಾಗಿ ನೆಲೆ ನಿಲ್ಲಬಹುದು. ಆದರೆ ಹಾಗೆ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳಲು ಗಟ್ಟಿತನ ಬೇಕು. ಆ ಗಟ್ಟಿತನ ಕೇವಲ ಮಾತಿನಲ್ಲಿರದೇ ಕೃತಿಯಲ್ಲಿಯೂ ಇರಬೇಕು. ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಲ್ಲಿದೆ. ಆದರಿಂದಲೇ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ವಿಷಯ ಇದಷ್ಟೆ ಅಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೊದಲು ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಅಳೆದು ತೂಗಿ ನೇಮಕ ಮಾಡಿತು. ಒಂದು ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಬೇಡ ಎಂದು ರಾಜ್ಯ ಕಾಂಗ್ರೆಸ್‌ ಪಕ್ಷದ ಹಲವು ಪ್ರಭಾವಿಗಳು ಹೈಕಮಾಂಡ್‌ಗೆ ಮೇಲೆ ಸಾಕಷ್ಟು ಒತ್ತಡ ಹಾಕಿದ್ದರು.

ಲಾಕ್‌ಡೌನ್ ಮಧ್ಯೆ ಶಾಕ್: ನಾಳೆಯಿಂದ ದುಬಾರಿಯಾಗಲಿದೆ ಮದ್ಯಲಾಕ್‌ಡೌನ್ ಮಧ್ಯೆ ಶಾಕ್: ನಾಳೆಯಿಂದ ದುಬಾರಿಯಾಗಲಿದೆ ಮದ್ಯ

ಆದರೂ ಕಾಂಗ್ರೆಸ್‌ ಹೈಕಮಾಂಡ್ ಡಿಕೆಶಿ ಅವರ ಮೇಲೆ ಭರವಸೆಯಿಟ್ಟು ರಾಜ್ಯ ಕಾಂಗ್ರೆಸ್‌ ಸಾರಥಿಯನ್ನಾಗಿ ಮಾಡಿದ್ರು. ಇದೀಗ ಎಐಸಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಅನುಸರಿಸಿದ್ದಾರೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಪಕ್ಕಾ ಮಾಹಿತಿ.

ಸೂಕ್ಷ್ಮ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಏಟು ಕೊಟ್ಟ ಡಿಕೆಶಿ

ಸೂಕ್ಷ್ಮ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಏಟು ಕೊಟ್ಟ ಡಿಕೆಶಿ

ಇದೀಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದಲ್ಲಿಯೆ ಚರ್ಚೆಗಳಾಗುತ್ತಿವೆ. ಹೌದು ಅದಕ್ಕೆ ಕಾರಣವಾಗಿದ್ದು ನಿನ್ನೆ ರಾಜ್ಯದಲ್ಲಿ ನಡೆದಿದ್ದ ಬೆಳವಣಿಗೆಗಳು. ಕೊರೊನಾ ವೈರಸ್‌ನಿಂದಾದ ಲಾಕ್‌ಡೌನ್ ಸಂದರ್ಭದಲ್ಲಿ ಕೈಕಟ್ಟಿ ಕುಳಿತಿದ್ದ ವಿರೋಧ ಪಕ್ಷಗಳಿಗೆ ಕೆಲಸವೇ ಇಲ್ಲದಂತಾಗಿತ್ತು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಣ್ಣ ತಪ್ಪು ನಡೆ ಕೂಡ ವಿರೋಧ ಪಕ್ಷಗಳಿಗೆ ಕುತ್ತು ತಂದಿಡುವ ಸಾಧ್ಯತೆಗಳಿದ್ದವು. ಇಷ್ಟೊಂದು ಸೂಕ್ಷ್ಮ ಪರಿಸ್ಥಿತಿಯಲ್ಲಿ ಕಳೆದ ಒಂದೂವರೆ ತಿಂಗಳುಗಳಿಂದ ಸರ್ಕಾರಕ್ಕೆ ಬೆಂಬಲ ಕೊಡುವುದನ್ನು ಬಿಟ್ಟರೆ, ಟೀಕಿಸಲು ಆಗದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ನಾಯಕರಿದ್ದರು. ಆದರೆ ನಿನ್ನೆ ಸರ್ಕಾರದ ವೈಫಲ್ಯವನ್ನು ಡಿಕೆಶಿ ಸರಿಯಾಗಿಯೆ ಬಳಿಸಿಕೊಂಡರು. ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಜನರು ಮಾತನಾಡುವಂತೆ ಮಾಡುವಲ್ಲಿ ಡಿಕೆಶಿ ಸಫಲರಾದ್ರು.

