ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮೇ 22ರವರೆಗೂ ಮಳೆ, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

|
Google Oneindia Kannada News

ಬೆಂಗಳೂರು, ಮೇ 17: ರಾಜ್ಯದಲ್ಲಿ ಮೇ 22ರವರೆಗೂ ಮಳೆ ಮುಂದುವರೆಯಲಿದ್ದು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ರಾಯಚೂರಿನಲ್ಲಿ 34.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ತೌಕ್ತೆ ಚಂಡಮಾರುತದಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ.

ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆ

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ , ಕೋಲಾರ ಹಾಗೂ ಚಿತ್ರದುರ್ಗದಲ್ಲಿ ಒಣಹವೆ ಮುಂದುವರೆಯಲಿದೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಮಳೆಯಾಗಿರುವ ಪ್ರದೇಶಗಳು

ಮಳೆಯಾಗಿರುವ ಪ್ರದೇಶಗಳು

ಸಿದ್ದಾಪುರ, ಯಲ್ಲಾಪುರ, ಕಾರವಾರ, ಹಳಿಯಾಳ, ಮಂಚಿಕೆರೆ, ಬೆಳಗಾವಿ, ಸೋಮವಾರಪೇಟೆ, ಕಾರ್ಕಳ, ಸಂಕೇಶ್ವರ, ಕಿರವತ್ತಿ, ಕೊಟ್ಟಿಗೆಹಾರ, ಭಾಗಮಂಡಲ, ಹುಂಚದಕಟ್ಟೆ, ಮಾದಾಪುರ, ಕೊಟ್ಟಿಗೆಹಾರ, ಶ್ರೀರಂಗಪಟ್ಟಣ, ಸಾಗರ, ತಾಳಗುಪ್ಪ, ಭಟ್ಕಳ, ಮಂಕಿ, ಮಾಣಿ, ಊಡಬಿದಿರೆ, ಕಲಘಟಗಿ, ತ್ಯಾಗರ್ತಿ, ತೀರ್ಥಹಳ್ಳಿ, ಆನವಟ್ಟಿ, ಸೊರಬ, ಕಮ್ಮರಡಿ, ಕಳಸ, ಬಂಗಾರಪೇಟೆ, ಕೃಷ್ಣರಾಜಪೇಟೆಯಲ್ಲಿ ಮಳೆಯಾಗಿದೆ.

ರಾಜ್ಯದಲ್ಲಿ ಎಂಟು ಮಂದಿ ಸಾವು

ರಾಜ್ಯದಲ್ಲಿ ಎಂಟು ಮಂದಿ ಸಾವು

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಕೂಡಿದ ತೌಕ್ತೆ ಚಂಡಮಾರುತವು ಎಂಟು ಜನರನ್ನು ಬಲಿ ತೆಗೆದುಕೊಂಡಿದೆ.

ದುರ್ಘಟನೆಯೊಂದರಲ್ಲಿ ಮಂಗಳೂರು ಕರಾವಳಿಯ ಸಮುದ್ರದಲ್ಲಿ ಶನಿವಾರ ಅಲೆಯೆನ್ಸ್ ಹೆಸರಿನ ದೋಣಿ ಮುಳುಗಿದ್ದು, ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರ ಮೂವರು ನಾಪತ್ತೆಯಾಗಿದ್ದಾರೆ.

ಕೋರಮಂಡಲ್‍ ಹೆಸರಿನ ದೋಣಿಯಲ್ಲಿದ್ದ 9 ಜನರ ರಕ್ಷಣೆಗಾಗಿ ಸೋಮವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಆಗಮಿಸಿತ್ತು. ಈ ದೋಣಿ ಮುಲ್ಕಿ ಕರಾವಳಿಯಿಂದ ನಾಲ್ಕು ಮೈಲು ದೂರದಲ್ಲಿ ಸಮುದ್ರದೊಳಗೆ ಬಂಡೆಗಳಲ್ಲಿ ಸಿಲುಕಿಕೊಂಡಿತ್ತು ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಸೋಮವಾರ ಆರಂಭವಾಗಿದೆ. ಕರಾವಳಿ ರಕ್ಷಣಾ ಪಡೆಯ ಐಎನ್‍ಎಸ್‍ ವರಹಾ ನೌಕೆ ಮುಲ್ಕಿ ಬಂಡೆಗಳಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸಲಾಗುತ್ತಿದೆ.ಚಿವರು ಹೇಳಿದ್ದಾರೆ.

ಹಲವು ಮನೆಗಳಿಗೆ ಹಾನಿ

ಹಲವು ಮನೆಗಳಿಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಕಳೆದ 24 ತಾಸಿನಲ್ಲಿ 14 ಮನೆಗಳು ಹಾನಿಗೊಂಡಿದ್ದು, 108 ಮನೆಗಳು ಭಾಗಶಃ ಹಾನಿಗೊಂಡಿವೆ. ತಗ್ಗು ಪ್ರದೇಶಗಳ 380 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.ಈ ಕೇಂದ್ರಗಳಲ್ಲಿ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಯಾರೊಬ್ಬರಿಗಾದರೂ ಕೋವಿಡ್ ಸೋಂಕು ದೃಢಪಟ್ಟರೆ ಅಂತವರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬೆಂಗಳೂರು ಹವಾಮಾನ ವರದಿ

ಬೆಂಗಳೂರು ಹವಾಮಾನ ವರದಿ

ಬೆಂಗಳೂರಲ್ಲಿ ಮೋಡಕವಿದ ವಾತಾವರಣವಿದ್ದು 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 29.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ,19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ , ಕೋಲಾರ ಹಾಗೂ ಚಿತ್ರದುರ್ಗದಲ್ಲಿ ಒಣಹವೆ ಮುಂದುವರೆಯಲಿದೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

Recommended Video

ಕೇರಳದಲ್ಲಿ ಮೀನುಗಾರರ ವರ್ಕ್ ಫ್ರಮ್ ಹೋಮ್ ಹೇಗಿದೆ ನೋಡಿ | Oneindia Kannada

English summary
Meteorological department predicted that, Cyclone Effect: Rainfall Will Continue Till May 22 In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X