ಉಚಿತ ಸಾರಿಗೆ ವ್ಯವಸ್ಥೆ ಮಾಡಲು ಕೋಟಿ ರೂ. ಚೆಕ್

ಉಚಿತ ಸಾರಿಗೆ ವ್ಯವಸ್ಥೆ ಮಾಡಲು ಕೋಟಿ ರೂ. ಚೆಕ್

ಕಳೆದ 40 ದಿಗಳಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂಧಿಯಾಗಿದ್ದ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಮೆಜೆಸ್ಟಿಕ್ ಬಸ್‌ನಿಲ್ದಾಣಕ್ಕೆ ಬಂದಿದ್ದರು. ಮೊದಲೇ ಹೈರಾಣಾಗಿದ್ದ ಕಾರ್ಮಿಕರಿಂದ ಹೆಚ್ಚಿನ ದರ ವಸೂಲಿಗೆ ಕೆಎಸ್‌ಆರ್‌ಟಿಸಿ ಮುಂದಾಗಿತ್ತು. ಒಟ್ಟಾರೆ ಸಾರಿಗೆ ವ್ಯವಸ್ಥೆಯ ಅವ್ಯವಸ್ಥೆಯಿಂದ ವಲಸೆ ಕಾರ್ಮಿಕರು ಮೆಜೆಸ್ಟಿಕ್ ಬಸ್‌ನಿಲ್ದಾಣದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಇಡೀ ರಾತ್ರಿ ಕಳೆದಿದ್ದ ಕಾರ್ಮಿಕರ ಬವಣೆಯನ್ನು ಮಾದ್ಯಮಗಳು ಜನರಿಗೆ ಮನದಟ್ಟು ತಲುಪಿಸಿದ್ದವು.

ಇದೇ ಸಂದರ್ಭದಲ್ಲಿ ಕೈಯಲ್ಲಿ ಒಂದು ಕೋಟಿ ರೂ.ಗಳ ಚೆಕ್‌ ಹಿಡಿದುಕೊಂಡು ಕೆಎಸ್‌ಆರ್‌ಟಿಸಿ ಎಂಡಿಯನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು. ಸರಿಯಾದ ಸಮಯದಲ್ಲಿ ಸರ್ಕಾರವನ್ನು ಕಾಂಗ್ರೆಸ್‌ ನಾಯಕರು ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಇದರಿಂದಾಗಿ ಸರ್ಕರಕ್ಕೆ ಸಹಜವಾಗಿಯೆ ಮುಜುಗರವಾಯಿತು. ಸಾರಿಗೆ ಸಚಿವರ ತಪ್ಪಿನಿಂದ ಇಡೀ ಸರ್ಕಾರದ ಮೇಲೆ ಕಾರ್ಮಿಕರಿಗೆ ಬೇರೆ ಭಾವನೆ ಬರುವಂತಾಯ್ತು. ತಕ್ಷಣ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಸ್ಥಿತಿ ಅವಲೋಕನ ಮಾಡಿದ್ರು, ಜೊತೆಗೆ ಕಾರ್ಮಿಕರಿಗೆ ಊಟದೊಂದಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟರು.

ಡಿಕೆಶಿ ಅನುಸರಿಸಿದ ಸೋನಿಯಾ ಗಾಂಧಿ

ಡಿಕೆಶಿ ಅನುಸರಿಸಿದ ಸೋನಿಯಾ ಗಾಂಧಿ

ರಾಜ್ಯದಲ್ಲಿ ಮಾಡಿದ್ದ ಕೆಲಸವನ್ನೇ ಇದೀಗ ಎಐಸಿಸಿ ಕೂಡ ಮಾಡಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈಗೊಂಡಿದ್ದ ನಿರ್ಧಾರವನ್ನೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನುಸರಿಸಿದ್ದಾರೆ. ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ ಕಲ್ಪಿಸುವಂತೆ ಕೆಪಿಸಿಸಿ ಆಗ್ರಹಿಸಿತ್ತು. ಆದರೆ ಸರ್ಕಾರ ದರ ನಿಗದಿ ಮಾಡಿದ ತಕ್ಷಣ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ಕೆಪಿಸಿಸಿ ಮುಂದಾಗಿತ್ತು. ಇದಕ್ಕಾಗಿ ಒಂದು ಕೋಟಿ ರೂ.ಗಳ ಚೆಕ್‌ನ್ನು ಮುಂಗಡವಾಗಿ ಸರ್ಕಾರಕ್ಕೆ ಕೊಡಲು ಮುಂದಾಗಿತ್ತು. ಇದೀಗ ಅದನ್ನೇ ಎಐಸಿಸಿ ಕೂಡ ಅನುಸರಿಸುತ್ತಿದೆ.

ಲಾಕ್‌ಡೌನ್‌ನಿಂದ ದೇಶಾದ್ಯಂತ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ರೇಲ್ವೆ ಇಲಾಖೆ ಟಿಕೆಟ್ ದರ ನಿಗದಿ ಮಾಡಿತ್ತು. ಊಟ ಮಾಡುವುದೇ ದುಸ್ತರವಾಗಿದ್ದ ವಲಸೆ ಕಾರ್ಮಿಕರಿಗೆ ಹಣಕೊಟ್ಟು ಟಿಕೆಟ್ ಪಡೆದು ರೇಲ್ವೆ ಪ್ರಯಾಣ ಮಾಡುವುದು ಅಸಾಧ್ಯವಾಗಿತ್ತು. ಹೀಗಾಗಿ ಕರ್ನಾಟಕ ಕಾಂಗ್ರೆಸ್ ಮಾದರಿ ಅನುಸರಿಸಿದ ಎಐಸಿಸಿ ತಮ್ಮ ರಾಜ್ಯಗಳಿಗೆ ಮರಳುವ ಕಾರ್ಮಿಕರ ವೆಚ್ಚ ಭರಿಸುವ ಭರವಸೆ ಕೊಟ್ಟಿದೆ. ವಲಸೆ ಕಾರ್ಮಿಕರ ಎಲ್ಲ ವೆಚ್ಚವನ್ನು ಭರಿಸುವುದಾಗಿ ಸೋನಿಯಾ ಗಾಂಧಿ ಅವರು ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರೇರಣೆ ಡಿಕೆಶಿ ಎಂದರೂ ತಪ್ಪಾಗಲಿಕ್ಕಿಲ್ಲ.

ಹೈಕಮಾಂಡ್‌ಗಾಗಿ ಅಪಾಯ ಮೈಮೇಲೆ ಎಳೆದುಕೊಂಡಿದ್ದ

ಹೈಕಮಾಂಡ್‌ಗಾಗಿ ಅಪಾಯ ಮೈಮೇಲೆ ಎಳೆದುಕೊಂಡಿದ್ದ

ಇಡೀ ದೇಶದ ಕಾಂಗ್ರೆಸ್‌ ನಾಯಕರು ಎಳೆದುಕೊಳ್ಳಲು ಒಪ್ಪದ ಅಪಾಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಮೈಮೇಲೆ ಎಳದುಕೊಂಡಿದ್ದರು. ಹೌದು 2017ರಲ್ಲಿ ಡಿಕೆಶಿ ಅವರು ಗುಜರಾತ್‌ ರಾಜ್ಯದ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದರು. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯಬಹುದು ಎಂಬ ಭೀತಿಯಿಂದ ಗುಜರಾತ್ ನ ಶಾಸಕರಿಗೆ ರಾಜ್ಯದಲ್ಲಿ ರಕ್ಷಣೆ ನೀಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಅವರಿಗೆ ನೀಡಿತ್ತು.

ಗುಜರಾತ್ ಶಾಸಕರು ಈಗಲ್ಟನ್ ರೆಸಾರ್ಟ್ ಗೆ ಬಂದಿಳಿದ ಮಾರನೇ ದಿನವೇ ಡಿ. ಕೆ. ಶಿವಕುಮಾರ್ ಅವರ ನಿವಾಸ, ಈಗಲ್ಟನ್ ರೆಸಾರ್ಟ್, ದಿಲ್ಲಿಯ ಫ್ಲಾಟ್ ಸೇರಿದಂತೆ ಹತ್ತಾರು ಕಡೆ ಏಕಕಾಲಕ್ಕೆ ಐಟಿ ದಾಳಿ ನಡೆದಿತ್ತು. ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕೇ ಐಟಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಆದ್ರೆ, ದೇಶದ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಲು ಒಂದೇ ದಿನದಲ್ಲಿ ತಯಾರಿ ಮಾಡಲು ಸಾಧ್ಯವಿಲ್ಲ, ಇದು ರಾಜಕೀಯ ಪ್ರೇರಿತ ದಾಳಿಯಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಯಾವುದೇ ನಾಯಕರು ಅಪಾಯ ಮೈಮೇಲೆ ಎಳೆದುಕೊಂಡಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರಿಂದಾಗಿಯೆ ಅಹಮ್ಮದ್ ಪಟೇಲ್ ಅವರು ರಾಜ್ಯಸಭೆ ಪ್ರವೇಶಿಸಿದ್ದರು.

English summary
KPCC President D.K. Shivakumar was followed by Sonia Gandhi on the issue of migrant workers. Sonia Gandhi has stated that she will bear all costs of migrant workers. The motivation for this is D.K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X